ETV Bharat / international

ಬ್ರಿಸ್ಬೇನ್​ನಲ್ಲಿ ಹೊಸ ರಾಯಭಾರ ಕಚೇರಿ ಉದ್ಘಾಟಿಸಿದ ಜೈಶಂಕರ್

ಆಸ್ಟ್ರೇಲಿಯಾದಲ್ಲಿ ಭಾರತದ ಹೊಸ ಕಾನ್ಸುಲೇಟ್ ಕಚೇರಿ ಆರಂಭಿಸಲಾಗಿದೆ.

ಬ್ರಿಸ್ಬೇನ್​ನಲ್ಲಿ ಹೊಸ ರಾಯಭಾರ ಕಚೇರಿ ಉದ್ಘಾಟಿಸಿದ ಇಎಎಂ ಜೈಶಂಕರ್
ಬ್ರಿಸ್ಬೇನ್​ನಲ್ಲಿ ಹೊಸ ರಾಯಭಾರ ಕಚೇರಿ ಉದ್ಘಾಟಿಸಿದ ಇಎಎಂ ಜೈಶಂಕರ್ (IANS)
author img

By ETV Bharat Karnataka Team

Published : Nov 4, 2024, 4:41 PM IST

ಬ್ರಿಸ್ಬೇನ್, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಭಾರತದ ನೂತನ ಕಾನ್ಸುಲೇಟ್ ಜನರಲ್ (ರಾಯಭಾರ ಕಚೇರಿ) ಅನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಉದ್ಘಾಟಿಸಿದರು. ಪ್ರಸ್ತುತ ಎರಡು ರಾಷ್ಟ್ರಗಳ ಪ್ರವಾಸದಲ್ಲಿರುವ ಜೈಶಂಕರ್ ನವೆಂಬರ್ 7 ರವರೆಗೆ ಆಸ್ಟ್ರೇಲಿಯಾದಲ್ಲಿರಲಿದ್ದು, ನವೆಂಬರ್ 8 ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಅವರು ಭಾನುವಾರ ಬ್ರಿಸ್ಬೇನ್ ಗೆ ಆಗಮಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, "ಬ್ರಿಸ್ಬೇನ್​ನಲ್ಲಿ ಇಂದು ಭಾರತದ ಹೊಸ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಔಪಚಾರಿಕವಾಗಿ ಉದ್ಘಾಟಿಸಿರುವುದು ಸಂತೋಷ ತಂದಿದೆ. ಇದು ಕ್ವೀನ್ಸ್ ಲ್ಯಾಂಡ್ ರಾಜ್ಯದೊಂದಿಗಿನ ಭಾರತದ ಸಂಬಂಧವನ್ನು ಬಲಪಡಿಸಲು, ವ್ಯಾಪಾರವನ್ನು ಉತ್ತೇಜಿಸಲು, ಶೈಕ್ಷಣಿಕ ಸಂಪರ್ಕಗಳನ್ನು ಬೆಳೆಸಲು ಮತ್ತು ವಲಸಿಗರಿಗೆ ಸೇವೆ ಸಲ್ಲಿಸಲು ಕೊಡುಗೆ ನೀಡಲಿದೆ." ಎಂದು ಹೇಳಿದ್ದಾರೆ.

ಪ್ರಮುಖ ಅಧಿಕಾರಿಗಳ ಉಪಸ್ಥಿತಿ ಶ್ಲಾಘಿಸಿದ ಜೈಶಂಕರ್: ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ವೀನ್ಸ್ ಲ್ಯಾಂಡ್ ಗವರ್ನರ್ ಡಾ. ಜೀನೆಟ್ ಯಂಗ್ ಮತ್ತು ಸಚಿವರಾದ ರೋಸ್ ಬೇಟ್ಸ್ ಮತ್ತು ಫಿಯೋನಾ ಸಿಂಪ್ಸನ್ ಸೇರಿದಂತೆ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯನ್ನು ಜೈಶಂಕರ್ ಶ್ಲಾಘಿಸಿದರು. ನಂತರ ಪ್ರತ್ಯೇಕ ಸಭೆಯಲ್ಲಿ, ಜೈಶಂಕರ್ ಗವರ್ನರ್ ಯಂಗ್ ಅವರೊಂದಿಗೆ ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಸಹಕಾರ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರು.

