ETV Bharat / international

ದ.ಕೊರಿಯಾಗೆ ಬಂದ ಕಸ ತುಂಬಿದ ಬಲೂನ್​ಗಳು: 'ಪ್ರೀತಿಯ ಉಡುಗೊರೆ' ಎಂದ ಉ.ಕೊರಿಯಾ - Balloon War - BALLOON WAR

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಬಲೂನ್ ವಾರ್ ಶುರುವಾಗಿದೆ.

ದ.ಕೊರಿಯಾಗೆ ಬಂದ ಕಸ ತುಂಬಿದ ಬಲೂನ್​ಗಳು
ದ.ಕೊರಿಯಾಗೆ ಬಂದ ಕಸ ತುಂಬಿದ ಬಲೂನ್​ಗಳು (IANS)
author img

By ETV Bharat Karnataka Team

Published : Jun 2, 2024, 7:03 PM IST

ಸಿಯೋಲ್(ದಕ್ಷಿಣ ಕೊರಿಯಾ): ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಗಡಿಗೆ ಕಸ ತುಂಬಿರುವ 600 ಬಲೂನ್​ಗಳನ್ನು ಹಾರಿ ಬಿಟ್ಟಿದೆ ಎಂದು ಸಿಯೋಲ್​ನ ಮಿಲಿಟರಿ ಭಾನುವಾರ ತಿಳಿಸಿದೆ. ಸಿಗರೇಟ್ ತುಂಡುಗಳಿಂದ ಹಿಡಿದು ಪ್ಲಾಸ್ಟಿಕ್​ವರೆಗೆ ಕಸ ಕಡ್ಡಿಗಳನ್ನು ಈ ಬಲೂನ್​ಗಳಲ್ಲಿ ತುಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಇಂಥ ಎರಡನೇ ಘಟನೆಯಾಗಿದೆ.

"ಜೂನ್ 1ರ ರಾತ್ರಿ 8 ಗಂಟೆಯಿಂದ (1100 ಜಿಎಂಟಿ) ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ಕಡೆಗೆ ತ್ಯಾಜ್ಯ ಬಲೂನ್​ ಹಾರಿಸುವುದನ್ನು ಪುನರಾರಂಭಿಸಿದೆ" ಎಂದು ಸಿಯೋಲ್​ನ ಜಂಟಿ ಮಿಲಿಟರಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂನ್ 2ರಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ, ಸರಿಸುಮಾರು 600 ಬಲೂನ್​ಗಳು ಗಡಿಯ ಒಳಗೆ ಬಂದಿವೆ. ಪ್ರತೀ ಗಂಟೆಗೆ ಸುಮಾರು 20ರಿಂದ 50 ಬಲೂನ್​ಗಳು ಗಾಳಿಯ ಮೂಲಕ ಗಡಿಯೊಳಗೆ ಬರುತ್ತಿವೆ ಎಂದು ಅದು ಹೇಳಿದೆ.

ರಾಜಧಾನಿ ಸಿಯೋಲ್ ಮತ್ತು ಪಕ್ಕದ ಪ್ರದೇಶವಾದ ಗೆಯಾಂಗ್​ಜಿ ಸೇರಿದಂತೆ ದಕ್ಷಿಣ ಕೊರಿಯಾದ ಉತ್ತರ ಪ್ರಾಂತ್ಯಗಳಲ್ಲಿ ಬಲೂನ್​ಗಳು ಇಳಿಯುತ್ತಿವೆ. ಈ ಪ್ರದೇಶವು ಒಟ್ಟಾರೆಯಾಗಿ ದಕ್ಷಿಣ ಕೊರಿಯಾದ ಅರ್ಧದಷ್ಟು ಜನಸಂಖ್ಯೆಗೆ ನೆಲೆಯಾಗಿದೆ.

"ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಕಸದ ಚೀಲಗಳನ್ನು ಹೊತ್ತ ನೂರಾರು ಬಲೂನ್​ಗಳನ್ನು ಕಳುಹಿಸಲಾರಂಭಿಸಿರುವುದು ಅತ್ಯಂತ ಕೆಳಮಟ್ಟದ ವರ್ತನೆಯಾಗಿದೆ. ಇಂಥ ಹುಚ್ಚು ಪ್ರಚೋದನೆಗಳನ್ನು ನಿಲ್ಲಿಸದಿದ್ದರೆ ತಕ್ಕ ಪ್ರತೀಕಾರ ಎದುರಿಸಬೇಕಾಗುತ್ತದೆ" ಎಂದು ಸಿಯೋಲ್ ಎಚ್ಚರಿಕೆ ನೀಡಿದೆ.

ಬಲೂನ್​ಗಳ ಬಗ್ಗೆ ಸಿಯೋಲ್ ನಗರ ಆಡಳಿತವು ಜೂನ್ 1ರಂದು ನಿವಾಸಿಗಳಿಗೆ ಟೆಕ್ಸ್ಟ್​ ಮೆಸೇಜುಗಳನ್ನು ಕಳುಹಿಸಿದ್ದು, ಉತ್ತರ ಕೊರಿಯಾದ ಪ್ರಚಾರ ಕರಪತ್ರಗಳು ಎಂದು ಭಾವಿಸಲಾದ ಅಪರಿಚಿತ ವಸ್ತುಗಳ ಬಗ್ಗೆ ಎಚ್ಚರಿಕೆ ನೀಡಿದೆ.

ಬಲೂನ್ ವಾರ್: ಆದರೆ, ಬಲೂನ್ ಕಳುಹಿಸುವಿಕೆಯನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ನೇತೃತ್ವದ ಸರ್ಕಾರವು ಸಮರ್ಥಿಸಿಕೊಂಡಿದೆ. ಕಿಮ್ ಜಾಂಗ್ ಉನ್ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಉತ್ತರ ಕೊರಿಯಾವು ಕಳುಹಿಸಿದ ಬಲೂನ್​ಗಳಿಗೆ ಪ್ರತೀಕಾರವಾಗಿ ಈ ಬಲೂನ್​ಗಳು "ಪ್ರೀತಿಯ ಉಡುಗೊರೆ" ಎಂದು ಅದು ಹೇಳಿದೆ.

ಕಳೆದ ಹಲವಾರು ತಿಂಗಳುಗಳಿಂದ ದಕ್ಷಿಣ ಕೊರಿಯಾದ ಕಾರ್ಯಕರ್ತರು ಕಳುಹಿಸುತ್ತಿರುವ ಬಲೂನ್​ಗಳಿಂದ ಉತ್ತರ ಕೊರಿಯಾ ಆಕ್ರೋಶಗೊಂಡಿದೆ. ಈ ಬಲೂನ್​ಗಳಲ್ಲಿ ಕಿಮ್ ಜಾಂಗ್ ಉನ್ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾದ ಕರಪತ್ರಗಳು, ನಗದು ಅಥವಾ ಯುಎಸ್​ಬಿ ಡ್ರೈವ್​ಗಳನ್ನು ಇಟ್ಟು ಹಾರಿಸಲಾಗುತ್ತದೆ. ಸದ್ಯ ಇದಕ್ಕೆ ಪ್ರತೀಕಾರವಾಗಿ ಉತ್ತರ ಕೊರಿಯಾ ಕಸಕಡ್ಡಿ ತುಂಬಿದ ಬಲೂನ್​ಗಳನ್ನು ದಕ್ಷಿಣ ಕೊರಿಯಾಗೆ ಕಳುಹಿಸುತ್ತಿದೆ.

ಇದನ್ನೂ ಓದಿ: ಕದನವಿರಾಮ ಪ್ರಸ್ತಾವನೆ ಒಪ್ಪಿಕೊಳ್ಳುವಂತೆ ಇಸ್ರೇಲ್-ಹಮಾಸ್​ಗೆ ಕತಾರ್, ಈಜಿಪ್ಟ್​, ಯುಎಸ್​ ಒತ್ತಾಯ - Israel Hamas ceasefire proposal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.