ETV Bharat / international

ಅಂತಾರಾಷ್ಟ್ರೀಯ ಯೋಗ ದಿನ: ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವೇರ್‌ನಲ್ಲಿ ವಿದೇಶಿಯರ ಯೋಗಾಯೋಗ - International Day of Yoga 2024 - INTERNATIONAL DAY OF YOGA 2024

ಅಮೆರಿಕ ವಿವಿಧೆಡೆ ಅದ್ಧೂರಿಯಾಗಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ಕಾನ್ಸುಲೇಟ್ ಜನರಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿದೇಶಿಯರು ತುಂಬಾ ಉತ್ಸಾಹದಿಂದ ಯೋಗ ಪ್ರದರ್ಶನ ಮಾಡಿದರು.

TIMES SQUARE  INTERNATIONAL DAY OF YOGA  CONSULATE GENERAL OF INDIA
ವಿದೇಶಿಯರಿಂದ ಯೋಗ ಪ್ರದರ್ಶನ (ANI(Image Credit: X/@IndiainNewYork))
author img

By ETV Bharat Karnataka Team

Published : Jun 21, 2024, 8:50 AM IST

ನ್ಯೂಯಾರ್ಕ್ (ಅಮೆರಿಕ): ಅಂತಾರಾಷ್ಟ್ರೀಯ ಯೋಗ ದಿನದ ಮುನ್ನ, ನ್ಯೂಯಾರ್ಕ್ ನಗರದಲ್ಲಿ ಗುರುವಾರ ಟೈಮ್ಸ್ ಸ್ಕ್ವೇರ್‌ನಲ್ಲಿ ವಿದೇಶಿಯರು ತುಂಬಾ ಉತ್ಸಾಹದಂದ ಯೋಗ ಪ್ರದರ್ಶನ ಮಾಡಿದರು. ಟೈಮ್ಸ್ ಸ್ಕ್ವೇರ್‌ನಲ್ಲಿ ದಿನವಿಡೀ ನಡೆದ ಯೋಗದ ಆಚರಣೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

TIMES SQUARE  INTERNATIONAL DAY OF YOGA  CONSULATE GENERAL OF INDIA
ವಿದೇಶಿ ಯುವತಿಯರಿಂದ ಯೋಗ ಪ್ರದರ್ಶನ (ANI(Image Credit: X/@IndiainNewYork))

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ''ಟೈಮ್ಸ್ ಸ್ಕ್ವೇರ್ ಅಲೈಯನ್ಸ್ ಸಹಭಾಗಿತ್ವದಲ್ಲಿ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಜೂನ್‌ 20ರಂದು ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

'ಸಾಲ್ಸ್ಟಿಸ್ ಅಟ್ ಟೈಮ್ಸ್ ಸ್ಕ್ವೇರ್'ಯಲ್ಲಿ ಯೋಗಾಯೋಗ: ಯೋಗದ ದಿನವಿಡೀ ಆಚರಣೆಯನ್ನು 'ಸಾಲ್ಸ್ಟಿಸ್ ಅಟ್ ಟೈಮ್ಸ್ ಸ್ಕ್ವೇರ್' ಎಂದೂ ಕರೆಯುತ್ತಾರೆ. ಯೋಗ ಪ್ರದರ್ಶನಕ್ಕಾಗಿ ಏಳು ಅವಧಿಗಳನ್ನು ಒಳಗೊಂಡಿತ್ತು. ಇದರಲ್ಲಿ ರಾಷ್ಟ್ರೀಯತೆಯ ಸುಮಾರು 10,000 ಜನರು ಭಾಗವಹಿಸಿದರು. ನ್ಯೂಯಾರ್ಕ್ ನಗರ ಸೇರಿದಂತೆ ಅಮೆರಿಕದ ವಿವಿಧೆಡೆ ಜನರು ತುಂಬಾ ಉತ್ಸಾಹದಿಂದ ಯೋಗ ಪ್ರದರ್ಶಿಸಿದರು'' ಎಂದು ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದೆ.

ಅಮೆರಿಕದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ (ANI(Image Credit: X/@IndiainNewYork))

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಬಿನಯ ಪ್ರಧಾನ್ ಅವರು ಭಾಗವಹಿಸಿದರೆಲ್ಲರನ್ನು ಸ್ವಾಗತಿಸಿದರು. ದೈಹಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ಎರಡಕ್ಕೂ ಯೋಗದ ಪ್ರಯೋಜನಗಳನ್ನು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು. ಬಿನಯಾ ಪ್ರಧಾನ್ ಮಾತನಾಡಿ, "ಇಂದು ನಾವು ಟೈಮ್ಸ್ ಸ್ಕ್ವೇರ್‌ನಲ್ಲಿ ನಮ್ಮ ಆರ್​ಆರ್​ ಪಾಲುದಾರರಾದ ಟೈಮ್ಸ್ ಸ್ಕ್ವೇರ್ ಅಲೈಯನ್ಸ್ ಜೊತೆಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದೇವೆ. ನ್ಯೂಯಾರ್ಕ್‌ ಮತ್ತು USನ ಇತರ ವಿವಿಧ ಭಾಗಗಳಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಲಿದೆ ಎಂದು ನನಗೆ ಖಾತ್ರಿಯಿದೆ" ಎಂದು ಹೇಳಿದರು.

