ETV Bharat / international

ಉತ್ತರ ಶ್ರೀಲಂಕಾದ ಕೆಕೆಎಸ್ ಬಂದರು ಅಭಿವೃದ್ಧಿಗೆ 61.5 ಮಿಲಿಯನ್ ಡಾಲರ್ ನೀಡಿದ ಭಾರತ

author img

By ETV Bharat Karnataka Team

Published : Mar 20, 2024, 5:04 PM IST

ಉತ್ತರ ಶ್ರೀಲಂಕಾದ ಕಂಕೆಸಂತುರೈ ಬಂದರನ್ನು ಅಭಿವೃದ್ಧಿಪಡಿಸಲು ಭಾರತವು ಶ್ರೀಲಂಕಾಕ್ಕೆ 61.5 ಮಿಲಿಯನ್ ಡಾಲರ್ ನೀಡಿದೆ.

india-to-give-61-million-grant-to-develop-port-in-northern-sri-lanka

ನವದೆಹಲಿ: ಕಂಕೆಸಂತುರೈ (ಕೆಕೆಎಸ್) ಬಂದರನ್ನು ಅಭಿವೃದ್ಧಿಪಡಿಸಲು ಶ್ರೀಲಂಕಾಕ್ಕೆ 61.5 ಮಿಲಿಯನ್ ಡಾಲರ್ ಅನುದಾನ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಶ್ರೀಲಂಕಾದ ಬಂದರು, ಹಡಗು ಮತ್ತು ವಿಮಾನಯಾನ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ ಮತ್ತು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಸಂತೋಷ್ ಝಾ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ವರದಿಯ ಪ್ರಕಾರ, ಉಬ್ಬರವಿಳಿತಗಳು, ಪ್ರವಾಹಗಳು, ಅಲೆಗಳು ಮತ್ತು ಚಂಡಮಾರುತದ ಉಲ್ಬಣಗಳಿಂದ ಹಡಗುಗಳನ್ನು ರಕ್ಷಿಸಲು ಬ್ರೇಕ್ ವಾಟರ್ ಅಥವಾ ಪರ್ಮನೆಂಟ್​ ಸ್ಟ್ರಕ್ಚರ್ ​ರೂಪಿಸಲಾಗುತ್ತದೆ. ಈ ಮೂಲಕ ಬಂದರಿನ 30 ಮೀಟರ್ ಆಳದಲ್ಲಿ ಹೂಳೆತ್ತಲಾಗುತ್ತದೆ. ಇದರಿಂದ ದೊಡ್ಡ ಗಾತ್ರದ ಹಡಗುಗಳು ಅಲ್ಲಿ ನಿಲ್ಲಿಸಲು ಅನುವಾಗುತ್ತದೆ. ಚರ್ಚೆಯ ವೇಳೆ, ಭಾರತೀಯ ಹೈಕಮಿಷನರ್ ಉಭಯ ದೇಶಗಳ ನಡುವಿನ ಪ್ರಾದೇಶಿಕ ಸಹಕಾರವನ್ನು ವೃದ್ಧಿಸಲು ಭಾರತ ಹೊಂದಿರುವ ಬದ್ಧತಯನ್ನು ವಿವರಿಸಲಾಗಿದೆ. ಶ್ರೀಲಂಕಾಕ್ಕೆ ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಸಂಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದೆ. ಶ್ರೀಲಂಕಾ ಭಾರತೀಯ ಪ್ರವಾಸಿಗರಿಗೆ ಉತ್ತಮವಾದ ಪ್ರವಾಸಿತಾಣ ಎಂದೂ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತೀಯ ಪ್ರವಾಸಿಗರ ಅನುಕೂಲಕ್ಕೆ ಟರ್ಮಿನಲ್: ಶ್ರೀಲಂಕಾ ಸಚಿವ ಸಿರಿಪಾಲ ಡಿ ಸಿಲ್ವಾ ಪ್ರತಿಕ್ರಿಯಿಸಿ, ವಾಯುಯಾನ ಮತ್ತು ಹಡಗು ಕ್ಷೇತ್ರಗಳಲ್ಲಿ ಭಾರತ ಸರ್ಕಾರ ನೀಡಿದ ಬೆಂಬಲಕ್ಕಾಗಿ ಶ್ರೀಲಂಕಾ ಸರ್ಕಾರ ಮತ್ತು ತಮ್ಮ ಸಚಿವಾಲಯದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಚೆನ್ನೈ ಮತ್ತು ಜಾಫ್ನಾ ನಡುವೆ ವಿಮಾನಗಳ ಪ್ರಾರಂಭವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ಭಾರತೀಯ ಪ್ರವಾಸಿಗರ ಅನುಕೂಲಕ್ಕಾಗಿ ಬಂದರಿನಲ್ಲಿ ಎಸ್ಎಲ್ಆರ್ 600 ಮಿಲಿಯನ್ ವೆಚ್ಚದ ಹೊಸ ಟರ್ಮಿನಲ್ ಅನ್ನು ಸಹ ನಿರ್ಮಿಸಲಾಗುವುದು. ಕಳೆದ ಒಂಬತ್ತು ತಿಂಗಳಲ್ಲಿ, ಗಮನಾರ್ಹ ಸಂಖ್ಯೆಯ ಭಾರತೀಯ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಕೆಕೆಎಸ್ ಬಂದರು ಸುಮಾರು 16 ಎಕರೆ ವ್ಯಾಪಿಸಿದೆ. ಈ ಬಂದರು ಭಾರತದ ಪಾಂಡಿಚೆರಿಯ ಕಾರೈಕಲ್ ಬಂದರಿನಿಂದ 56 ನಾಟಿಕಲ್ ಮೈಲಿ ದೂರದಲ್ಲಿದೆ. ಭೂಮಾರ್ಗದ ಪ್ರಯಾಣದ ವಿಷಯಕ್ಕೆ ಬಂದಾಗ, ಬಂದರು ಮತ್ತು ಹತ್ತಿರದ ಭೂಮಿಯ ನಡುವಿನ ಅಂತರವು ಸರಿಸುಮಾರು 23 ಕಿ.ಮೀ ಆಗಿದೆ. ಶ್ರೀಮಂತ ಮತ್ತು ಸುದೀರ್ಘ ಇತಿಹಾಸವನ್ನು ಹೊಂದಿರುವ ಕೆಕೆಎಸ್ ಬಂದರು, 1950 ರಲ್ಲಿ ಕಂಕೆಸಂತುರೈನಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಯೊಂದಿಗೆ ವಾಣಿಜ್ಯ ಬಂದರಾಗಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು ಎಂದು ಶ್ರೀಲಂಕಾ ಬಂದರು ಪ್ರಾಧಿಕಾರ (ಎಸ್ಎಲ್​ಪಿಎ) ತಿಳಿಸಿದೆ.

