ETV Bharat / international

ಪಾಪ್​ ಸಂಗೀತಕ್ಕೆ ಕುಣಿಯುತ್ತಿದ್ದ ಇರಾಕ್​ನ ಟಿಕ್​ಟಾಕ್​ ಸ್ಟಾರ್​ ಓಂ ಫಹಾದ್‌ಗೆ ಗುಂಡಿಕ್ಕಿ​ ಹತ್ಯೆ - Iraqi TikTok Star Shot Dead - IRAQI TIKTOK STAR SHOT DEAD

ಇರಾಕ್​ನ ಧಾರ್ಮಿಕ ಕಟ್ಟಳೆಗಳನ್ನು ಮೀರಿ ಸೋಷಿಯಲ್​ ಮೀಡಿಯಾ ಸ್ಟಾರ್​ ಬೆಳೆದಿದ್ದ ಓಂ ಫಹಾದ್​ ಎಂಬಾಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಟಿಕ್​ಟಾಕ್​ ಸ್ಟಾರ್​ ಓಂ ಫಹಾದ್​ ಗುಂಡಿಕ್ಕಿ ಹತ್ಯೆ

author img

By ANI

Published : Apr 28, 2024, 10:27 AM IST

ಬಾಗ್ದಾದ್(ಇರಾಕ್​): ಇರಾಕ್​ನಲ್ಲಿ ಮತ್ತೊಬ್ಬ ಸೋಷಿಯಲ್​ ಮೀಡಿಯಾ ಸ್ಟಾರ್​ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೈನವಿರೇಳಿಸುವ ಪಾಪ್​ ಸಂಗೀತಕ್ಕೆ ನೃತ್ಯ ಮಾಡಿದ ಕಿರು ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಪ್ರಸಿದ್ಧಿ ಪಡೆದಿದ್ದ ಟಿಕ್​ಟಾಕ್​ ಸ್ಟಾರ್​ ಓಂ ಫಹಾದ್​ ಕೊಲೆಯಾದವರು. ಈ ಬಗ್ಗೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೇಂದ್ರ ಬಾಗ್ದಾದ್‌ನಲ್ಲಿರುವ ಆಕೆಯ ಮನೆಯ ಮುಂದೆಯೇ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಬೈಕ್​ನಲ್ಲಿ ಬಂದು ಕಾರಿನಲ್ಲಿ ಕುಳಿತಿದ್ದ ಓಂ ಫಹಾದ್​ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾವಳಿಯ ಎಲ್ಲ ದೃಶ್ಯಗಳು ಪಕ್ಕದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಧಾರ್ಮಿಕ, ಸಾಮಾಜಿಕ ಕಟ್ಟಳೆಗೆ ಕೊಲೆ: ಇರಾಕ್​ನಲ್ಲಿ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯವಿಲ್ಲ. ಸಾಮಾಜಿಕ ಕಟ್ಟಳೆಗಳೆಲ್ಲವನ್ನೂ ಮೀರಿ ಬದುಕುತ್ತಿದ್ದ ಓಂ ಫಹಾದ್​ರನ್ನು ಹಲವು ಬಾರಿ ಟಾರ್ಗೆಟ್​ ಮಾಡಲಾಗಿತ್ತು. ಖ್ಯಾತ ಪಾಪ್​ ಸಂಗೀತಕ್ಕೆ ಕುಣಿಯುತ್ತಿದ್ದ ಅವರು ಆ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಮಿಲಿಯನ್​ಗಟ್ಟಲೆ ಹಿಂಬಾಲಕರನ್ನು ಹೊಂದಿದ್ದು, ಸೋಷಿಯಲ್​ ಮೀಡಿಯಾದ ಸ್ಟಾರ್​ ಆಗಿದ್ದರು.

ಓಂ ಫಹಾದ್ ಅವರ ನಿಜವಾದ ಹೆಸರು ಘುಫ್ರಾನ್ ಸವಾದಿ. 2023ರಲ್ಲಿ ಆಕೆಯ ವಿಡಿಯೋಗಳು ಸಾಮಾಜಿಕ ಸಭ್ಯತೆ ಮೀರಿವೆ, ಅಸಭ್ಯವಾಗಿವೆ ಎಂದು ಪರಿಗಣಿಸಿದ್ದ ಇರಾಕ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಕೆಲವು ವೀಡಿಯೊಗಳು ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿವೆ.

ಇರಾಕ್​ನಲ್ಲಿ ಧಾರ್ಮಿಕ, ಸಾಮಾಜಿಕ ಕಟ್ಟಳೆಗಳು ಕಠಿಣವಾಗಿವೆ. ಇದಕ್ಕೂ ಮೊದಲು, 5 ಸೋಷಿಯಲ್​ ಮೀಡಿಯಾ ಸ್ಟಾರ್​ಗಳನ್ನು 2 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಇತರರ ವಿರುದ್ಧ ತನಿಖೆಗೂ ಸೂಚಿಸಲಾಗಿದೆ.

ಇದನ್ನೂ ಓದಿ: ಪಲ್ಟಿಯಾಗಿ ಮರವೇರಿದ ಕಾರು: ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮಹಿಳೆಯರು ಸಾವು - Indian women died

ETV Bharat Logo

Copyright © 2025 Ushodaya Enterprises Pvt. Ltd., All Rights Reserved.