ETV Bharat / international

ಜರ್ಮನಿ: ಮಗು ಸೇರಿ ನಾಲ್ವರ ಕೊಂದು ಪೊಲೀಸರಿಗೆ ಶರಣಾದ ಯೋಧ - ಗುಂಡು ಹಾರಿಸಿದ ಯೋಧ

ಯೋಧನೊಬ್ಬ ಮಗು ಸೇರಿ ನಾಲ್ವರನ್ನು ಗುಂಡಿಕ್ಕಿ ಕೊಂದು ಪೊಲೀಸರಿಗೆ ಶರಣಾಗಿದ ಘಟನೆ ಜರ್ಮನಿಯಲ್ಲಿ ನಡೆದಿದೆ.

shootings in Germany  soldier turns himself  ಪೊಲೀಸರಿಗೆ ಶರಣಾದ ಯೋಧ  ನಾಲ್ವರನ್ನು ಗುಂಡಿಕ್ಕಿ ಕೊಲೆ
ಗುಂಡಿನ ದಾಳಿ: ಮಗು ಸೇರಿ ನಾಲ್ವರನ್ನು ಕೊಂದು ಪೊಲೀಸರಿಗೆ ಶರಣಾದ ಯೋಧ
author img

By PTI

Published : Mar 1, 2024, 4:27 PM IST

ಬರ್ಲಿನ್(ಜರ್ಮನಿ): ಉತ್ತರ ಜರ್ಮನಿಯಲ್ಲಿ ಗುಂಡಿನ ದಾಳಿ ನಡೆದಿದೆ. ಯೋಧನೊಬ್ಬ ತನ್ನ ಕುಟುಂಬಸ್ಥರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು ಮಗು ಸೇರಿ ಒಟ್ಟು ನಾಲ್ವರನ್ನು ಬಲಿ ಪಡೆದಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳು, ಯೋಧ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಬಳಿಕ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶ ಸ್ಕೀಸೆಲ್ ಮತ್ತು ಬೋಥೆಲ್​ನಲ್ಲಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ರಾತ್ರಿಯಿಡೀ ಗುಂಡಿನ ಸದ್ದು ಕೇಳಿ ಬಂದಿತ್ತು ಎಂದು ನರೆಹೊರೆಯವರು ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಶಂಕೆ ಇದೆ. ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.