ETV Bharat / international

₹52 ಕೋಟಿ ಕೊಟ್ಟು ಖರೀದಿಸಿದ್ದ ಬಾಳೆಹಣ್ಣು ತಿಂದು ರುಚಿ ಸವಿದ ಕ್ರಿಪ್ಟೋಕರೆನ್ಸಿ ಉದ್ಯಮಿ! - MAURIZIO CATTELAN COMEDIAN ARTWORK

ಇತ್ತೀಚಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 52 ಕೋಟಿ ರೂ ಕೊಟ್ಟು ಖರೀದಿಸಿದ್ದ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣಿನ ರುಚಿಯನ್ನು ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಸವಿದಿದ್ದಾರೆ.

ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್, ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣ
ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್, ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣ (AFP)
author img

By ETV Bharat Karnataka Team

Published : Nov 29, 2024, 9:57 PM IST

ಹಾಂ​ಕಾಂಗ್(ಚೀನಾ): ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್​ ಡಾಲರ್(52,45,89,440 ಕೋಟಿ)​ ಕೊಟ್ಟು ಖರೀದಿಸಿದ್ದ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ.

ಹಾಂ​ಕಾಂಗ್​ನ ಖಾಸಗಿ ಹೋಟೆಲ್​ನಲ್ಲಿ ಜಸ್ಟಿನ್ ಸನ್, ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣು ಕಲಾಕೃತಿಯನ್ನು "ಐಕಾನಿಕ್" ಎಂದು ಬಣ್ಣಿಸಿದರು. ಬಳಿಕ ಬಾಳೆಹಣ್ಣನ್ನು ತಿಂದರು. ಮೊದಲ ಬಾರಿಗೆ ಬಾಳೆಹಣ್ಣನ್ನು ಕಚ್ಚಿ ತಿಂದ ನಂತರ ಜಸ್ಟಿನ್ ಸನ್, ಇದು ಇತರ ಬಾಳೆಹಣ್ಣುಗಳಿಗಿಂತ ಉತ್ತಮವಾಗಿದೆ ಎಂದರು. ನಂತರ ಇದು ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಹೇಳಿದರು.

ಜಸ್ಟಿನ್ ಸನ್ ಕಲಾಕೃತಿ "ಕಮೀಡಿಯನ್"ನನ್ನು ಎನ್​ಎಫ್​ಟಿ ಮತ್ತು ವಿಕೇಂದ್ರೀಕೃತ ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ಹೋಲಿಸಿದ್ದಾರೆ. ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣು ಇಟಾಲಿಯನ್​ ಕಲಾವಿದ ಮೌರಿಜಿಯೊ ಕ್ಯಾಟೆಲನ್​ (Maurizio Cattelan) ಅವರ ಕಲಾಕೃತಿ. ಈ ಕಲಾಕೃತಿಗೆ ಕಲಾವಿದ ಮೌರಿಜಿಯೋ "ಕಮೀಡಿಯನ್​" ಎಂದು ಹೆಸರಿಟ್ಟಿದ್ದರು. ಕಳೆದ ವಾರ ನ್ಯೂಯಾರ್ಕ್‌ನ ಸೋಥೆಬಿಸ್​ನಲ್ಲಿ ನಡೆದ ಈ ಕಲಾಕೃತಿಯ ಹರಾಜಿನಲ್ಲಿ ಭಾಗವಹಿಸಿದ್ದ ಏಳು ಬಿಡ್‌ದಾರರ ಪೈಕಿ ಜಸ್ಟಿನ್ ಸನ್ 6.2 ಮಿಲಿಯನ್​ ಡಾಲರ್​ ಕೊಟ್ಟು ಕಲಾಕೃತಿಯನ್ನು ಖರೀದಿಸಿದ್ದರು.

ಏನೀ ಕಲಾಕೃತಿಯ ಮಹತ್ವ: 2019ರಲ್ಲಿ ಮಿಯಾಮಿ ಬೀಚ್​ನಲ್ಲಿ ನಡೆದ ಆರ್ಟ್​ ಬಾಸೆಲ್​ನಲ್ಲಿ ಮೊದಲ ಬಾರಿಗೆ ಕಲಾವಿದ ಮೌರಿಜಿಯೊ ಕ್ಯಾಟೆಲನ್, ಈ ಬಿಳಿ ಗೋಡೆಗೆ ಹಳದಿ ಬಾಳೆಹಣ್ಣನ್ನು ಟೇಪ್​ನಿಂದ ಅಂಟಿಸಿದ ಕಲಾಕೃತಿ ಪ್ರದರ್ಶನಕ್ಕಿಟ್ಟಿದ್ದರು. ಆಗ ನೋಡುಗರು ತಮಾಷೆಯಾಗಿದೆ ಎಂದು ವ್ಯಾಖ್ಯಾನಿಸಿ, ಕಲಾ ಸಂಗ್ರಹಕಾರರ ಮಾನದಂಡಗಳ ಮೇಲೆ ಪ್ರಶ್ನೆ ಹಾಗೂ ಟೀಕೆಗಳ ಮಳೆಯನ್ನೇ ಹರಿಸಿದ್ದರು. ಅಷ್ಟೇ ಅಲ್ಲ ಒಂದು ಹಂತದಲ್ಲಿ ಇನ್ನೊಬ್ಬ ಕಲಾವಿದ ಗೋಡೆಯಿಂದ ಬಾಳೆಹಣ್ಣನ್ನು ತೆಗೆದು ತಿಂದಿದ್ದ ಸನ್ನಿವೇಶ ನಡೆದಿತ್ತು. ಆದರೂ ಆ ಕಲಾಕೃತಿ ತುಂಬಾ ಗಮನ ಸೆಳೆದಿತ್ತು. ಇಂದು ಚರ್ಚೆ ಹಾಗೂ ಕುತೂಹಲವನ್ನು ಹುಟ್ಟುಹಾಕುವ ಆಧುನಿಕ ಕಲೆಯ ಸಾಮರ್ಥ್ಯದ ಸಂಕೇತವಾಗಿ ಉಳಿದಿದೆ. ಆದರೆ ಗ್ಯಾಲರಿಯ ಮಾಹಿತಿ ಪ್ರಕಾರ, ಆ ಕಲಾಕೃತಿಯ ಮೂರು ಆವೃತ್ತಿಗಳು $120,000 ಮತ್ತು $150,000 ನಡುವೆ ಮಾರಾಟವಾಗಿದ್ದವು.

