ETV Bharat / international

ಡಿಜಿಟಲ್ ಜಾಹೀರಾತು ಪ್ರಕರಣದಲ್ಲಿ 1.5 ಬಿಲಿಯನ್ ಯುರೋ ದಂಡ: ಕಾನೂನು ಹೋರಾಟದಲ್ಲಿ ಗೂಗಲ್​ಗೆ ಜಯ - Google Wins Legal Bid

author img

By ETV Bharat Karnataka Team

Published : Sep 18, 2024, 3:44 PM IST

ಐದು ವರ್ಷಗಳ ಹಿಂದೆ ತನ್ನ ಆನ್‌ಲೈನ್ ಜಾಹೀರಾತು ವ್ಯವಹಾರ ಪ್ರಕರಣದ ಸಂಬಂಧ ಯುರೋಪಿಯನ್ ಯೂನಿಯನ್ ಆ್ಯಂಟಿಟ್ರಸ್ಟ್ ವಿಧಿಸಿದ್ದ 1.49 ಬಿಲಿಯನ್ ಯುರೋ ದಂಡದ ವಿರುದ್ಧದ ಕಾನೂನು ಹೋರಾಟದಲ್ಲಿ ಗೂಗಲ್​ ಗೆದ್ದಿದೆ. ಈ ಪ್ರಕರಣ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾನೂನು ಹೋರಾಟದಲ್ಲಿ ಗೊಗಲ್​ಗೆ ಜಯ
ಕಾನೂನು ಹೋರಾಟದಲ್ಲಿ ಗೊಗಲ್​ಗೆ ಜಯ (AP)

ಲಂಡನ್: ಐದು ವರ್ಷಗಳ ಹಿಂದೆ ತನ್ನ ಆನ್ ಲೈನ್ ಜಾಹೀರಾತು ವ್ಯವಹಾರ ಗುರಿಯಾಗಿಸಿಕೊಂಡು ಯುರೋಪಿಯನ್ ಯೂನಿಯನ್ ಆ್ಯಂಟಿಟ್ರಸ್ಟ್ ವಿಧಿಸಿದ್ದ 1.49 ಬಿಲಿಯನ್ ಯುರೋ (1.66 ಬಿಲಿಯನ್ ಡಾಲರ್) ದಂಡದ ವಿರುದ್ಧದ ಕಾನೂನು ಹೋರಾಟದಲ್ಲಿ ಗೂಗಲ್ ಜಯ ಸಾಧಿಸಿದೆ.

27 ರಾಷ್ಟ್ರಗಳ ಒಕ್ಕೂಟದ ಉನ್ನತ ಆ್ಯಂಟಿಟ್ರಸ್ಟ್ ಯುರೋಪಿಯನ್ ಕಮಿಷನ್ 2019ರಲ್ಲಿ ವಿಧಿಸಿದ್ದ ದಂಡವನ್ನು ರದ್ದುಪಡಿಸುತ್ತಿರುವುದಾಗಿ ಯುರೋಪಿಯನ್ ಯೂನಿಯನ್ ಜನರಲ್ ಕೋರ್ಟ್ ಹೇಳಿದೆ. " ಜನರಲ್ ಕೋರ್ಟ್ ಕಮಿಷನ್ ನಿರ್ಧಾರವನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ" ಎಂದು ನ್ಯಾಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಮಿಷನ್​ನ ತೀರ್ಪು ಗೂಗಲ್​ ಜಾಹೀರಾತು ವ್ಯವಹಾರದ ನಿರ್ದಿಷ್ಟ ಭಾಗಕ್ಕೆ ಅನ್ವಯಿಸುತ್ತದೆ. ಅಂದರೆ, ಯುಎಸ್ ಟೆಕ್ ದೈತ್ಯ ಗೂಗಲ್ ಥರ್ಡ್​ ಪಾರ್ಟಿ ವೆಬ್​ಸೈಟ್​ಗೆ ಗೂಗಲ್ ಸರ್ಚ್​ನ ಫಲಿತಾಂಶಗಳ ಪಕ್ಕದಲ್ಲಿ ಮಾರಾಟ ಮಾಡಿದ ಜಾಹೀರಾತುಗಳು.

