ETV Bharat / international

ಹಿಜ್ಬುಲ್ಲಾ ಬಂಡುಕೋರರಿಗೆ ನೈಮ್ ಕಾಸ್ಸೆಮ್ ಹೊಸ ಬಾಸ್​: ಇಸ್ರೇಲ್​ ದಾಳಿ ಭೀತಿಗೆ ಇರಾನ್​ನಲ್ಲಿ ಆಶ್ರಯ

ಹಸನ್​ ನಸ್ರಲ್ಲಾ ಹತ್ಯೆಯ ಬಳಿಕ ಹಿಜ್ಬುಲ್ಲಾ ಬಂಡುಕೋರರ ಸಂಘಟನೆಗೆ ಹೊಸ ಬಾಸ್​ ನೇಮಕವಾಗಿದೆ. ನೈಮ್ ಕಾಸ್ಸೆಮ್ ಉನ್ನತ ನಾಯಕನಾಗಿ ಸೂಚಿತರಾಗಿದ್ದಾರೆ.

ನೈಮ್ ಕಾಸ್ಸೆಮ್
ನೈಮ್ ಕಾಸ್ಸೆಮ್ (AP)
author img

By ETV Bharat Karnataka Team

Published : Oct 29, 2024, 6:00 PM IST

ಲೆಬನಾನ್: ಇಸ್ರೇಲ್​ ವಿರುದ್ಧ ಸಂಘರ್ಷ ನಡೆಸುತ್ತಿರುವ ಲೆಬನಾನ್​​ನ ಹಿಜ್ಬುಲ್ಲಾ ಸಂಘಟನೆಗೆ ನೈಮ್ ಕಾಸ್ಸೆಮ್ ಹೊಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಬೈರುತ್‌ನಲ್ಲಿ ಇಸ್ರೇಲ್​ ದಾಳಿಗೆ ಸಂಘಟನೆಯ ಉನ್ನತ ನಾಯಕನಾಗಿದ್ದ ಹಸನ್ ನಸ್ರಲ್ಲಾ ಸಾವನ್ನಪ್ಪಿದ ತಿಂಗಳ ಬಳಿಕ ಉತ್ತರಾಧಿಕಾರಿಯಾಗಿ ಬಂದಿದ್ದಾರೆ.

ಹಿಜ್ಬುಲ್ಲಾವನ್ನು ನಿಯಂತ್ರಿಸುವ ಶೂರಾ ಸಮಿತಿಯು ಸಂಘಟನೆಯ ಉಪ ಮುಖ್ಯಸ್ಥರಾಗಿದ್ದ ನೈಮ್ ಕಾಸ್ಸೆಮ್​​ರನ್ನು ಉನ್ನತ ನಾಯಕನನ್ನಾಗಿ ಆಯ್ಕೆ ಮಾಡಿ ಮಂಗಳವಾರ ಪ್ರಕಟಿಸಿದೆ. "ನೈಮ್​ ಕಾಸ್ಸೆಮ್​​ರನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಒಪ್ಪಿಕೊಂಡಿದೆ. ಇವರ ನೇತೃತ್ವದಲ್ಲಿ ಸಂಘಟನೆಯು ಮುಂದುವರಿಯಬೇಕಿದೆ" ಎಂದು ಇರಾನ್ ಬೆಂಬಲಿತ ಬಂಡುಕೋರರ ಗುಂಪು ಹೇಳಿಕೊಂಡಿದೆ.

ಹಿಜ್ಬುಲ್ಲಾದ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥನಾಗಿದ್ದ ಹಶೆಮ್ ಸಫಿದ್ದೀನ್ ಸಂಘಟನೆಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆ ಇತ್ತು. ಆದರೆ, ಹಸನ್​ ನಸ್ರಲ್ಲಾ ಹತ್ಯೆಯಾದ ಕೆಲವೇ ದಿನಗಳ ಅಂತರದಲ್ಲಿ ಈತನನ್ನೂ ಇಸ್ರೇಲ್​ ದಾಳಿ ಮಾಡಿ ಹತ್ಯೆ ಮಾಡಿತ್ತು. ಹೀಗಾಗಿ, ಒಂದು ತಿಂಗಳಿಂದ ಸಂಘಟನೆಯ ಚುಕ್ಕಾಣಿ ಖಾಲಿ ಇತ್ತು.