ಇಷ್ಟೊಂದು ಹಣ ನೀಡಿ ಖರೀದಿಸಿದ್ದೇಕೆ?: ಇದೀಗ ಮತ್ತೆ ಐದು ವರ್ಷಗಳ ನಂತರ ಅದೇ ರೀತಿಯ ಕಲಾಕೃತಿಗೆ ಕ್ರಿಪ್ಟೋಕರೆನ್ಸಿ ಫ್ಲಾಟ್​ಫಾರ್ಮ್​ TRON ನ ಸಂಸ್ಥಾಪಕ ಜಸ್ಟಿನ್ ಸನ್ ಸೋಥೆಬಿ ಹರಾಜಿನಲ್ಲಿ ಹಿಂದಿನ ಬೆಲೆಯ 50 ಪಟ್ಟು ಹೆಚ್ಚು ಬೆಲೆ ಪಾವತಿಸಿ ಖರೀದಿಸಿದ್ದರು. ನಿಖರವಾಗಿ ಹೇಳುವುದಾದರೆ, ಸನ್​ ಅವರು ಒಂದು ಬಾಳೆಹಣ್ಣನ್ನು ಗೋಡೆಯ ಟೇಪ್​ನಿಂದ ಅಂಟಿಸುವ ಮತ್ತು ಅದನ್ನು ಕಮೀಡಿಯನ್​ ಎಂದು ಕರೆಯುವ ಅಧಿಕಾರವಿರುವ ದೃಢೀಕರಣದ ಪ್ರಮಾಣಪತ್ರವನ್ನು ಅಷ್ಟು ಬೆಲೆ ಕೊಟ್ಟು ಖರೀದಿಸಿದಂತಾಗಿದೆ.

ಹೆಚ್ಚು ಚಿಂತನೆ ಮತ್ತು ಚರ್ಚೆಗೆ ಸ್ಫೂರ್ತಿ : ಬಾಳೆಹಣ್ಣು ಖರೀದಿಸಿದ ಬಳಿಕ ಮಾತನಾಡಿದ್ದ ಜಸ್ಟಿನ್​ ಸನ್​, "ನಾನು ಬಾಳೆಹಣ್ಣನ್ನು ಖರೀದಿಸಿದ್ದೇನೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಮೌರಿಜಿಯೊ ಕ್ಯಾಟೆಲನ್ ಅವರ ಸಾಂಪ್ರದಾಯಿಕ ಕೃತಿಯಾದ ಕಮಿಡೀಯನ್​ ಅನ್ನು $6.2 ಮಿಲಿಯನ್‌ಗೆ ಯಶಸ್ವಿಯಾಗಿ ನನ್ನದಾಗಿಸಿಕೊಂಡಿದ್ದೇನೆ ಎಂದು ಹೇಳಲು ಉತ್ಸುಕನಾಗಿದ್ದೇನೆ. ಇದು ಕೇವಲ ಕಲಾಕೃತಿಯಲ್ಲ, ಕಲೆ, ಮೇಮ್ಸ್​ ಹಾಗೂ ಕ್ರಿಪ್ಟೋಕರೆನ್ಸಿ ಸಮುದಾಯದ ಪ್ರಪಂಚಗಳಿಗೆ ಕೊಂಡಿಯಾಗುವ ಸಾಂಸ್ಕೃತಿಕ ವಿದ್ಯಾಮಾನವನ್ನು ಈ ಬಾಳೆಹಣ್ಣು ಪ್ರತಿನಿಧಿಸುತ್ತದೆ. ಈ ಕಲಾಕೃತಿ ಭವಿಷ್ಯದಲ್ಲಿ ಹೆಚ್ಚು ಚಿಂತನೆ ಮತ್ತು ಚರ್ಚೆಗೆ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದ್ದರು.

ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.