ETV Bharat / international

ವಾಯುವ್ಯ ಪಾಕಿಸ್ತಾನದಲ್ಲಿ ಬುಡಕಟ್ಟು ಹಿಂಸಾಚಾರ: 8 ದಿನಗಳಲ್ಲಿ 46 ಜನರ ಸಾವು - Sectarian violence in Pakistan

author img

By ETV Bharat Karnataka Team

Published : 2 hours ago

ವಾಯವ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಂಥೀಯ ಹಿಂಸಾಚಾರದಲ್ಲಿ 46 ಜನ ಸಾವಿಗೀಡಾಗಿದ್ದಾರೆ.

ವಾಯುವ್ಯ ಪಾಕಿಸ್ತಾನದಲ್ಲಿ ಜನಾಂಗೀಯ ಹಿಂಸಾಚಾರ
ವಾಯುವ್ಯ ಪಾಕಿಸ್ತಾನದಲ್ಲಿ ಜನಾಂಗೀಯ ಹಿಂಸಾಚಾರ (IANS)

ಇಸ್ಲಾಮಾಬಾದ್: ಕೃಷಿ ಬಿತ್ತನೆಗೆ ಸಂಬಂಧಿಸಿದ ಎರಡು ಕುಟುಂಬಗಳ ನಡುವಿನ ಸಣ್ಣ ವಿವಾದವು ಬೃಹತ್ ಪಂಥೀಯ ಬುಡಕಟ್ಟು ಘರ್ಷಣೆಯಾಗಿ ಮಾರ್ಪಟ್ಟಿದ್ದು, ಈ ಸಂಘರ್ಷದಲ್ಲಿ ಎಂಟು ದಿನಗಳ ಅವಧಿಯಲ್ಲಿ ಕನಿಷ್ಠ 46 ಮಂದಿ ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನಖ್ವಾ (ಕೆಪಿ) ಪ್ರಾಂತ್ಯದ ಕುರ್ರಾಮ್ ಬುಡಕಟ್ಟು ಜಿಲ್ಲೆಯಲ್ಲಿ ನಡೆದಿದೆ.

ಈ ಜಿಲ್ಲೆಯು ಪಾಕಿಸ್ತಾನ ಪ್ರಾಂತ್ಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಭಯೋತ್ಪಾದನೆ ಮತ್ತು ಉಗ್ರಗಾಮಿ ಗುಂಪುಗಳ ಚಟುವಟಿಕೆಗಳು ಮಾತ್ರವಲ್ಲದೇ, ಭೂಮಿಗಾಗಿ ದಶಕಗಳಿಂದ ಪರಸ್ಪರ ಹೋರಾಡುತ್ತಿರುವ ಪ್ರತಿಸ್ಪರ್ಧಿ ಗುಂಪುಗಳೂ ಇಲ್ಲಿವೆ.

"ಕದನವಿರಾಮ ಮೂಡಿಸಲು ಜಿಲ್ಲಾಡಳಿತ, ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಕುರ್ರಾಮ್ ಜಿಲ್ಲಾಧಿಕಾರಿ ಜಾವೆದುಲ್ಲಾ ಮೆಹ್ಸೂದ್ ಹೇಳಿದ್ದಾರೆ.

ಬುಧವಾರ ಕದನ ವಿರಾಮ ಒಪ್ಪಂದಕ್ಕೆ ಬರಲಾದರೂ, ಕುರ್ರಾಮ್ ಜಿಲ್ಲೆಯ ಮೇಲಿನ, ಕೆಳ ಮತ್ತು ಮಧ್ಯ ತಹಸಿಲ್​ಗಳಲ್ಲಿ ಸಶಸ್ತ್ರ ಘರ್ಷಣೆಗಳು ಮುಂದುವರೆದಿವೆ. ಎರಡೂ ಕಡೆ ಸಾವುನೋವುಗಳ ಸಂಖ್ಯೆ ಖಂಡಿತವಾಗಿಯೂ ಇನ್ನೂ ಹೆಚ್ಚಾಗಲಿದೆ ಎಂದು ಪ್ರದೇಶದ ಸ್ಥಳೀಯರು ತಿಳಿಸಿದ್ದಾರೆ.