ಒಂದು ಕಾಲದಲ್ಲಿ ಶ್ರೀಲಂಕಾ ನೌಕಾಪಡೆ ನಿಯಂತ್ರಣದಲ್ಲಿದ್ದ ಈ ಬಂದರು, ಅಂತರ್ಯುದ್ಧದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿತು. ಬಂದರಿನ ಪ್ರಾಮುಖ್ಯತೆಯನ್ನು ಗುರುತಿಸಿದ ಶ್ರೀಲಂಕಾ ಸರ್ಕಾರವು ಇದನ್ನು ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸಿ ಬಂದರಾಗಿ ಪರಿವರ್ತಿಸುವ ನಿರ್ಧಾರವನ್ನು ತೆಗೆದುಕೊಂಡಿತು. 400 ಮಿಲಿಯನ್ ಎಸ್ಎಲ್ಆರ್ ಹೂಡಿಕೆಯೊಂದಿಗೆ, ಶ್ರೀಲಂಕಾ ಮತ್ತು ಭಾರತದ ನಡುವೆ ಪ್ರಯಾಣಿಕರ ಹಡಗುಗಳು ಮತ್ತು ಸರಕುಗಳ ಸಾಗಣೆಗೆ ಎಸ್ಎಲ್​ಪಿಎ ಒಡೆತನದ ಕೆಕೆಎಸ್ ಬಂದರು ಬಳಸಿಕೊಳ್ಳಲು ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ. ಪ್ರಯಾಣಿಕರ ಹಡಗು ಸೇವೆಯ ಪ್ರಾರಂಭವು ಎರಡೂ ದೇಶಗಳ ನಡುವೆ, ವಿಶೇಷವಾಗಿ ಉತ್ತರ ಶ್ರೀಲಂಕಾದಲ್ಲಿ ಸಾಮಾಜಿಕ - ಆರ್ಥಿಕ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ವೃದ್ಧಿಸುತ್ತದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾಕ್ಕೆ ಭಾರತದ ಹೊಸ ಹೈಕಮಿಷನರ್ ಆಗಿ ಸಂತೋಷ್ ಝಾ ಅವರು ಅಧಿಕಾರ ವಹಿಸಿಕೊಂಡ ನಂತರ, ಈ ವರ್ಷದ ಫೆಬ್ರವರಿಯಲ್ಲಿ ಕೆಕೆಎಸ್ ಬಂದರಿಗೆ ಭೇಟಿ ನಿಡಿದ್ದರು.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಸೆನೆಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.