ETV Bharat / international

ಬ್ರೆಜಿಲ್​ನಲ್ಲಿ ಭೂಕಂಪನ, ಚಂಡಮಾರುತದ ಅಬ್ಬರ; ಮೂವರು ಸಾವು

ಬ್ರೆಜಿಲ್​ನ ತಾರೌಕಾದಿಂದ ಸುಮಾರು 123 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲಾಗಿದೆ. ಇನ್ನೊಂದೆಡೆ, ಸಾವೋ ಪಾಲೊ ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸಿದೆ.

magnitude quake  quake rocks Brazil  ಬ್ರೆಜಿಲ್​ನಲ್ಲಿ ಭೂಕಂಪ  ರಿಕ್ಟರ್​ ಮಾಪಕ
ಬ್ರೆಜಿಲ್​ನಲ್ಲಿ ಭೂಕಂಪ, ರಿಕ್ಟರ್​ ಮಾಪಕದಲ್ಲಿ 6.5 ತೀವ್ರತೆ ದಾಖಲು
author img

By ETV Bharat Karnataka Team

Published : Jan 21, 2024, 12:39 PM IST

Updated : Jan 21, 2024, 12:47 PM IST

ಬ್ರೆಸಿಲಿಯಾ: ದೇಶದ ತಾರೌಕಾ ಪಟ್ಟಣ ವಾಯುವ್ಯಕ್ಕೆ 123 ಕಿ.ಮೀ ದೂರದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 6.5 ರಷ್ಟಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದು 7.32 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 71.51 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 628.8 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.

ಚಂಡಮಾರುತಕ್ಕೆ ಮೂವರು ಬಲಿ: ಸಾವೊ ಪಾಲೊ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಭೀಕರ ಚಂಡಮಾರುತಕ್ಕೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಬ್ರೆಜಿಲ್‌ನ ಅಧಿಕೃತ ಸುದ್ದಿ ಸಂಸ್ಥೆ ಪ್ರಕಾರ, ಲಿಮಿರಾ ನಗರದಲ್ಲಿ ಇಬ್ಬರು ಮಹಿಳೆಯರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ದಕ್ಷಿಣ ಮತ್ತು ಆಗ್ನೇಯ ಬ್ರೆಜಿಲ್‌ಗೆ ಬಲವಾದ ಗಾಳಿಯೊಂದಿಗೆ ಚಂಡಮಾರುತಗಳು ಅಪ್ಪಳಿಸುತ್ತಿವೆ. ಇದು ಆಸ್ತಿ, ಜೀವಹಾನಿ ಉಂಟುಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ್ಯ ರಾಜಧಾನಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸೊರೊಕಾಬಾದ ಎರಡು ಸಾರ್ವಜನಿಕ ಆಸ್ಪತ್ರೆಗಳು ಮುಳುಗಿದ ನಂತರ ಸರ್ಕಾರ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

ಅರ್ಜೆಂಟಿನಾದಲ್ಲೂ ಭೂಕಂಪನ: ಅರ್ಜೆಂಟಿನಾದಲ್ಲಿ ಶನಿವಾರ ಮಧ್ಯರಾತ್ರಿಯ ನಂತರ ಜನರಿಗೆ ಭೂಕಂಪನದ ಅನುಭವವಾಗಿದೆ. ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್‌ನಿಂದ 102 ಕಿ.ಮೀ ಉತ್ತರ-ವಾಯವ್ಯದಲ್ಲಿ ಭೂಕಂಪವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಭಾನುವಾರ ತಿಳಿಸಿದೆ. ಭೂಕಂಪದ ತೀವ್ರತೆ 5.4 ದಾಖಲಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಶನಿವಾರ-ಭಾನುವಾರ ರಾತ್ರಿ 02:36ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಭೂ ಮೇಲ್ಮೈಯಿಂದ ಸುಮಾರು 206.5 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.

ಹಿಮಾಚಲದಲ್ಲಿ ನಿನ್ನೆ ಭೂಕಂಪ: ರಾಜ್ಯದ ಕಿನ್ನೌರ್ ಜಿಲ್ಲೆಯಲ್ಲಿ ಭೂಕಂಪನವಾಗಿದೆ. ಶನಿವಾರ ಮಧ್ಯಾಹ್ನ 2:35ರ ಸುಮಾರಿಗೆ ಘಟನೆ ಸಂಭವಿಸಿದ್ದು, 3.0 ತೀವ್ರತೆ ದಾಖಲಾಗಿದೆ. ಕೇಂದ್ರಬಿಂದು ಲಿಪ್ಪಾ ಖಾಸ್‌ನಲ್ಲಿ (ಮೂರಾಂಗ್) ಐದು ಕಿಲೋಮೀಟರ್ ಆಳದಲ್ಲಿ ಕಂಡುಬಂದಿದೆ. ಯಾವುದೇ ಜೀವ/ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

ರಾಜಸ್ಥಾನದ ಜೈಪುರ ಜಿಲ್ಲೆಯ ಸಂಭಾರ್ ಲೇಕ್ ಎಂಬ ಪಟ್ಟಣದಲ್ಲಿ ಜನವರಿ 18ರ ಬೆಳಿಗ್ಗೆ ಭೂಕಂಪನ ಸಂಭವಿಸಿತ್ತು. ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದರು. ಯಾವುದೇ ಪ್ರಾಣ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಭೂಕಂಪನ ಸಂಭವಿಸುವುದೇಕೆ?: "ಭೂಮಿಯೊಳಗೆ 7 ಪದರಗಳಿರುತ್ತವೆ. ಅವುಗಳಿಗೆ ನಿರಂತರ ಚಲನೆ ಇದೆ. ಈ ಪದರಗಳು ಎಲ್ಲಿ ಹೆಚ್ಚು ಪರಸ್ಪರ ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು 'ಫಾಲ್ಟ್ ಲೈನ್' ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ ಪದರಗಳ ಮೂಲೆಗಳು ತಿರುಚಲ್ಪಡುತ್ತವೆ. ಹೆಚ್ಚಿನ ಒತ್ತಡ ನಿರ್ಮಾಣವಾದಾಗ ಪದರಗಳು ಒಡೆಯುತ್ತವೆ. ಆಗ ಒಳಗಿರುವ ಅಪಾರ ಶಕ್ತಿ ಹೊರಬರಲು ಒಂದು ಮಾರ್ಗ ಕಂಡುಕೊಳ್ಳುತ್ತದೆ. ಹೀಗಾದಾಗ ಭೂಮಿ ಕಂಪಿಸುತ್ತದೆ. ಊಲ್ಕಾಪಾತ, ಜ್ವಾಲಾಮುಖಿ ಸ್ಫೋಟ ಮತ್ತು ಪರಮಾಣು ಪರೀಕ್ಷೆಯ ಸಮಯದಲ್ಲೂ ಭೂಕಂಪನದ ಅನುಭವವಾಗುತ್ತದೆ" ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ: ಉತ್ತರ ಭಾರತದಲ್ಲಿ ನಡುಕ

Last Updated : Jan 21, 2024, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.