ಪಾಮ್ ಬೀಚ್(ಅಮೆರಿಕ): ಸೆಪ್ಟೆಂಬರ್ 10 ರಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕನ್ ಬ್ರಾಡ್ಕಾಸ್ಟಿಂಗ್ ಕಂಪನಿ- ABC ಘೋಷಿಸಿದೆ. ಮೂರು ವಿವಿಧ ಮಾಧ್ಯಮಗಳೊಂದಿಗೆ ಸಂವಾದ ನಡೆಸುವುದಾಗಿ ಡೋನಾಲ್ಡ್ ಟ್ರಂಪ್ ಸಹ ತಮ್ಮ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.
ಗುರುವಾರ ಫ್ಲೋರಿಡಾದ ತನ್ನ ಮಾರ್-ಎ-ಲಾಗೊ ರೆಸಾರ್ಟ್ ನಲ್ಲಿ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಚರ್ಚೆಯಲ್ಲಿ ಹ್ಯಾರಿಸ್ಭಾ ಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಮಲ ಹ್ಯಾರಿಸ್, "ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಸೆಪ್ಟೆಂಬರ್ 10 ರಂದು ನನ್ನೊಂದಿಗೆ ಚರ್ಚಿಸಲು ಬದ್ಧರಾಗಿದ್ದಾರೆ ಎಂದು ನಾನು ಕೇಳಿದ್ದೇನೆ. ಈ ಕ್ಷಣಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಚರ್ಚೆಗೆ ಉಪಾಧ್ಯಕ್ಷ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಟ್ರಂಪ್ ಇಬ್ಬರೂ ಹಾಜರಾಗಲಿರುವುದನ್ನು ದೃಢಪಡಿಸಿದ್ದಾರೆ ಎಂದು ಎಬಿಸಿ ನೆಟ್‌ವರ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಧ್ಯಕ್ಷ ಜೋ ಬೈಡನ್ ಅವರು ಚುನಾವಣೆಯಿಂದ ತಾವು ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ ಬಳಿಕ ಟ್ರಂಪ್ ಈ ಹಿಂದೆ ಎಬಿಸಿ ನ್ಯೂಸ್ ಚರ್ಚೆಯಿಂದ ಹೊರಗುಳಿದಿದ್ದರು.
ಸಂವಾದ ನಡೆಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಹಾಗೂ ಸೆಪ್ಟೆಂಬರ್ 4 ರಂದು ನಾವು ಫಾಕ್ಸ್ ಬ್ರಾಡ್ಕಾಸ್ಟಿಂಗ್ ಕಂಪನಿಯೊಂದಿಗೆ ಚರ್ಚೆಗೆ ಒಪ್ಪಿಕೊಂಡಿದ್ದೇವೆ. ಇನ್ನು ಸೆಪ್ಟೆಂಬರ್ 10 ರಂದು ಎನ್ಬಿಸಿ ಜತೆ ಹಾಗೂ ಸೆಪ್ಟೆಂಬರ್ 25 ರಂದು ABC ಯೊಂದಿಗೂ ಸಂವಾದ ನಡೆಸಲಿದ್ದೇವೆ ಎಂದು ಟ್ರಂಪ್ ಇನ್ನೊಂದೆಡೆ ಹೇಳಿಕೊಂಡಿದ್ದಾರೆ.
ಟ್ರಂಪ್ ತಮ್ಮ ಇನ್ನೊಂದು ಹೇಳಿಕೆಯಲ್ಲಿ, ’’ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಹ್ಯಾರಿಸ್ ಅವರು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ನಾನು ನಮ್ಮಿಬ್ಬರ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
I hear that Donald Trump has finally committed to debating me on September 10.
— Kamala Harris (@KamalaHarris) August 8, 2024
I look forward to it.
ಯುನೈಟೆಡ್ ಆಟೋ ವರ್ಕರ್ಸ್ ಜೊತೆಗಿನ ಕಾರ್ಯಕ್ರಮಕ್ಕಾಗಿ ಡೆಟ್ರಾಯಿಟ್‌ನಲ್ಲಿದ್ದ ಕಮಲಾ ಹ್ಯಾರಿಸ್ ಅವರು ಮುಂದಿನ ಚರ್ಚೆಯನ್ನು ಚರ್ಚಿಸಲು "ಸಂತೋಷ" ಎಂದು ಹೇಳಿದ್ದಾರೆ. ಜತೆಗೆ "ಟ್ರಂಪ್ ಅವರು ಅಂತಿಮವಾಗಿ ಸೆಪ್ಟೆಂಬರ್ 10 ರಂದು ಚರ್ಚೆಗೆ ಒಪ್ಪಿಕೊಂಡಿರುವುದು ನನಗೆ ಖುಷಿಯಾಗಿದೆ. ನಾನು ಅದಕ್ಕಾಗಿ ಎದುರು ನೋಡುತ್ತಿದ್ದೇನೆ. ಮತ್ತು ಅವರು ಸಿಗುತ್ತಾರೆ ಎಂದು ನಾನು ಭಾವಿಸುತ್ತೇನೆ", ಎಂದು ಹ್ಯಾರಿಸ್ ಡೆಟ್ರಾಯಿಟ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಬಿಎಸ್ ನ್ಯೂಸ್ ಮುಂದಿನ ತಿಂಗಳು ಚರ್ಚೆಯನ್ನು ಆಯೋಜಿಸುತ್ತದೆ ಎಂದೂ ಕೂಡಾ ಟ್ರಂಪ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗೆ ಯುಎಸ್ ರಾಜಕೀಯ ನಾಯಕನ ಕಳವಳ - Call for normalcy in Bangladesh