ಜೆರುಸಲೇಮ್(ಇಸ್ರೇಲ್): ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಇತ್ತೀಚೆಗೆ ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು)ನ ಮುಖ್ಯಸ್ಥ ಜನರಲ್ ಸ್ಟಾಫ್ ಮತ್ತು ಹಿರಿಯ ಐಡಿಎಫ್ ಅಧಿಕಾರಿಗಳೊಂದಿಗೆ ಮುಂದಿನ ಯುದ್ಧ ಕಾರ್ಯತಂತ್ರದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
כחלק ממחויבותנו להשיב את תושבי הצפון לביתם בביטחון, לאחר שינוי המצב הביטחוני בגבול - קיימתי היום דיון חשיבה עם הרמטכ״ל וצמרת צה״ל באשר לצורך להרחיב את מטרות המלחמה ולשלב בהן משימה זו.
— יואב גלנט - Yoav Gallant (@yoavgallant) August 29, 2024
הדגשת הנושא במטרות המלחמה, לא תפחית כלל את מחויבותנו המוחלטת לפירוק החמאס והשבת החטופים לישראל. pic.twitter.com/EsszuzTKTm
ಇಸ್ರೇಲ್ನಲ್ಲಿ ಭದ್ರತೆಯಲ್ಲಾಗಿರುವ ಕೆಲ ಬದಲಾವಣೆಯ ಬಳಿಕ ಇಸ್ರೇಲ್‌ನ ಉತ್ತರ ಭಾಗದ ಜನರ ರಕ್ಷಣೆ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮಹತ್ವದ ಚರ್ಚೆ ನಡೆಸಲಾಯಿತು. ಸದ್ಯ ಇರುವ ಯುದ್ಧದ ತಂತ್ರಗಳಲ್ಲಿ ಬದಲಾವಣೆ ಹಾಗೂ ದೇಶದ ಜನರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಸಂಬಂಧ ಸಮಾಲೋಚಿಸಲಾಯಿತು. ಅಷ್ಟೇ ಅಲ್ಲ ಗಾಜಾದಲ್ಲಿ ಹಮಾಸ್ ಇರಿಸಿಕೊಂಡಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಇಸ್ರೇಲ್ಗೆ ಕರೆ ತರುವ ವಿಚಾರದ ಬಗ್ಗೆಯೂ ಐಡಿಎಫ್ ಮುಖ್ಯಸ್ಥರು ಮತ್ತು ಅಧಿಕಾರಿಗಳೊಂದಿಗೆ ಇಸ್ರೇಲ್ ರಕ್ಷಣಾ ಸಚಿವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಗಾಜಾದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ದಕ್ಷಿಣ ಭಾಗದ ಜನರನ್ನು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಲು ಅನುವು ಮಾಡಿಕೊಟ್ಟಿವೆ. ಅದರ ಜೊತೆಗೆ ಗಾಜಾದಲ್ಲಿರವ ಒತ್ತೆಯಾಳುಗಳನ್ನು ಮರಳಿ ಪಡೆಯಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಗ್ಯಾಲಂಟ್ ಹೇಳಿದ್ದಾರೆ. ಇಸ್ರೇಲ್‌ನ ಉತ್ತರಭಾಗದಲ್ಲಿರುವ ಜನರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ನಮ್ಮ ಮಿಷನ್ ಬಹಳಷ್ಟು ಸ್ಪಷ್ಟವಾಗಿದೆ. ಈ ಗುರಿಯನ್ನು ನಾವು ಸಾಧಿಸಲು ನಾವು ಬದ್ಧರಾಗಿದ್ದೇವೆ. ಹೇಗಾದರೂ ಮಾಡಿ ಇಸ್ರೇಲ್‌ನ ಉತ್ತರದಲ್ಲಿರುವ ಕುಟುಂಬಗಳನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗುವಂತೆ ಮಾಡಬೇಕಿದೆ. ಗಾಜಾದಲ್ಲಿ ಹಮಾಸ್ ನಾಶಗೊಳಿಸಿ, ಅವರು ಒತ್ತೆಯಾಳಾಗಿರಿಸಿಕೊಂಡಿರುವ ನಮ್ಮ ನಾಗರಿಕರನ್ನು ಸುರಕ್ಷಿವಾಗಿ ಕರೆದುಕೊಂಡು ಬರಬೇಕಿದೆ. ಈ ಬಗ್ಗೆ ನಮಗಿರುವ ಸಂಪೂರ್ಣ ಬದ್ಧತೆ ಒಂದಿಷ್ಟೂ ಕಡಿಮೆ ಆಗುವುದಿಲ್ಲ. ಒಂದು ಬಾರಿ ನಾವು ಈ ಪ್ರಸ್ತಾವನೆಯನ್ನು ರೂಪಿಸಿದರೆ, ನಾನು ಅದನ್ನು ಪ್ರಧಾನಿ ಮತ್ತು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.
קיימתי היום הערכת מצב מיוחדת לקראת פתיחת שנת הלימודים, יחד עם הרמטכ״ל רב - אלוף הרצי הלוי, מפקד פיקוד העורף האלוף רפי מילוא, בכירי צה״ל ומערכת הביטחון.
— יואב גלנט - Yoav Gallant (@yoavgallant) August 29, 2024
אישרתי את תוכנית צה״ל להיערכות מקיפה לקראת פתיחת שנת הלימודים בראשון לספטמבר ביישובי הדרום והצפון. נוסיף אמצעי מיגון, נתגבר את… pic.twitter.com/WHNrJGr0rk
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಗ್ಯಾಲಂಟ್, "ಗಡಿಯಲ್ಲಿನ ಭದ್ರತಾ ಸ್ಥಿತಿ - ಗತಿಯ ಬದಲಾವಣೆಯ ನಂತರ ಉತ್ತರದ ನಿವಾಸಿಗಳನ್ನು ಸುರಕ್ಷಿತವಾಗಿ ಅವರವರ ಮನೆಗಳಿಗೆ ಹಿಂದಿರುಗಿಸುವ ನಮ್ಮ ಬದ್ಧತೆಯ ಭಾಗವಾಗಿ ನಾನು ನಮ್ಮ ರಕ್ಷಣಾ ಪಡೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದೇನೆ. ಮತ್ತು ಯುದ್ಧದ ಗುರಿಗಳನ್ನು ವಿಸ್ತರಿಸುವ ಮತ್ತು ಈ ತಂತ್ರಗಳನ್ನು ಅವುಗಳಲ್ಲಿ ಸಂಯೋಜಿಸುವ ವಿಚಾರದಲ್ಲಿ ಇಸ್ರೇಲ್ ರಕ್ಷಣಾ ಪಡೆ ಅಗ್ರಸ್ಥಾನದಲ್ಲಿದೆ. ನಮ್ಮ ಯುದ್ಧದ ಗುರಿಗಳೊಂದಿಗೆ ಹಮಾಸ್ ಸಂಪೂರ್ಣ ನಿರ್ನಾಮ ಮಾಡುವ ನಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗೂ ಒಂದಿಷ್ಟೂ ಕಡಿಮೆಯಾಗುದಿಲ್ಲ" ಎಂದು ಸಂದೇಶದಲ್ಲಿ ಮತ್ತೆ ಮತ್ತೆ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ: ಹಮಾಸ್ ತಕ್ಷಣ ಬೇಷರತ್ತಾಗಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿ: ಭಾರತದ ಆಗ್ರಹ - release Israeli hostages