71 ವರ್ಷದ ನೈಮ್​ ಕಾಸ್ಸೆಮ್ 1982ರಲ್ಲಿ ಹಿಜ್ಬುಲ್ಲಾ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಮೃತ ಹಸನ್​ ನಸ್ರಲ್ಲಾ ಮುಖ್ಯಸ್ಥನಾದ ಬಳಿಕ, ಈತ 1991ರಿಂದ ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ.

ಇಸ್ರೇಲ್​ ದಾಳಿ ಭೀತಿಗೆ ಇರಾನ್​​ನಲ್ಲಿ ಆಶ್ರಯ: ಹಿಜ್ಬುಲ್ಲಾದ ಸರ್ವೋಚ್ಛ ನಾಯಕನಾಗಿರುವ ನೈಬ್​ ಖಾಸ್ಸೆಮ್​ ಇಸ್ರೇಲ್​ ದಾಳಿ ನಡೆಸುವ ಭೀತಿಯಿಂದಾಗಿ ಅದರ ನಾಯಕರ ಅಡಗುತಾಣವಾದ ಇರಾನ್​ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿನ ಮಾಧ್ಯಮಗಳ ವರದಿಯಂತೆ, ಇಸ್ರೇಲ್​ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕರ ಸರಣಿ ಹತ್ಯೆ ನಂತರ ಇರಾನ್​ ನಾಯಕರ ಆದೇಶದ ಮೇರೆಗೆ ಖಾಸಿಮ್​ ಆ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಈಗಾಗಲೇ ಬಂಡುಕೋರರ ಉನ್ನತ ನಾಯಕರಾಗಿದ್ದ ಹಸನ್​​ ನಸ್ರಲ್ಲಾ, ಹಶೆಮ್​ ಸಫಿದ್ದೀನ್​ರನ್ನು ಇಸ್ರೇಲ್​ ಪಡೆಗಳು ದಾಳಿ ಮಾಡಿ ಹತ್ಯೆ ಮಾಡಿವೆ. ಮುಂದಿನ ಗುರಿ ಖಾಸ್ಸೆಮ್​ ಆಗಿರುವ ಕಾರಣ ಆತ ಇರಾನ್​ ಸೇರಿದ್ದಾಗಿ ತಿಳಿದುಬಂದಿದೆ.

ಖಾಸ್ಸೆಮ್​ ಮಾಡಿರುವ ಮೊದಲ ಭಾಷಣವನ್ನು ಬೈರುತ್​​ನಲ್ಲಿ ರೆಕಾರ್ಡ್​ ಮಾಡಲಾಗಿತ್ತು. ಬಳಿಕ ಎರಡನೇ ಮತ್ತು ಮೂರನೇ ಭಾಷಣವನ್ನು ಟೆಹ್ರಾನ್​ನಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಆತ ಸದ್ಯ ಇರಾನ್​​ನಲ್ಲಿ ಉಳಿದುಕೊಂಡಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಸ್ರೇಲ್​ ಕದನ ವಿರಾಮ ಘೋಷಣೆ ಮಾಡುವವರೆಗೂ ಸಂಘರ್ಷ ಮುಂದುವರಿಯಲಿದೆ ಎಂದು ಆತ ಗುಡುಗಿದ್ದಾನೆ.

ಇದನ್ನೂ ಓದಿ: ಗಾಜಾ ಸಂಘರ್ಷ: 43 ಸಾವಿರ ದಾಟಿದ ಸಾವಿನ ಸಂಖ್ಯೆ, ಲಕ್ಷಕ್ಕೂ ಅಧಿಕ ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.