ETV Bharat / international

ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ - Papua New Guinea landslide

ಪಪುವಾ ನ್ಯೂ ಗಿನಿಯಾದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 670ಕ್ಕೆ ಏರಿಕೆಯಾಗಿದೆ.

ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ
ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ (IANS Image)
author img

By PTI

Published : May 26, 2024, 3:34 PM IST

ಮೆಲ್ಬೋರ್ನ್ : ಪಪುವಾ ನ್ಯೂ ಗಿನಿಯಾದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (International Organisation for Migration) ರವಿವಾರ ತಿಳಿಸಿದೆ.

ಶುಕ್ರವಾರದ ಭೂಕುಸಿತದಿಂದ 150 ಕ್ಕೂ ಹೆಚ್ಚು ಮನೆಗಳು ಹೂತುಹೋಗಿವೆ ಎಂದು ಯಾಂಬಲಿ ಗ್ರಾಮ ಮತ್ತು ಎಂಗಾ ಪ್ರಾಂತೀಯ ಅಧಿಕಾರಿಗಳ ಲೆಕ್ಕಾಚಾರಗಳನ್ನು ಆಧರಿಸಿ ಪರಿಷ್ಕೃತ ಸಾವಿನ ಸಂಖ್ಯೆಯನ್ನು ಅಂದಾಜಿಸಲಾಗಿದೆ ಎಂದು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದಲ್ಲಿ ಯುಎನ್ ವಲಸೆ ಏಜೆನ್ಸಿಯ ಮಿಷನ್​ನ ಮುಖ್ಯಸ್ಥ ಸೆರ್ಹಾನ್ ಅಕ್ಟೋಪ್ರಾಕ್ ಹೇಳಿದ್ದಾರೆ. ಸುಮಾರು 60 ಮನೆಗಳು ಭೂಕುಸಿತದಲ್ಲಿ ಹೂತು ಹೋಗಿವೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು.

ಪ್ರಸ್ತುತ 670 ಕ್ಕೂ ಹೆಚ್ಚು ಜನರು ಮಣ್ಣಿನ ಅಡಿ ಹೂತು ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಅಕ್ಟೋಪ್ರಾಕ್ ಅಸೋಸಿಯೇಟೆಡ್ ಪ್ರೆಸ್​ಗೆ ತಿಳಿಸಿದರು.

ಭೂಕುಸಿತದಲ್ಲಿ ಸುಮಾರು ನೂರು ಜನ ಸಾವನ್ನಪ್ಪಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ಅಂದಾಜಿಸಿದ್ದರು. ಭಾನುವಾರದ ವೇಳೆಗೆ ಕೇವಲ ಐದು ಶವಗಳನ್ನು ಮಾತ್ರ ಮಣ್ಣಿನ ಅಡಿಯಿಂದ ಹೊರತೆಗೆಯಲು ಸಾಧ್ಯವಾಗಿದೆ. ಜೊತೆಗೆ ಓರ್ವ ಮೃತನ ಕಾಲು ಮಾತ್ರ ಸಿಕ್ಕಿದೆ.

ರಕ್ಷಣಾ ಕಾರ್ಯಕರ್ತರು ಬದುಕುಳಿದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಭೂಮಿ ಸಡಿಲವಾಗಿದ್ದು ಮತ್ತೆ ಕುಸಿಯುವ ಅಪಾಯ ಎದುರಾಗಿದೆ. ಅಲ್ಲದೆ ಬುಡಕಟ್ಟು ಜನಾಂಗಗಳ ಮಧ್ಯದ ಸಂಘರ್ಷದಿಂದ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯುಂಟಾಗುತ್ತಿದೆ.

ಏತನ್ಮಧ್ಯೆ ರಕ್ಷಣಾ ಕಾರ್ಯಾಚರಣೆಗಾಗಿ ಇನ್ನಷ್ಟು ರಾಷ್ಟ್ರಗಳಿಂದ ನೆರವು ಕೋರುವ ಬಗ್ಗೆ ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ಪಪುವಾ ನ್ಯೂ ಗಿನಿಯಾದ ಸರ್ಕಾರವು ಚಿಂತನೆ ನಡೆಸುತ್ತಿದೆ.

