ETV Bharat / international

ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಕೆ ಮಾಡಿದ ಚೀನಾ; ಅಸಲಿ ಕಾರಣ ಇದು! - China raising retirement age - CHINA RAISING RETIREMENT AGE

ಸರ್ಕಾರದ ಹೊಸ ನೀತಿಯು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

china-raising-retirement-age-now-among-youngest-in-worlds-major-economies
ಚೀನಾ (ಐಎಎನ್​ಎಸ್​)
author img

By PTI

Published : Sep 13, 2024, 3:49 PM IST

ಬೀಜಿಂಗ್​: ಚೀನಾ ಸರ್ಕಾರ ತನ್ನ ದೇಶದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ. ಅದರಲ್ಲೂ ಮಹಿಳೆಯರ ನಿವೃತ್ತಿ ವಯಸ್ಸಿನಲ್ಲಿ ಭಾರೀ ಏರಿಕೆ ಕಂಡಿದೆ, ಚೀನಾದಲ್ಲಿ ಸದ್ಯ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಹಿರಿಯ ನಾಗರೀಕರ ಸಂಖ್ಯೆ ಹೆಚ್ಚಿದೆ. ಇದೀಗ ಈ ನಿವೃತ್ತಿ ವಯಸ್ಸು ಏರಿಕೆ ಮಾಡುವುದರಿಂದ ದುಡಿಯುವ ವರ್ಗದಲ್ಲಿ ಹಿರಿಯ ವಯಸ್ಸಿನವರನ್ನು ಕಾಣಬಹುದಾಗಿದೆ. ಚೀನಾದಲ್ಲಿ 15 ವರ್ಷಗಳ ಬಳಿಕ ಈ ನಿವೃತ್ತಿ ವಯಸ್ಸು ಏರಿಕೆ ಮಾಡಿ ಆದೇಶ ಮಾಡಲಾಗಿದೆ. ಹೊಸ ಆದೇಶದ ಪ್ರಕಾರ ಇನ್ಮುಂದೆ ಚೀನಾದಲ್ಲಿ ಸರ್ಕಾರಿ ಪುರುಷ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60 ರಿಂದ 63 ವರ್ಷಕ್ಕೆ ಏರಿಕೆ ಮಾಡಿದರೆ, ಮಹಿಳೆಯರ ನಿವೃತ್ತಿ ವಯಸ್ಸು 55 ರಿಂದ 58 ಕ್ಕೆ ಏರಿಕೆ ಆಗಲಿದೆ.

ಉದ್ಯೋಗಿಗಳ ಹಿತರಕ್ಷಣೆಗಾಗಿ ಈ ನಿರ್ಧಾರ ಎಂದ ಸರ್ಕಾರ; ದೇಶದ ಅತಿ ಪ್ರಮುಖ ಆರ್ಥಿಕತೆ ದೇಶವಾಗಿರುವ ಚೀನಾದಲ್ಲಿ ಉದ್ಯೋಗಿಗಳ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಮಹಿಳೆಯರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿದೆ. ಆದರೆ, ಇದೀಗ ಬ್ಲೂ ಕಾಲರ್ ವರ್ಗದ ದುಡಿಯುವ​ ಮಹಿಳೆಯರ ನಿವೃತ್ತಿ ವಯಸ್ಸು 55ಕ್ಕೆ ಏರಿಕೆಯಾಗಿದೆ. ಈ ನೀತಿಯು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ ಎಂದು ಚೀನಾ ಸರ್ಕಾರ(ಚೀನಾ ಪೀಪಲ್ಸ್​​ ಕಾಂಗ್ರೆಸ್​​​​) ತಿಳಿಸಿದೆ ಎಂದು ಸಿಸಿಟಿವಿ ವರದಿ ಮಾಡಿದೆ.

ನಿವೃತ್ತಿ ವಯಸ್ಸಿಗೆ ಕಾರಣ: ಚೀನಾ ಇದೀಗ ನಿವೃತ್ತಿ ವಯಸ್ಸು ಹೆಚ್ಚಳ ಮಾಡಿರುವುದಕ್ಕೆ ಕಾರಣ ದುಡಿಯುವ ವರ್ಗದ ಕೊರತೆಯಲ್ಲ. ಬದಲಾಗಿ ಅಲ್ಲಿನ ಪಿಂಚಣಿ ಆರ್ಥಿಕತೆಯ ಕೊರತೆಯಾಗಿದೆ. ದಿ ಚೈನೀಸ್​ ಅಕಾಡೆಮಿ ಆಫ್​ ಸೆನ್ಸ್​​ ಪ್ರಕಾರ, ಚೀನಾದ ಆರ್ಥಿಕತೆ ಮೇಲೆ ಪಿಂಚಣಿ ವ್ಯವಸ್ಥೆ ಭಾರ ಹೆಚ್ಚಿದೆ, ಈ ಒತ್ತಡವನ್ನು ಕಡಿಮೆ ಮಾಡಬೇಕು ಎಂದರೆ, ಸದ್ಯ ಅವರನ್ನು ಇನ್ನು ಹೆಚ್ಚು ವರ್ಷ ದುಡಿಸಿಕೊಳ್ಳುವುದೇ ಉತ್ತಮ ಮಾರ್ಗವಾಗಿದೆ. ಇದರಿಂದ ಅವರಿಗೆ ಪಿಂಚಣಿ ನೀಡುವುದು ತಡವಾಗಲಿದೆ. ಇದರಿಂದ ದುಡಿಯುವ ಕೈಗಳು ಹೆಚ್ಚಲಿದೆ ಎಂದು ತಿಳಿಸಿದೆ.

ಅನೇಕ ಜನರು ಈಗಾಗಲೇ ನಿವೃತ್ತಿ ಅಂಚಿನಲ್ಲಿದ್ದು, ಪಿಂಚಣಿ ನಿಧಿ ಹಂಚಿಕೆ ಒತ್ತಡವಾಗಿದೆ. ಇದೇ ಕಾರಣಕ್ಕೆ ಇದೀಗ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಆಸ್ಟ್ರೇಲಿಯಾದಲ್ಲಿನ ವಿಕ್ಟೋರಿಯಾ ಯುನಿವರ್ಸಿಟಿಯ ಹಿರಿಯ ಸಂಶೋಧಕರಾದ ಕ್ಸಿಯುಜಿಯಾನ್ ಪೆಂಗ್ ತಿಳಿಸಿದ್ದಾರೆ. ವ್ಯಕ್ತಿಯ ಹುಟ್ಟಿದ ದಿನಾಂಕದ ಮೇಲೆ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಕ್ಷಿಪಣಿ ತಯಾರಿಸಲು ಸಹಾಯ ಮಾಡಿದ 3 ಚೀನಾ ಕಂಪನಿಗಳ ಮೇಲೆ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.