ETV Bharat / international

'ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು': ಜೋ ಬೈಡನ್​ - Joe Biden statement in Oval Office - JOE BIDEN STATEMENT IN OVAL OFFICE

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಭಾನುವಾರ ಓವಲ್ ಕಚೇರಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ''ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು'' ಎಂದು ಬೈಡನ್​ ಸ್ಪಷ್ಟಪಡಿಸಿದ್ದಾರೆ.

Joe Biden statement  Oval Office  US President Joe Biden  Donald Trump
ಅಮೆರಿಕ ಅಧ್ಯಕ್ಷ ಜೋ ಬಿಡನ್ (AP)
author img

By PTI

Published : Jul 15, 2024, 7:29 AM IST

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಭಾನುವಾರ ಓವಲ್ ಕಚೇರಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ''ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ನಮ್ಮ ರಾಜಕೀಯದ ಬಿಸಿ ತಗ್ಗಿಸುವ ಅಗತ್ಯವಿದೆ'' ಎಂದು ಹೇಳಿದರು.

"ನಾವು ಶತ್ರುಗಳಲ್ಲ. ನಾವು ನೆರೆಹೊರೆಯವರು, ನಾವು ಪರಸ್ಪರ ಸ್ನೇಹಿತರು ಮತ್ತು ಸಹೋದ್ಯೋಗಿಗಳು, ವಿಶೇಷವಾಗಿ ನಾವು ಅಮೆರಿಕದ ನಾಗರಿಕರು. ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು" ಎಂದು ಬೈಡನ್ ಕರೆ ನೀಡಿದರು.

''ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಾಜಕೀಯ ಭಾವೋದ್ರೇಕಗಳು ಹೆಚ್ಚಾಗಬಹುದು. ಆದರೆ, ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು. ಯಾವುದೇ ರೀತಿಯ ಹಿಂಸೆಗೆ ಅಮೆರಿಕದಲ್ಲಿ ಜಾಗವಿಲ್ಲ. ಈ ಹಿಂಸಾಚಾರವನ್ನು ಸಾಮಾನ್ಯೀಕರಿಸಲು ನಾವು ಅನುಮತಿಸುವುದಿಲ್ಲ. ಅಮೆರಿಕದಲ್ಲಿ ಇಂತಹ ರಾಜಕೀಯ ಹಿಂಸಾಚಾರಕ್ಕೆ ಅವಕಾಶವಿಲ್ಲ'' ಎಂದು ಬೈಡನ್​ ಹೇಳಿದರು.

ಅಮೆರಿಕದ ಅಧ್ಯಕ್ಷರು ಓವಲ್ ಕಚೇರಿಯಿಂದ ಮಾತನಾಡುವುದು ತುಂಬಾ ವಿರಳ. ಬೈಡನ್ ಅಧ್ಯಕ್ಷರಾದ ನಂತರ ಓವಲ್ ಕಚೇರಿಯಿಂದ ಭಾಷಣ ಮಾಡುತ್ತಿರುವುದು ಮೂರನೇ ಬಾರಿ. ಈ ಹಿಂದೆ ಟ್ರಂಪ್ ಎರಡು ಬಾರಿ ಮತ್ತು ಒಬಾಮಾ ಮೂರು ಬಾರಿ ಮಾತನಾಡಿದ್ದರು. ಭಾನುವಾರ ಓವಲ್ ಕಚೇರಿಯಿಂದ ಸುಮಾರು ಐದು ನಿಮಿಷಗಳ ಕಾಲ ಬೈಡನ್ ಮಾತನಾಡಿದರು.

''ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶವು ಸೋಮವಾರ ಮಿಲ್ವಾಕೀಯಲ್ಲಿ ಪ್ರಾರಂಭವಾಗುತ್ತಿದೆ. ಜೊತೆಗೆ ಎರಡೂ ಪಕ್ಷದ ಕಡೆಗಳಲ್ಲಿ ಭಾವೋದ್ರೇಕಗಳು ಹೆಚ್ಚಾಗುತ್ತವೆ'' ಎಂದ ಅವರು, ವಿವೇಚನಾರಹಿತ ಶಕ್ತಿ ಮೇಲುಗೈ ಸಾಧಿಸಬಾರದು. ಸಮತೋಲಿತ ಪ್ರಜಾಪ್ರಭುತ್ವದ ಮೇಲೆ ನಮ್ಮ ರಾಷ್ಟ್ರವನ್ನು ಸ್ಥಾಪಿಸಲಾಗಿದೆ. ಅಮೆರಿಕದ ಪ್ರಜಾಪ್ರಭುತ್ವದಲ್ಲಿ ವಾದಗಳನ್ನು ಆರೋಗ್ಯಕರ ರೀತಿಯಲ್ಲಿ ನಡೆಯುತ್ತಿವೆ. ಅಮೆರಿಕನ್ ಪ್ರಜಾಪ್ರಭುತ್ವದಲ್ಲಿ ಕಾನೂನಿನ ನಿಯಮವನ್ನು ಗೌರವಿಸಲಾಗುತ್ತದೆ. ಅಲ್ಲಿ ಸಭ್ಯತೆ, ಘನತೆ, ನ್ಯಾಯಕ್ಕೆ ಬೆಲೆಯಿದೆ, ಕೇವಲ ವಿಲಕ್ಷಣ ಕಲ್ಪನೆಗಳಲ್ಲ'' ಎಂದು ತಿಳಿಸಿದರು.

