ETV Bharat / international

ಗುರುತಿನ ದಾಖಲೆ ಮರೆತು ಮತಗಟ್ಟೆಗೆ ಬಂದು ಪೇಚಿಗೆ ಸಿಲುಕಿದ ಬ್ರಿಟನ್​ ಮಾಜಿ ಪ್ರಧಾನಿ! - Boris Johnson - BORIS JOHNSON

ಬ್ರಿಟನ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನದ ನಡೆಯುತ್ತಿದೆ. ಈ ವೇಳೆ ಬ್ರಿಟನ್​ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್ ಅವರು ಗುರುತಿನ ಚೀಟಿ​ ಮರೆತು ಮತಗಟ್ಟೆಗೆ ಬಂದು ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ.

Boris Johnson
Boris Johnson (ಐಎಎನ್​ಎಸ್​)
author img

By PTI

Published : May 3, 2024, 8:08 PM IST

ಲಂಡನ್​: ಬ್ರಿಟನ್​ ಸ್ಥಳೀಯ ಚುನಾವಣೆಗೆ ಮತ ಚಲಾಯಿಸಲು ಆಗಮಿಸಿದ್ದ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​ ಮತದಾನದ ಗುರುತಿನ ಚೀಟಿ (ಐಡಿ) ತರಲು ವಿಫಲವಾಗಿ ವಾಪಸ್​ ತೆರಳಿದ ಘಟನೆ ವರದಿಯಾಗಿದೆ.

ದಕ್ಷಿಣ ಆಕ್ಸ್​ಫೋರ್ಡ್​​ಶೈರ್‌​​ನಲ್ಲಿ ಮತ ಹಕ್ಕು ಹೊಂದಿರುವ ಅವರು ಮತದಾನದ ವೇಳೆ ಐಡಿ ನೀಡುವಲ್ಲಿ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಅಗತ್ಯ ಫೋಟೋ ಐಡಿ ತಂದು ತೋರಿಸಿದ ನಂತರವೇ ಮತ ಚಲಾಯಿಸಲು ಸಾಧ್ಯವಾಯಿತು ಎಂದು ಸ್ಕೈ ನ್ಯೂಸ್​ ವರದಿ ಮಾಡಿದೆ.

2019ರಿಂದ 2022ರವರೆಗೆ ಬ್ರಿಟನ್​ ಪ್ರಧಾನಿಯಾಗಿ ಬೋರಿಸ್​ ಜಾನ್ಸನ್​ ಕಾರ್ಯನಿರ್ವಹಿಸಿದ್ದಾರೆ. ಇವರ ಅವಧಿಯಲ್ಲಿ ಹೊಸ ಚುನಾವಣಾ ಕಾಯ್ದೆ 2022ರನ್ನು ಪರಿಚಯಿಸಲಾಗಿತ್ತು. ಜಾನ್ಸನ್​​ 2022ರಲ್ಲಿ ಫೋಟೋ ಐಡಿ ಮೂಲಕ ಮತದಾನ ಮಾಡುವ ಚುನಾವಣಾ ಕಾಯ್ದೆ ಪರಿಚಯಿಸಿದ್ದರು. ಹೊಸ ಕಾನೂನನ್ನು ಕಳೆದ ವರ್ಷ ಸ್ಥಳೀಯ ಚುನಾವಣೆಯಲ್ಲಿ ಜಾರಿಗೆ ತರಲಾಗಿತ್ತು. ಅದರನುಸಾರ ಫೋಟೋ ಐಡಿಯನ್ನು ಮತದಾರರು ಹೊಂದಿದ್ದಲ್ಲಿ ಮಾತ್ರ ಮತ ಚಲಾಯಿಸಬಹುದಾಗಿದೆ. ಡ್ರೈವಿಂಗ್​​ ಲೈಸೆನ್ಸ್​​ ಅಥವಾ ಪಾಸ್‌ಪೋರ್ಟ್​​ನಂತಹ ಒಟ್ಟು 22 ಅಗತ್ಯ ಐಡಿಗಳಲ್ಲಿ ಒಂದನ್ನು ತೋರಿಸುವ ಮೂಲಕ ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ವೋಟ್ ಮಾಡಿದ್ದಾರೆ.

ಮತದಾನದ ಹೊಸ ಅವಶ್ಯಕ ಐಡಿಗಳನ್ನು ತೋರಿಸಿ ಸಾಕಷ್ಟು ಪ್ರಮಾಣದಲ್ಲಿ ಜನರು ಮತದಾನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ, ಕೆಲವರು ಮತ ಚಲಾಯಿಸಲು ಇಚ್ಛಿಸಿದರೂ ಅವರ ಬಳಿ ಸ್ವೀಕಾರಾರ್ಹ ಐಡಿ ಇಲ್ಲದ ಕಾರಣ ಮತದಾನ ಮಾಡಲು ಸಾಧ್ಯವಾಗಿಲ್ಲ. ವಿಶೇಷಚೇತನರು, ಬಡವರು ಮತ್ತು ನಿರುದ್ಯೋಗಿಗಳು ಕೂಡ ತಮ್ಮ ವೋಟರ್​ ಐಡಿ ಪಡೆಯಲು ಸಾಧ್ಯವಾಗದೆ ಮತ ಚಲಾವಣೆಯಿಂದ ಹಿಂದೆ ಸರಿದಿರುವ ಕೆಲವು ಘಟನೆಗಳೂ ವರದಿಯಾಗಿವೆ.

ಇದನ್ನೂ ಓದಿ: ಕೊಲಂಬಿಯಾ ವಿವಿಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ವೇಳೆ ಗುಂಡು ಹಾರಿಸಿದ ಪೊಲೀಸ್​ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.