Cloud Weight Elephant : ನಾವು ಆಕಾಶದತ್ತ ಮುಖ ಮಾಡಿ ನೋಡಿದರೆ ಚಲಿಸುವ ಸುಂದರ ಮೇಘಗಳು ನಮ್ಮನ್ನು ಸ್ವಲ್ಪ ಸಮಯದವರೆಗೆ ಕಟ್ಟಿ ಹಾಕುತ್ತವೆ. ಹತ್ತಿ ಚೆಂಡುಗಳಂತೆ, ಹಾಲಿನಂತೆ ಬಿಳಿಯಾಗಿ ಕಾಣುವ ಈ ಚಲಿಸುವ ಮೇಘಗಳು ತುಂಬಾ ಹಗುರವಾಗಿ ಇರುತ್ತವೆ ಅನಿಸುತ್ತೆ ಅಲ್ವಾ. ಆದರೆ ಅದು ನಿಜವಲ್ಲ. ಮೋಡಗಳು ಅಷ್ಟೊಂದು ಹಗುರವಾಗಿ ಇರುವುದಿಲ್ಲ. ಅವುಗಳು ಭಾರೀ ಗಾತ್ರದ ತೂಕ ಹೊಂದಿರುತ್ತವೆ ಎಂಬುದು ನಿಮಗೆ ತಿಳಿದಿದೆಯಾ?. ಅದೂ ಕೂಡ ನಾವು ಕೊಂಡೊಯ್ಯುವ ತೂಕದಷ್ಟು ಕಡಿಮೆಯೇನಲ್ಲ. ಆದರೂ ಮೋಡಗಳು ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಗಾಳಿಯಲ್ಲಿ ತೇಲುತ್ತಿರುತ್ತವೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ..
ಮೋಡವು ಚಿಕ್ಕದಲ್ಲ.. ಆಕಾಶದಲ್ಲಿ ಭಾರೀ ಗಾತ್ರದಲ್ಲಿ ಹರಡಿರುವಂತೆ ಕಾಣುತ್ತದೆ. ಅಷ್ಟೇ ಏಕೆ ಮೋಡ ಕವಿದಿದ್ದಾಗ ನಮ್ಮ ಮನೆ ಮತ್ತು ಅಕ್ಕಪಕ್ಕದಲ್ಲಿ ಮಾತ್ರ ಮಳೆ ಬೀಳುವುದಿಲ್ಲ. ಒಂದೊಂದು ಬಾರಿ ಇಡೀ ಜಿಲ್ಲೆಯಲ್ಲಿಯೂ ಮಳೆಯಾಗಬಹುದು ಅಥವಾ ಇಡೀ ರಾಜ್ಯದ ತುಂಬೆಲ್ಲಾ ಮಳೆ ಬೀಳಬಹುದು. ಅಂದರೆ ಮೋಡ ತುಂಬಾ ದೊಡ್ಡದಾಗಿರುತ್ತದೆ. ಆ ದೊಡ್ಡ ಮೋಡದ ತೂಕ ಲಕ್ಷ ಟನ್ಗಳವರೆಗೂ ತೂಗುತ್ತಿರಬಹುದೆಂದು ಹೇಳಲಾಗುತ್ತದೆ. ಮತ್ತು ಅಂತಹ ಭಾರೀ ಮೋಡವು ಆಕಾಶದಲ್ಲಿ ಹೇಗೆ ತೇಲುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆಯಾಗಿರುತ್ತದೆ.
