ಗಾಜಾ, ಪ್ಯಾಲಿಸ್ಟೈನ್: ಉತ್ತರ ಗಾಜಾ ಪಟ್ಟಿಯಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಇಸ್ರೇಲ್ನ ಸೈನಿಕರನ್ನು ಕೊಂದು ಗಾಯಗೊಳಿಸಿರುವುದಾಗಿ ಹಮಾಸ್‌ನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್‌ಗಳು ಘೋಷಿಸಿವೆ. ಭಾನುವಾರ ಈ ಬಗ್ಗೆ ನೀಡಿದ ಪ್ರತ್ಯೇಕ ಹೇಳಿಕೆಗಳಲ್ಲಿ, ಬ್ರಿಗೇಡ್‌ಗಳು ಜಬಾಲಿಯಾ ಶಿಬಿರದ ಪಶ್ಚಿಮದಲ್ಲಿ ಇಸ್ರೇಲಿ ಮೆರ್ಕಾವಾ ಟ್ಯಾಂಕ್ "ಯಾಸಿನ್ 105" ಕ್ಷಿಪಣಿಯೊಂದಿಗೆ ಮತ್ತು ನೇಮರ್ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕವನ್ನು "ಟಂಡೆಮ್" ಕ್ಷಿಪಣಿಯೊಂದಿಗೆ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ಹಮಾಸ್‌ನ ಬ್ರಿಗೇಡ್‌ಗಳು ಜಬಾಲಿಯಾ ಶಿಬಿರದಲ್ಲಿ ಇಬ್ಬರು ಇಸ್ರೇಲಿ ಸೈನಿಕರ ಮೇಲೆ ಸ್ನೈಪರ್ ಗುಂಡಿನ ದಾಳಿ ನಡೆಸಿ ನೇರವಾಗಿ ಗಾಯಗೊಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರ ಜೊತೆಗೆ, ಗಾಜಾ ನಗರದ ವಾಯುವ್ಯದಲ್ಲಿ "ಶಾವಾ" ಸ್ಫೋಟಕ ಸಾಧನದೊಂದಿಗೆ ಇಸ್ರೇಲಿ ನೇಮರ್ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕದ ನಾಶ ಮಾಡಲಾಗಿದೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ ಜಬಾಲಿಯಾ ಶಿಬಿರದ ಪೂರ್ವಕ್ಕೆ ಮುನ್ನಡೆದ ಇಸ್ರೇಲಿ ಪಡೆಗಳ ಹಿಂದೆ, ಹಮಾಸ್‌ನ ಅಲ್ -ಕಸ್ಸಾಮ್ ಬ್ರಿಗೇಡ್ ಹೋರಾಟಗಾರರು ದಾಳಿ ನಡೆಸಿವೆ. "ಶಾವಾ" ಸ್ಫೋಟಕ ಸಾಧನ ಮತ್ತು "ಯಾಸಿನ್ 105" ಕ್ಷಿಪಣಿಯನ್ನು ಬಳಸಿಕೊಂಡು ಎರಡು ಇಸ್ರೇಲಿ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದವು, ಪರಿಣಾಮವಾಗಿ ಸೈನಿಕರಲ್ಲಿ ಸಾವು ನೋವುಗಳು ಸಂಭವಿಸಿವೆ.
ಇನ್ನು ಭಾನುವಾರ ಇಸ್ರೇಲಿ ಸೇನೆಯು ಉತ್ತರ ಗಾಜಾದಲ್ಲಿ ಸ್ಫೋಟಕ ಸಾಧನದಿಂದ ಹಿರಿಯ ಅಧಿಕಾರಿಯನ್ನು ಕೊಂದಿರುವುದಾಗಿ ಹೇಳಿದೆ. ಇನ್ನು ಈ ದಾಳಿಯಲ್ಲಿ ಹಮಾಸ್‌ನ ಹಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಸ್ರೇಲ್ನ ಸೇನೆ ಸತತ 16 ನೇ ದಿನವೂ ಗಾಜಾದಲ್ಲಿನ ಅತಿದೊಡ್ಡ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರವಾದ ಜಬಾಲಿಯಾ ಶಿಬಿರದಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಹಮಾಸ್ ಹೋರಾಟಗಾರರನ್ನು ಮತ್ತಷ್ಟು ದಾಳಿಗಳನ್ನು ತಡೆಯುವುದೇ ಇಸ್ರೇಲ್ ಭೂಸೇನೆಯ ಮೊದಲ ಆದ್ಯತೆಯಾಗಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿರುವ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚೈ ಅಡ್ರೇ, ಡಿವಿಷನ್ 162 ಉತ್ತರ ಗಾಜಾದಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ. ಗಾಜಾದಲ್ಲಿ ಉಗ್ರರ ಹಲವಾರು ಮೂಲ ಸೌಕರ್ಯಗಳನ್ನು ನಾಶಪಡಿಸುತ್ತಿದೆ. ಮತ್ತು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಆರಂಭವಾದ ಇಸ್ರೇಲ್ ದಾಳಿ ಒಂದು ವರ್ಷದಿಂದ ಸತತವಾಗಿ ಮುಂದುವರೆದಿದೆ. ಹಮಾಸ್‌ನ ಈ ದಾಳಿಯಲ್ಲಿ ಸುಮಾರು 1200 ಜನರು ಸಾವನ್ನಪ್ಪಿದರು ಮತ್ತು ಸುಮಾರು 250 ಜನರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿತ್ತು. ಇದಕ್ಕೆ ಇಸ್ರೇಲ್ ಗಾಜಾ ಮೇಲೆ ನಡೆಸಿರುವ ದಾಳಿಯಲ್ಲಿ ಇದುವರೆಗೂ 42ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇದನ್ನು ಓದಿ:'ಹತ್ಯೆಗೆ ಯತ್ನಿಸಿದ್ದು ಗಂಭೀರ ಪ್ರಮಾದ, ಬೆಲೆ ತೆರಬೇಕಾಗುತ್ತದೆ': ಹಿಜ್ಬುಲ್ಲಾಗೆ ನೆತನ್ಯಾಹು ವಾರ್ನಿಂಗ್