ETV Bharat / international

ಗಾಜಾ-ಈಜಿಪ್ಟ್​ ಗಡಿಮಾರ್ಗದ ನಿಯಂತ್ರಣ ಪಡೆದ ಐಡಿಎಫ್: 20 ಸುರಂಗ ಪತ್ತೆ - IDF Control Gaza Egypt Border - IDF CONTROL GAZA EGYPT BORDER

ಗಾಜಾ ಮತ್ತು ಈಜಿಪ್ಟ್​​ ಗಡಿಯಲ್ಲಿನ ಸಂಪೂರ್ಣ ಪ್ರದೇಶವನ್ನು ಐಡಿಎಫ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

IDF takes control of Gaza Egypt border finds 20 tunnels
ಗಾಜಾ ಈಜಿಪ್ಟ್​ ಗಡಿಮಾರ್ಗದ ನಿಯಂತ್ರಣ ಪಡೆದ ಐಡಿಎಫ್ (IANS)
author img

By ETV Bharat Karnataka Team

Published : May 30, 2024, 1:23 PM IST

ಟೆಲ್ ಅವೀವ್: ಫಿಲಡೆಲ್ಫಿ ಪ್ರದೇಶ ಎಂದು ಕರೆಯಲ್ಪಡುವ ಗಾಜಾ-ಈಜಿಪ್ಟ್ ಗಡಿಯುದ್ದಕ್ಕೂ ಹಬ್ಬಿರುವ ಸಂಪೂರ್ಣ ಮಾರ್ಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಈ ಪ್ರದೇಶದಲ್ಲಿ ಗಡಿಯಾಚೆಯವರೆಗೆ ಹರಡಿರುವ, ಕಳ್ಳಸಾಗಣೆಗೆ ಬಳಸಲಾಗುವ 20 ಸುರಂಗಗಳು ಪತ್ತೆಯಾಗಿವೆ ಎಂದು ಮಿಲಿಟರಿ ತಿಳಿಸಿದೆ.

ಈ ಬಗ್ಗೆ ಬುಧವಾರ ರಾತ್ರಿ ಮಾತನಾಡಿದ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಗಡಿಯಲ್ಲಿ ಹಲವಾರು ರಾಕೆಟ್ ಲಾಂಚರ್​ಗಳು ಪತ್ತೆಯಾಗಿವೆ ಎಂದು ಹೇಳಿದರು. ಹೊಸದಾಗಿ ವಶಪಡಿಸಿಕೊಂಡ ಭೂಪ್ರದೇಶವು ಗಾಜಾ-ಈಜಿಪ್ಟ್ ಗಡಿಯುದ್ದಕ್ಕೂ 14 ಕಿ.ಮೀ ಉದ್ದವಿದೆ. ಹಮಾಸ್​ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಈ ಪ್ರದೇಶ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದರು.

ಪತ್ತೆಯಾದ 20 ಸುರಂಗಗಳ ಪೈಕಿ ಕೆಲವುಗಳ ಇರುವಿಕೆ ಮೊದಲೇ ತಿಳಿದಿತ್ತು. ಆದರೆ ಇದರಲ್ಲಿ ತಿಳಿಯದ ಅನೇಕ ಹೊಸ ಸುರಂಗಗಳೂ ಪತ್ತೆಯಾಗಿವೆ. ಸುರಂಗಗಳಿಗೆ ಪ್ರವೇಶ ಕಲ್ಪಿಸುವ 82 ಸುರಂಗ ಶಾಫ್ಟ್​ಗಳನ್ನು ಹೊಸದಾಗಿ ವಶಪಡಿಸಿಕೊಂಡ ಗಡಿ ಪ್ರದೇಶದಲ್ಲಿ ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ತನ್ನ ಪಡೆಗಳು ಕಾರಿಡಾರ್​ನ ಹೆಚ್ಚಿನ ಭಾಗವನ್ನು ಭೌತಿಕವಾಗಿ ನಿಯಂತ್ರಿಸುತ್ತಿವೆ ಮತ್ತು ತೀರಾ ಸಣ್ಣ ಭಾಗವನ್ನು ವೈಮಾನಿಕ ಕಣ್ಗಾವಲಿನ ಮೂಲಕ ನಿಯಂತ್ರಿಸಲಾಗುತ್ತಿದೆ ಎಂದು ಐಡಿಎಫ್ ಹೇಳಿದೆ. ಈಜಿಪ್ಟ್​ನ ಗಡಿಯೊಳಗೆ ಬೀಳಬಹುದೆಂಬ ಭಯದಿಂದ ಇಸ್ರೇಲ್ ಈ ದಿಕ್ಕಿನಲ್ಲಿ ರಾಕೆಟ್​ ಹಾರಿಸಲಾರದು ಎಂದು ತಿಳಿದಿದ್ದ ಹಮಾಸ್ ಭಯೋತ್ಪಾದಕರು ಈಜಿಪ್ಟ್​​ ಗಡಿಯುದ್ದಕ್ಕೂ ರಾಕೆಟ್​ ಲಾಂಚರ್​ಗಳನ್ನು ನಿಯೋಜಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಹಮಾಸ್ ಫಿಲಡೆಲ್ಫಿ ಪ್ರದೇಶವನ್ನು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ಬಳಸಿಕೊಂಡಿದೆ. ಈಜಿಪ್ಟ್​ನ ಗಡಿಯಿಂದ ಕೆಲವೇ ಮೀಟರ್​ಗಳ ದೂರದಲ್ಲಿ ಅದು ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಸ್ಥಾಪಿಸಿದೆ. ಇಲ್ಲಿ ನಾವು ದಾಳಿ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಹಮಾಸ್​ಗೆ ತಿಳಿದಿದೆ" ಎಂದು ಹಗರಿ ಹೇಳಿದರು.

ಸಿರಿಯಾ ಮೇಲೆ ಇಸ್ರೇಲ್ ದಾಳಿ: ಸಿರಿಯಾದ ಕೇಂದ್ರ ಪ್ರಾಂತ್ಯವಾದ ಹೋಮ್ಸ್​ನಲ್ಲಿನ ಹಿಜ್ಬುಲ್ಲಾ ಉಗ್ರರ ತಾಣಗಳ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇಸ್ರೇಲಿ ಕ್ಷಿಪಣಿಗಳು ಅಲ್-ಫುರ್ಕ್ಲುಸ್ ಪಟ್ಟಣದ ಬಳಿಯ ಕನಿಷ್ಠ ಒಂದು ಮಿಲಿಟರಿ ತಾಣದ ಮೇಲೆ ದಾಳಿ ನಡೆಸಿದ್ದು, ಸ್ಥಳದಿಂದ ದಟ್ಟವಾದ ಹೊಗೆ ಕಂಡು ಬಂದಿದೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ ಎಂದು ಬುಧವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಇಬ್ಬರು ಭಾರತೀಯ ಕೈದಿಗಳಿಗೆ ರಾಜತಾಂತ್ರಿಕರೊಂದಿಗೆ ಭೇಟಿಗೆ ಅವಕಾಶ - consular access to Indian prisoners

ETV Bharat Logo

Copyright © 2025 Ushodaya Enterprises Pvt. Ltd., All Rights Reserved.