ETV Bharat / international

ಗಾಜಾ ಸಂಘರ್ಷ: 43 ಸಾವಿರ ದಾಟಿದ ಸಾವಿನ ಸಂಖ್ಯೆ, ಲಕ್ಷಕ್ಕೂ ಅಧಿಕ ಜನರಿಗೆ ಗಾಯ - ISRAEL HAMAS WAR

ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಈವರೆಗೆ 43 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ಗಾಜಾದಲ್ಲಿ ಇಸ್ರೇಲ್ ಬಾಂಬ್ ದಾಳಿಗೆ ನೆಲಸಮಗೊಂಡ ಕಟ್ಟಡ
ಗಾಜಾದಲ್ಲಿ ಇಸ್ರೇಲ್ ಬಾಂಬ್ ದಾಳಿಗೆ ನೆಲಸಮಗೊಂಡ ಕಟ್ಟಡ (IANS)
author img

By ETV Bharat Karnataka Team

Published : Oct 29, 2024, 12:36 PM IST

ಗಾಜಾ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೈನಿಯರ ಸಂಖ್ಯೆ 43,000 ದಾಟಿದೆ. ಕಳೆದ 48 ಗಂಟೆಗಳಲ್ಲಿ, ಇಸ್ರೇಲ್ ಮಿಲಿಟರಿ ನಡೆಸಿದ ದಾಳಿಯಲ್ಲಿ 96 ಜನ ಸಾವನ್ನಪ್ಪಿದ್ದಾರೆ ಮತ್ತು 277 ಜನರು ಗಾಯಗೊಂಡಿದ್ದಾರೆ. 2023ರ ಅಕ್ಟೋಬರ್ ಆರಂಭದಲ್ಲಿ ಪ್ಯಾಲೆಸ್ಟೈನ್ - ಇಸ್ರೇಲ್ ಸಂಘರ್ಷ ಪ್ರಾರಂಭವಾದಾಗಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 43,020 ಕ್ಕೆ ಮತ್ತು ಗಾಯಾಳುಗಳ ಸಂಖ್ಯೆ 1,01,110 ಕ್ಕೆ ತಲುಪಿದೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಅಧಿಕಾರಿಗಳು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಲವಾರು ಸಂತ್ರಸ್ತರು ಇನ್ನೂ ಅವಶೇಷಗಳ ಅಡಿ ಸಿಲುಕಿದ್ದು, ಆಂಬ್ಯುಲೆನ್ಸ್ ಮತ್ತು ನಾಗರಿಕ ರಕ್ಷಣಾ ತಂಡಗಳಿಗೆ ಅವರನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

100 ಉಗ್ರರ ಬಂಧನ: ಇತ್ತೀಚಿನ ದಾಳಿಯ ಬಗ್ಗೆ ಐಡಿಎಫ್​ ಹೇಳಿಕೆ ಬಿಡುಗಡೆ ಮಾಡಿದ್ದು, ಗಾಜಾದಲ್ಲಿ ಸಶಸ್ತ್ರ ಉಗ್ರರ ಮೇಲೆ ದಾಳಿ ನಡೆಸಿ ಅವರನ್ನು ಕೊಂದುಹಾಕಲಾಗಿದೆ ಮತ್ತು ಅವರ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದೆ. ಗಾಜಾದ ಜಬಾಲಿಯಾದಲ್ಲಿರುವ ಕಮಲ್ ಅಡ್ವಾನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 100 ಉಗ್ರರನ್ನು ಬಂಧಿಸಲಾಗಿದೆ ಎಂದು ಐಡಿಎಫ್ ಹೇಳಿಕೊಂಡಿದೆ.

ಐಡಿಎಫ್ ಪ್ರಕಾರ, ನೌಕಾಪಡೆಯ ಪ್ರಮುಖ ಶಯೆಟೆಟ್ 13 ಕಮಾಂಡೋ ಘಟಕವು ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಅದನ್ನು ಸ್ಥಳಾಂತರಿಸುವ ಸಮಯದಲ್ಲಿ ಸುಮಾರು 40 ಹಮಾಸ್ ಉಗ್ರರನ್ನು ಬಂಧಿಸಲಾಗಿದೆ. ಅಲ್ಲದೇ ಅಕ್ಟೋಬರ್ 7 ರ ದಾಳಿಗೆ ಕಾರಣಕರ್ತರಾದ ಹಲವಾರು ಉಗ್ರರು ಕೂಡ ಈ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾರೆ.

25 ಮಿಲಿಯನ್ ಡಾಲರ್ ಸಹಾಯ: ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ ಡಬ್ಲ್ಯೂಎ) ಉತ್ತರ ವೆಸ್ಟ್​ ಬ್ಯಾಂಕ್​ನ ಶಿಬಿರಗಳಿಗೆ 25 ಮಿಲಿಯನ್ ಡಾಲರ್ ತುರ್ತು ಸಹಾಯವನ್ನು ನಿಗದಿಪಡಿಸಿದೆ ಎಂದು ಪ್ಯಾಲೆಸ್ಟೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಬಿರಗಳ ತುರ್ತು ಆದ್ಯತೆಗಳಲ್ಲಿ ವಸತಿಗಳ ಪುನರ್ ನಿರ್ಮಾಣ ಮತ್ತು ಪುನರ್ವಸತಿ, ಬಾಡಿಗೆ ಪಾವತಿಗೆ ಸಹಾಯ ಮತ್ತು ನಗದು ಸಹಾಯವನ್ನು ಒದಗಿಸುವುದು ಸೇರಿವೆ ಎಂದು ಪ್ಯಾಲೆಸ್ಟೈನ್ ವಿಮೋಚನಾ ಸಂಘಟನೆಯ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಅದರ ನಿರಾಶ್ರಿತರ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಅಹ್ಮದ್ ಅಬು ಹೋಲಿ ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೆಸ್ಟ್​ ಬ್ಯಾಂಕ್​ನಲ್ಲಿ 760 ಸಾವು: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ವೆಸ್ಟ್​ ಬ್ಯಾಂಕ್​ ನಗರಗಳು, ಶಿಬಿರಗಳು ಮತ್ತು ಹಳ್ಳಿಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ವೆಸ್ಟ್​ ಬ್ಯಾಂಕ್​ನಾದ್ಯಂತ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 760 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಮಾನವ ಹಕ್ಕುಗಳಿಗೋಸ್ಕರ ಎತ್ತಿದ ಕೈಗೆ ಕೋಳ ತೊಡಿಸಿದ ಪಾಕ್‌ ಪೊಲೀಸರು; ಇದಕ್ಕಿದೆ ಕಾಶ್ಮೀರದ ಲಿಂಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.