ETV Bharat / international

ಶಾಶ್ವತ ಕದನವಿರಾಮಕ್ಕೆ ಬೇಡಿಕೆ ಇಟ್ಟ ಹಮಾಸ್: ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ - israel hamas war

ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ಹಮಾಸ್​ ಷರತ್ತು ಹಾಕಿದೆ.

Hamas not for temporary ceasefire, wants permanent end to war
ಶಾಶ್ವತ ಕದನವಿರಾಮಕ್ಕೆ ಬೇಡಿಕೆ ಇಟ್ಟ ಹಮಾಸ್: ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ
author img

By ETV Bharat Karnataka Team

Published : May 2, 2024, 3:10 PM IST

ಟೆಲ್ ಅವೀವ್ : ಹಮಾಸ್​ ಮತ್ತು ಇಸ್ರೇಲ್ ಮಧ್ಯದ ಯುದ್ಧದಲ್ಲಿ ಕದನವಿರಾಮ ಮೂಡಿಸಲು ಪರೋಕ್ಷ ಮಧ್ಯಸ್ಥಿಕೆಯ ಮೂಲಕ ಮಾತುಕತೆಗಳು ಮುಂದುವರೆದಿವೆ. ಇಸ್ರೇಲ್​ನ ತಾತ್ಕಾಲಿಕ ಕದನವಿರಾಮದ ಪ್ರಸ್ತಾಪವನ್ನು ಒಪ್ಪದ ಹಮಾಸ್, ಶಾಶ್ವತ ಕದನವಿರಾಮಕ್ಕೆ ಬೇಡಿಕೆ ಇಟ್ಟಿದೆ. ಕದನ ವಿರಾಮ ಮಾತುಕತೆಗಳು ಸಫಲವಾಗಿ ಮುಂದುವರೆಯದಿರಲು ಇದೂ ಒಂದು ಕಾರಣವಾಗಿದೆ.

ಈಜಿಪ್ಟ್ ಮೂಲಗಳ ಪ್ರಕಾರ, ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸಬೇಕು ಮತ್ತು ಯುದ್ಧ ಪ್ರಾರಂಭವಾದ ನಂತರ ಉತ್ತರ ಗಾಜಾದಿಂದ ದಕ್ಷಿಣ ಗಾಜಾ ಪ್ರದೇಶಕ್ಕೆ ಸ್ಥಳಾಂತರಗೊಂಡ ಪ್ಯಾಲೆಸ್ಟೈನಿಯರಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಬೇಕೆಂಬ ಷರತ್ತುಗಳನ್ನು ಹಮಾಸ್​ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ.

ತಾತ್ಕಾಲಿಕ ಕದನ ವಿರಾಮಕ್ಕೆ ಹಮಾಸ್ ಒಲವು ತೋರುತ್ತಿಲ್ಲ ಎಂಬ ಮಾಹಿತಿ ಬಂದಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ. ಇಸ್ರೇಲ್​ನ ಜೈಲುಗಳಲ್ಲಿರುವ ಸುಮಾರು 600 ಪ್ಯಾಲೆಸ್ಟೈನ್ ಕೈದಿಗಳಿಗೆ ಬದಲಾಗಿ ಆರು ವಾರಗಳ ಕದನ ವಿರಾಮಕ್ಕೆ ಮತ್ತು ಕನಿಷ್ಠ 33 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಮಧ್ಯಸ್ಥಿಕೆದಾರರು ಮುಂದಿಟ್ಟಿದ್ದರು.

ರಫಾ ಪ್ರದೇಶದಲ್ಲಿ ಐಡಿಎಫ್​ ಯೋಧರನ್ನು ನಿಯೋಜನೆ ಮಾಡಿರುವುದಾಗಿ ಮತ್ತು ರಫಾ ಮೇಲೆ ನೆಲದ ದಾಳಿ ನಡೆಸಲು ಸಿದ್ಧವಾಗಿರುವುದಾಗಿ ಇಸ್ರೇಲ್​ಗೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟವಾಗಿ ಹೇಳಿದ್ದಾರೆ. ಇಸ್ರೇಲ್​ನ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಒತ್ತೆಯಾಳುಗಳ ಬಗ್ಗೆ ಗುರುವಾರದ ಒಳಗೆ ಹಮಾಸ್​ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಸಾವನ್ನಪ್ಪಿದ ಪ್ಯಾಲೆಸ್ಟೈನಿಯರ ಸಂಖ್ಯೆ 34,568ಕ್ಕೆ ಏರಿದೆ ಎಂದು ಹಮಾಸ್ ಅಧೀನದಲ್ಲಿರುವ ಆರೋಗ್ಯ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ, ಇಸ್ರೇಲ್ ಸೈನ್ಯವು 33 ಪ್ಯಾಲೆಸ್ಟೈನಿಯರನ್ನು ಕೊಂದಿದೆ ಮತ್ತು 57 ಜನರನ್ನು ಗಾಯಗೊಳಿಸಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟು 34,568 ಜನ ಸಾವನ್ನಪ್ಪಿದ್ದು, 77,765 ಜನ ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್​ನಿಂದ ನಡೆಯುತ್ತಿರುವ ನಿರಂತರ ದಾಳಿಗಳು ಮತ್ತು ರಕ್ಷಣಾ ಸಿಬ್ಬಂದಿಯ ಕೊರತೆಯಿಂದಾಗಿ ಗಾಯಾಳುಗಳು ಹಾಗೂ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲಿ ಗಡಿಯಲ್ಲಿ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತ್ತು. ಹಮಾಸ್​ ನಡೆಸಿದ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗರು ಕೊಲ್ಲಲ್ಪಟ್ಟರು ಮತ್ತು 200 ಕ್ಕೂ ಹೆಚ್ಚು ಜನರನ್ನು ಹಮಾಸ್​ ಒತ್ತೆಯಾಳುಗಳಾಗಿ ಬಂಧಿಸಿ ಕರೆದೊಯ್ದಿತ್ತು.

ಇದನ್ನೂ ಓದಿ : ಉಕ್ರೇನ್​ ಬಂದರು ಪ್ರದೇಶದಲ್ಲಿ ರಷ್ಯಾ ಕ್ಷಿಪಣಿ ದಾಳಿ: ಐವರು ಸಾವು, 30 ಮಂದಿಗೆ ಗಾಯ - Russian Missile Attack

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.