ಬೈಡನ್​ ಈ ಭಾಷಣಕ್ಕೂ ಮುಂಚೆ ನೀಡಿದ ಪ್ರತಿಕ್ರಿಯೆಯಲ್ಲಿ, ಡೊನಾಲ್ಡ್ ಟ್ರಂಪ್ ಅವರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿದರು. ಗಾಯಗೊಂಡಿರುವ ಟ್ರಂಪ್ ಅವರು ಶೀಘ್ರ ಗುಣಮುಖರಾಗಲಿ. ಪ್ರಕರಣದ ಕುರಿತು ಸ್ವತಂತ್ರವಾಗಿ ಭದ್ರತಾ ಪರಿಶೀಲನೆಗೆ ಆದೇಶಿಸುತ್ತಿದ್ದೇನೆ ಎಂದು ತಿಳಿಸಿದರು.

ಸಮಗ್ರ ತನಿಖೆಗೆ ಸೂಚನೆ: ಟ್ರಂಪ್ ಮೇಲಿನ ನಡೆದ ಗುಂಡಿ ದಾಳಿ ಕುರಿತು ಸಮಗ್ರ ತನಿಖೆ ನಡೆಸಲು ಭದ್ರತಾ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ಅಮೆರಿಕದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಬೇಕು. ಶೂಟರ್‌ನ ಉದ್ದೇಶಗಳು ಬಗ್ಗೆ ಊಹೆಗಳನ್ನು ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಬೈಡನ್​ ಪ್ರವಾಸ ರದ್ದು: ಅಮೆರಿಕ ಅಧ್ಯಕ್ಷರು ಸೋಮವಾರ ಟೆಕ್ಸಾಸ್‌ಗೆ ಯೋಜಿತ ಪ್ರವಾಸವನ್ನು ಮುಂದೂಡಿದರು. ಅವರು ಲಿಂಡನ್ ಬಿ. ಜಾನ್ಸನ್ ಅಧ್ಯಕ್ಷೀಯ ಗ್ರಂಥಾಲಯದಲ್ಲಿ ನಾಗರಿಕ ಹಕ್ಕುಗಳ ಕಾಯಿದೆಯ 60 ನೇ ವಾರ್ಷಿಕೋತ್ಸವದ ಕುರಿತು ಮಾತನಾಡಬೇಕಿತ್ತು. ಬೈಡನ್ ಮತ್ತು ಆಂಕರ್ ಲೆಸ್ಟರ್ ಹಾಲ್ಟ್ ನಡುವಿನ ಎನ್‌ಬಿಸಿ ನ್ಯೂಸ್ ಸಂದರ್ಶನವು ಆರಂಭದಲ್ಲಿ ಯೋಜಿಸಿದಂತೆ ಟೆಕ್ಸಾಸ್‌ನ ಬದಲಿಗೆ ವೈಟ್ ಹೌಸ್‌ನಲ್ಲಿ ನಡೆಯಲಿದೆ.

ಕಮಲಾ ಹ್ಯಾರಿಸ್ ಪ್ರತಿಕ್ರಿಯೆ: ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಖಂಡಿಸಿದ್ದಾರೆ. ''ಅಮೆರಿಕದಲ್ಲಿ ಯಾವುದೇ ರೀತಿಯ ಹಿಂಸೆಗೆ ಜಾಗವಿಲ್ಲ. ಗಾಯಗೊಂಡಿರುವ ಟ್ರಂಪ್ ಅವರು ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಘಟನೆಗೆ ತಕ್ಷಣವೇ ಎಚ್ಚೆತ್ತುಕೊಂಡು ಕ್ರಮವಹಿಸಿದ ಅಮೆರಿಕ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಅಧಿಕಾರಿಗಳ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಮೇಲೆ ಗುಂಡು ಹಾರಿಸಿದ ದಾಳಿಕೋರನ ಗುರುತು ಪತ್ತೆ: ಎಫ್‌ಬಿಐ ತನಿಖೆ ಚುರುಕು - Trump shooter identified

ETV Bharat Logo

Copyright © 2024 Ushodaya Enterprises Pvt. Ltd., All Rights Reserved.