"ಸಾವಿನ ಸಂಖ್ಯೆ ವರದಿಯಾಗುತ್ತಿರುವುದಕ್ಕಿಂತ ಹೆಚ್ಚಾಗಿದೆ. ಕನಿಷ್ಠ 80 ಜನ ಈಗಾಗಲೇ ಗಾಯಗೊಂಡಿದ್ದಾರೆ. ಈ ಹೋರಾಟವು ಇನ್ನೂ ಎಷ್ಟು ಕಾಲ ಮುಂದುವರಿಯಬಹುದು ಎಂಬುದು ಗೊತ್ತಿಲ್ಲ. ಏಕೆಂದರೆ ಎರಡೂ ಬಣಗಳು ಭೂ ಹಕ್ಕುಗಳು ಮಾತ್ರವಲ್ಲದೇ ಪಂಥೀಯ ನೆಲೆಗಳಲ್ಲಿಯೂ ಪರಸ್ಪರರ ವಿರುದ್ಧ ತೀವ್ರ ಪೈಪೋಟಿಯನ್ನು ಹೊಂದಿದ್ದಾರೆ. ಇವುಗಳಲ್ಲಿ ಒಂದು ಬಣ ಸುನ್ನಿ, ಮತ್ತೊಂದು ಬಣ ಶಿಯಾ ಪಂಥಕ್ಕೆ ಸೇರಿದೆ" ಎಂದು ಸ್ಥಳೀಯರೊಬ್ಬರು ಹೇಳಿದರು.

ಸಂಘರ್ಷದ ತೀವ್ರತೆ ಎಷ್ಟು ತೀವ್ರವಾಗಿದೆಯೆಂದರೆ, ಪರಚಿನಾರ್ - ಪೇಶಾವರ್ ಮುಖ್ಯ ರಸ್ತೆ ಮತ್ತು ಪಾಕಿಸ್ತಾನ - ಅಫ್ಘಾನ್ ಖರ್ಲಾಚಿ ಗಡಿಯನ್ನು ಮುಚ್ಚಲಾಗಿದೆ. ಮಾರ್ಗಗಳ ದಿಗ್ಬಂಧನದಿಂದಾಗಿ ಆಹಾರ, ಇಂಧನ ಮತ್ತು ಔಷಧಗಳ ಕೊರತೆ ಉಲ್ಬಣವಾಗುತ್ತಿದೆ. ಕಳೆದ ಆರು ದಿನಗಳಿಂದ ಈ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಸಹ ಮುಚ್ಚಲಾಗಿದೆ.

ಬಲಿಸ್ಖೇಲ್, ಖಾರ್ಕಲೇ, ಬಾಗ್ಕಿ, ಗ್ರಾಮ್ ಪಾಡಾ, ಕುಂಜ್ ಅಲಿಜೈ, ಮುಕ್ಬಾಲ್ ಮತ್ತು ಪೆವಾರ್ ತಾರಿ ಮೆಂಗಲ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಇನ್ನೂ ತೀವ್ರ ಘರ್ಷಣೆಗಳು ನಡೆಯುತ್ತಿವೆ ಎಂದು ಪ್ರದೇಶದ ಸ್ಥಳೀಯ ಮೂಲಗಳು ದೃಢಪಡಿಸಿವೆ.

"ಈ ಕುಟುಂಬಗಳು ದಶಕಗಳಿಂದ ಪರಸ್ಪರ ಹೋರಾಡುತ್ತಿವೆ. ಎರಡೂ ಕಡೆಯವರು ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಮತ್ತು ಪರಸ್ಪರ ಹೋರಾಡಲು ಅವರಿಗೆ ಸರ್ಕಾರ ಅಥವಾ ಮಿಲಿಟರಿಯಿಂದ ಬೆಂಬಲ ಅಗತ್ಯವಿಲ್ಲ. ಇಲ್ಲಿ ಗಂಭೀರವಾದ ಪಂಥೀಯ ವಿಭಜನೆ ಇದೆ. ಬುಡಕಟ್ಟು ಜಿರ್ಗಾಗಳ (ಕೌನ್ಸಿಲ್ ಗಳು) ಮೂಲಕ ವಿವಾದ ಪರಿಹಾರದ ಅತ್ಯಂತ ಗೌರವಾನ್ವಿತ ವಿಧಾನಗಳು ಸಹ ಸಂಘರ್ಷವನ್ನು ಕೊನೆಗೊಳಿಸಲು ವಿಫಲವಾಗಿವೆ" ಎಂದು ಮತ್ತೊಬ್ಬ ಸ್ಥಳೀಯರೊಬ್ಬರು ಹೇಳಿದರು.

ಇದನ್ನೂ ಓದಿ : 'ಇಂಡಿಯಾ ಔಟ್' ಅಜೆಂಡಾ ಅನುಸರಿಸಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು - Maldives Prez Muizzu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.