"ಇಂದು ಬ್ರಿಸ್ಬೇನ್ ನಲ್ಲಿ ಕ್ವೀನ್ಸ್ ಲ್ಯಾಂಡ್ ನ ಗವರ್ನರ್ ಗೌರವಾನ್ವಿತ ಡಾ. ಜೀನೆಟ್ ಯಂಗ್ ಅವರನ್ನು ಭೇಟಿಯಾಗಿರುವುದು ಸಂತೋಷ ತಂದಿದೆ. ಕ್ವೀನ್ಸ್ ಲ್ಯಾಂಡ್ ರಾಜ್ಯದೊಂದಿಗೆ ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ಬಲಪಡಿಸುವ ಅವಕಾಶಗಳು ಮತ್ತು ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಜೈಶಂಕರ್ ಅವರು ಬ್ರಿಸ್ಬೇನ್​ನ ರೋಮಾ ಸ್ಟ್ರೀಟ್ ಪಾರ್ಕ್ ಲ್ಯಾಂಡ್ಸ್​ನಲ್ಲಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ನಿನ್ನೆ (ಭಾನುವಾರ) ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ - ಆಸ್ಟ್ರೇಲಿಯಾ ಸಂಬಂಧಗಳನ್ನು ಬಲಪಡಿಸಲು ಕೊಡುಗೆ ನೀಡುವ ನಾಲ್ಕು ಪ್ರಮುಖ ಅಂಶಗಳನ್ನು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪರಿವರ್ತನೆಯನ್ನು ಒತ್ತಿ ಹೇಳಿದರು.

"ನಾಲ್ಕು ಕಾರಣಗಳಿವೆ - ಪ್ರಧಾನಿ ಮೋದಿ, ಆಸ್ಟ್ರೇಲಿಯಾ, ಜಗತ್ತು ಮತ್ತು ನೀವೆಲ್ಲರೂ" ಎಂದು ಜೈಶಂಕರ್ ಭಾರತೀಯ ವಲಸೆಗಾರರ ಆತ್ಮೀಯ ಸ್ವಾಗತ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು.

ತಮ್ಮ ಭೇಟಿಯ ಸಮಯದಲ್ಲಿ, ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರೊಂದಿಗೆ 15 ನೇ ವಿದೇಶಾಂಗ ಸಚಿವರ ಚೌಕಟ್ಟು ಸಂವಾದದ (ಎಫ್ಎಂಎಫ್​ಡಿ) ಸಹ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಆಸ್ಟ್ರೇಲಿಯಾದ ಸಂಸತ್ ಭವನದಲ್ಲಿ ನಡೆಯಲಿರುವ 2 ನೇ ರೈಸಿನಾ ಡೌನ್ ಅಂಡರ್ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಆಸ್ಟ್ರೇಲಿಯಾದ ನಾಯಕರು, ಸಂಸದರು ಮತ್ತು ವ್ಯಾಪಾರ, ಮಾಧ್ಯಮ ಮತ್ತು ಚಿಂತಕರ ಚಾವಡಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಭೇಟಿಯನ್ನು ಪೂರ್ಣಗೊಳಿಸಿದ ನಂತರ, ಜೈಶಂಕರ್ ಸಿಂಗಾಪುರಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು 8 ನೇ ಆಸಿಯಾನ್-ಭಾರತ ಥಿಂಕ್ ಟ್ಯಾಂಕ್​ಗಳ ನೆಟ್ ವರ್ಕ್ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಲು ಸಿಂಗಾಪುರದ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ : ಬಾಹ್ಯಾಕಾಶ ನಿಲ್ದಾಣದಲ್ಲಿ 192 ದಿನ ಕಳೆದು ಭೂಮಿಗೆ ಮರಳಿದ 3 ಚೀನಿ ಗಗನಯಾತ್ರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.