ಗೂಗಲ್ ತನ್ನ ಒಪ್ಪಂದಗಳಲ್ಲಿ ಪ್ರತ್ಯೇಕ ಷರತ್ತುಗಳನ್ನು ಸೇರಿಸಿದೆ ಎಂದು ನಿಯಂತ್ರಕರು(Regulators) ಆರೋಪಿಸಿದ್ದರು. ಇದು ಗೂಗಲ್​ನ ಪ್ರತಿಸ್ಪರ್ಧಿಗಳು ಮಾರಾಟ ಮಾಡುವ ಇದೇ ರೀತಿಯ ಜಾಹೀರಾತುಗಳನ್ನು ಈ ವೆಬ್​ಸೈಟ್​ಗಳು ಪ್ರದರ್ಶಿಸದಂತೆ ನಿರ್ಬಂಧಿಸಿತ್ತು.

ಗೂಗಲ್​​ನ ಈ ನಡೆಯಿಂದ ಜಾಹೀರಾತುದಾರರು ಮತ್ತು ವೆಬ್‌ಸೈಟ್ ಮಾಲೀಕರು ಕಡಿಮೆ ಆಯ್ಕೆಯನ್ನು ಹೊಂದಿದ್ದರು ಮತ್ತು ಇದು ಹೆಚ್ಚಿನ ಬೆಲೆಗಳನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಎಂದು ಕಮಿಷನ್​ ದಂಡ ವಿಧಿಸಿರುವುದಾಗಿ ತಿಳಿಸಿತು.

ಆದರೆ ಆ ಷರತ್ತುಗಳನ್ನು ಮೌಲ್ಯಮಾಪನ ಮಾಡುವಾಗ ಕಮಿಷನ್​ ತಪ್ಪುಗಳನ್ನು ಮಾಡಿದೆ ಎಂದು ಜನರಲ್ ಕೋರ್ಟ್ ಒತ್ತಿ ಹೇಳಿದೆ. ಗೂಗಲ್‌ನ ಒಪ್ಪಂದಗಳು ನಾವೀನ್ಯತೆಯನ್ನು ತಡೆಯುತ್ತವೆ, ಗ್ರಾಹಕರಿಗೆ ಹಾನಿ ಮಾಡುತ್ತವೆ ಮತ್ತು ಕಂಪನಿಯು ರಾಷ್ಟ್ರೀಯ ಆನ್‌ಲೈನ್ ಸರ್ಚ್​ ಜಾಹೀರಾತು ಮಾರುಕಟ್ಟೆಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಹಾಗೂ ಬಲಪಡಿಸಲು ಸಹಾಯ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಕಮಿಷನ್​ ವಿಫಲವಾಗಿದೆ ಎಂದು ಕೋರ್ಟ್ ತಿಳಿಸಿದೆ.

ಈ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯವಾದ ಕೋರ್ಟ್ ಆಫ್ ಜಸ್ಟೀಸ್​ಗೆ ಮೇಲ್ಮನವಿ ಸಲ್ಲಿಸಬಹುದು, ಆದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಇದಕ್ಕೆ ಕಮಿಷನ್​, "ತೀರ್ಪನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದೆ.

ಬ್ರಿಟಿಷ್ ಸ್ಪರ್ಧಾ ನಿಯಂತ್ರಕರು(British competition regulators) ಈ ತಿಂಗಳು, ಕಂಪನಿಯು ದೇಶದ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಮತ್ತು ತನ್ನದೇ ಆದ ಸೇವೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಹೊಸ ಮೊಟೊರೊಲಾ ಫೋನ್​! ಇದರಲ್ಲಿದೆ Moto AI ಸೂಟ್ - Motorola Edge 50 Neo Launched

ETV Bharat Logo

Copyright © 2024 Ushodaya Enterprises Pvt. Ltd., All Rights Reserved.