6 ರಿಂದ 8 ಮೀಟರ್ (20 ರಿಂದ 26 ಅಡಿ) ಮಣ್ಣಿನ ಅಡಿಯಲ್ಲಿ ಹೂತು ಹೋಗಿರುವ ಯಾರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಅಕ್ಟೋಪ್ರಾಕ್ ಹೇಳಿದರು. ಮೂರರಿಂದ ನಾಲ್ಕು ಫುಟ್ಬಾಲ್ ಮೈದಾನಗಳ ಗಾತ್ರದ ಪ್ರದೇಶವನ್ನು ಆವರಿಸಿರುವ ಮತ್ತು ಪ್ರಾಂತ್ಯದ ಮೂಲಕ ಹಾದುಹೋಗುವ ಮುಖ್ಯ ಹೆದ್ದಾರಿಯನ್ನು ಕಡಿತಗೊಳಿಸಿರುವ ಭೂಕುಸಿತದ ಬೃಹತ್ ಅವಶೇಷಗಳ ಎರಡೂ ಬದಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ. ಭೂಮಿಯು ಈಗಲೂ ಕುಸಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ಅಪಾಯಕಾರಿಯಾಗುತ್ತಿದೆ ಎಂದು ಅವರು ಹೇಳಿದರು.

ಪ್ರಾಂತೀಯ ರಾಜಧಾನಿ ವಾಬಾಗ್​ನಿಂದ 60 ಕಿಲೋಮೀಟರ್ (35 ಮೈಲಿ) ದೂರದಲ್ಲಿರುವ ಹಾನಿಗೊಳಗಾದ ಗ್ರಾಮಕ್ಕೆ ಶನಿವಾರದಿಂದ ಆಹಾರ, ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತಿದೆ. ಆದರೆ ತಾಂಬಿಟಾನಿಸ್ ಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಿರುವುದು ಪರಿಹಾರ ಸಾಮಗ್ರಿಗಳ ಸಾಗಾಟಕ್ಕೆ ಅಡ್ಡಿಯಾಗುತ್ತಿದೆ. ಪಪುವಾ ನ್ಯೂ ಗಿನಿಯಾ ಸೈನಿಕರು ಪರಿಹಾರ ಸಾಗಿಸುತ್ತಿರುವ ಬೆಂಗಾವಲು ಪಡೆಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಎರಡು ಸಮುದಾಯಗಳ ಮಧ್ಯೆ ದೀರ್ಘಕಾಲದಿಂದ ಸಂಘರ್ಷ ನಡೆಯುತ್ತಿದೆ. ಎರಡೂ ಬಣಗಳ ಮಧ್ಯೆ ಶನಿವಾರ ನಡೆದ ಹೋರಾಟದಲ್ಲಿ ಎಂಟು ಜನ ಸ್ಥಳೀಯರು ಸಾವನ್ನಪ್ಪಿದ್ದಾರೆ. ಘರ್ಷಣೆಯಲ್ಲಿ ಸುಮಾರು 30 ಮನೆಗಳು ಮತ್ತು ಐದು ಅಂಗಡಿಗಳು ಸುಟ್ಟುಹೋಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೋರಾಟಕ್ಕೂ ಭೂಕುಸಿತಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ : ಬ್ರಿಟನ್​ನಲ್ಲಿ 18 ವರ್ಷದವರಿಗೆ 'ಸಮುದಾಯ ಸೇವೆ' ಕಡ್ಡಾಯ: ಪ್ರಧಾನಿ ಸುನಕ್ ಘೋಷಣೆ - Mandatory National Service

ETV Bharat Logo

Copyright © 2024 Ushodaya Enterprises Pvt. Ltd., All Rights Reserved.