ಆಕಾಶದಲ್ಲಿ ಮೋಡಗಳ ಜೊತೆಗೆ ಗಾಳಿಯೂ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸುತ್ತಮುತ್ತಲಿನ ಗಾಳಿಯ ಸಾಂದ್ರತೆಯು ಮೋಡಕ್ಕಿಂತ 0.4 ಶೇಕಡಾ ಕಡಿಮೆಯಾಗಿರುತ್ತದೆ. ಅದಕ್ಕಾಗಿಯೇ ಮೋಡಗಳು ಗಾಳಿಯಲ್ಲಿ ತೇಲುತ್ತವೆ. ಅಂದರೆ ಮೋಡವು ಸರಿಸುಮಾರು ಅಂಟಾರ್ಕ್ಟಿಕ್ ನೀಲಿ ತಿಮಿಂಗಿಲ ಅಥವಾ ನೂರು ಆನೆಗಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.
ನೀರು ಒದ್ದೆ ಅಲ್ಲ: ಇದು ತುಂಬಾ ವಿಚಿತ್ರವಾಗಿದೆ ಅಲ್ಲವೇ. ನೀರನ್ನು ಮುಟ್ಟಿದ್ರೆ ನಾವು ಒದ್ದೆಯಾಗುತ್ತೇವೆ. ಆದ್ರೆ ನೀರು ಮಾತ್ರ ಒದ್ದೆಯಾಗುವುದಿಲ್ಲ. ಅರೇ ಇದೇನಪ್ಪಾ ಅಂತಾ ಆಶ್ಚರ್ಯಪಡಬೇಡಿ. ಸ್ವಲ್ಪ ತಾರ್ಕಿಕವಾಗಿ ಯೋಚಿಸಿ. ನೀರು ಒದ್ದೆ ಅಲ್ಲ. ಆದರೆ ಯಾವುದಾದ್ರೂ ವಸ್ತುಗಳ ಜೊತೆ ನೀರು ಸೇರಿದಾಗ ಆ ವಸ್ತುಗಳು ಒದ್ದೆಯಾಗುತ್ತವೆ. ಸಿಂಪಲ್ ಆಗಿ ಹೇಳುವುದಾದರೆ, ನೀರನ್ನು ಮುಟ್ಟಿದ ನಂತರ ನಮ್ಮ ದೇಹವು ಒದ್ದೆಯಾಗುವುದು ಸಾಮಾನ್ಯ. ಅಂದ್ರೆ ಅಲ್ಲಿಯವರೆಗೆ ನೀರು ದ್ರವ ರೂಪದಲ್ಲಿರುತ್ತದೆ ಎಂಬುದು ಗಮನಾರ್ಹ.
Is Water Wet Yes Or No : ವಿಜ್ಞಾನಿಗಳು ಹೇಳುವುದೇನೆಂದರೆ, ನೀರಿನಲ್ಲಿರುವ ಪರಮಾಣುಗಳ ರಚನೆಯು ವಿಶಿಷ್ಟವಾಗಿದೆ. ನೀರು ತೇವಾಂಶ ಮತ್ತು ಘನ ವಸ್ತುಗಳ ನಡುವಿನ ಸ್ಥಿತಿಯಾಗಿದೆ ಎಂದು ಹೇಳಬಹುದು. ಅಲ್ಲದೆ, ಈ ತೇವತೆಯು ನೀರನ್ನು ಹೀರಿಕೊಳ್ಳುವ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಕೆಲವು ವಸ್ತುಗಳ ಮೇಲೆ ನೀರು ಸುರಿದರೆ ಅವು ಒದ್ದೆಯಾಗುತ್ತವೆ. ಆದರೆ ಅದೇ ವಾಟರ್ ಪ್ರೂಫ್ ವಸ್ತುಗಳ ಮೇಲೆ, ಅಷ್ಟೇ ಏಕೆ ಮೇಣದಬತ್ತಿಗಳ ಮೇಲೆ ಸುರಿದರೆ ಅವು ಒದ್ದೆಯಾಗುವುದಿಲ್ಲ.
ಓದಿ: ನಿಂತು ನೀರು ಕುಡಿಯೋದರಿಂದ ಏನೆಲ್ಲಾ ಸಮಸ್ಯೆ; ಜೀವ ಜಲದ ಸೇವನೆ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.. - HOW TO DRINK WATER