ಗಮನಸೆಳೆದ ಯೋಗ ಪ್ರದರ್ಶನ (ANI(Image Credit: X/@IndiainNewYork))

''ಭಾರತೀಯ ರಾಯಭಾರ ಕಚೇರಿಯ ವ್ಯಾಪ್ತಿಯಲ್ಲಿರುವ ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಮ್ಯಾಸಚೂಸೆಟ್ಸ್, ವರ್ಮೊಂಟ್, ಕನೆಕ್ಟಿಕಟ್ ಮುಂತಾದ ರಾಜ್ಯಗಳಲ್ಲಿ ಒಂದು ತಿಂಗಳ ಅವಧಿವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸುತ್ತಿದೆ. ಯೋಗ ಉತ್ಸಾಹಿಗಳು ಸಕ್ರಿಯ ಭಾಗವಹಿಸುತ್ತಿದ್ದಾರೆ" ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಪ್ರಕಟಣೆ ತಿಳಿಸಿದೆ.

ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವೇರ್‌ನಲ್ಲಿ ಯೋಗ ಪ್ರದರ್ಶನ (ANI(Image Credit: X/@IndiainNewYork))

ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ: ಈ ವರ್ಷ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತದೆ. ಡಿಸೆಂಬರ್ 2014 ರಲ್ಲಿ ವಿಶ್ವಸಂಸ್ಥೆಯು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಭಾರತವು ಪ್ರಾಯೋಗಿಕವಾಗಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. 'ಸಮ್ಮರ್ ಸೋಲ್ಟಿಸ್' (ಬೇಸಿಗೆಯ ಅಯನ ಸಂಕ್ರಾಂತಿ), ಉತ್ತರ ಗೋಳಾರ್ಧದಲ್ಲಿ ಈ ದಿನ ಹಗಲು ದೀರ್ಘವಾಗಿರುತ್ತದೆ.

ಸಾಮಾನ್ಯ ಸಭೆಯ 69ನೇ ಅಧಿವೇಶನದ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಈ ಪ್ರಸ್ತಾಪವನ್ನು ಮೊದಲು ಪರಿಚಯಿಸಿದರು. 2015 ರಿಂದ, ಯೋಗದ ಬಹುಮುಖಿ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಸಲುವಾಗಿ ಪ್ರಪಂಚದಾದ್ಯಂತ ಯೋಗದ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.

ವಾಷಿಂಗ್ಟನ್ ಡಿಸಿಯಲ್ಲಿ ಯೋಗ ದಿನ: ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ವಾಷಿಂಗ್ಟನ್ ಡಿಸಿಯಲ್ಲಿ 10ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನದ ಮೊದಲು ಯೋಗ ಸೆಷನ್​ ಆಯೋಜಿಸಿದೆ. ವಾಷಿಂಗ್ಟನ್ ಡಿಸಿಯ ದಿ ವಾರ್ಫ್‌ನಲ್ಲಿ ಗುರುವಾರ ಆಯೋಜಿಸಿದ್ದ ಯೋಗಾಭ್ಯಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉಪ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ಮಾತನಾಡಿ, ''ಭಾರತವು ಯೋಗವನ್ನು ಕೇಂದ್ರ ಹಂತಕ್ಕೆ ತಂದಿದೆ. ಈ ಕೇಂದ್ರ ಹಂತವನ್ನು ತರುವಲ್ಲಿ ಭಾರತವು ವಹಿಸಿದ ಪಾತ್ರ, ಇದನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಲು ಮತ್ತು ಯೋಗದ ಶಕ್ತಿಯನ್ನು ಗುರುತಿಸಲು ಮತ್ತು ಯೋಗವು ನಮ್ಮ ಜೀವನಕ್ಕೆ ಹೇಗೆ ಮೌಲ್ಯವನ್ನು ನೀಡುತ್ತದೆ ಎಂಬುದನ್ನು ಗುರುತಿಸಲು ನಾವು ಒಗ್ಗೂಡುವ ದಿನವನ್ನಾಗಿ ಮಾಡಿದ್ದೇವೆ. ಯೋಗ ಪುರಾತನ ಸಂಪ್ರದಾಯವಾಗಿದೆ. ಇದು 5000, 6000 ವರ್ಷಗಳ ಹಿಂದಿನ ಸ್ವಾಸ್ಥ್ಯ ಸಂಪ್ರದಾಯವಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ನೇಪಾಳದ ಪೋಖರಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ - International Day of Yoga 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.