ETV Bharat / international

ಭಾರತ ವಿರೋಧಿ ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಪಟ್ಟು

ಭಾರತದ ವಿರುದ್ಧ 'ಉಗ್ರನೊಬ್ಬನ ಹತ್ಯೆ' ಆರೋಪ ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಟ ಎದುರಾಗಿದೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸ್ವಪಕ್ಷೀಯ ಸಂಸದರೇ ಒತ್ತಾಯಿಸಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ
ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ (Getty Images)
author img

By ETV Bharat Karnataka Team

Published : 2 hours ago

ಒಟ್ಟಾವಾ(ಕೆನಡಾ): ಖಲಿಸ್ತಾನಿ ಉಗ್ರ ಹರ್ದಿಪ್​ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಅಲ್ಲಿನ ಪ್ರಧಾನಿ ಜಸ್ಟಿನ್​ ಟ್ರುಡೋ ವಿರುದ್ಧ ಅವರದ್ದೇ ಪಕ್ಷದ ಸಂಸದರು ಬಂಡಾಯವೆದ್ದಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹಿಸಿರುವ ಅವರು ಗಡುವು ಕೂಡ ನೀಡಿದ್ದಾರೆ.

ಕೆನಡಾ ಮತ್ತು ಭಾರತ ದೇಶಗಳು ಪರಸ್ಪರ ರಾಯಭಾರಿಗಳನ್ನು ವಜಾ ಮಾಡಿ ತಮ್ಮ ದೇಶಗಳಿಗೆ ಕರೆಸಿಕೊಂಡಿವೆ. ಇದರಿಂದ ಉಭಯ ರಾಷ್ಟ್ರಗಳ ನಡುವೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ನಿಜ್ಜರ್​ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಜಸ್ಟಿನ್​ ಟ್ರುಡೋ ಆರೋಪಿಸಿದ್ದಾರೆ. ಇದಕ್ಕೆ ಸೂಕ್ತ ಸಾಕ್ಷ್ಯ ನೀಡುವಂತೆ ಭಾರತ ಹೇಳಿದೆ.

ಲಿಬರಲ್​​ ಪಕ್ಷದ ಗೌಪ್ಯ ಸಭೆ: ಈ ಮಧ್ಯೆ, ಜಸ್ಟಿನ್​ ಟ್ರುಡೋ ಅವರು ಪ್ರತಿನಿಧಿಸುವ ಲಿಬರಲ್​ ಪಕ್ಷವು ಬುಧವಾರ ರಹಸ್ಯ ಸಭೆ ನಡೆಸಿದೆ. ಅದರಲ್ಲಿ ಟ್ರುಡೋ ವಿರುದ್ಧ 24 ಮಂದಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪಕ್ಷವು ಈಗಾಗಲೇ ಆಡಳಿತ ವಿರೋಧಿ ಕಾರಣಕ್ಕಾಗಿ ಸಂಖ್ಯಾಬಲ ಕಳೆದುಕೊಳ್ಳುತ್ತಿದೆ. ಪ್ರಧಾನಿ ಟ್ರುಡೋ ಅವರ ನಿಲುವುಗಳಿಂದಾಗಿ ಜನರು ಅಸಮಾಧಾನಗೊಂಡಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಹುದ್ದೆಗೆ ಅವರು ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ಸಂಸದರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಲಿಬರಲ್​ ಪಕ್ಷದ 153 ಸಂಸದರ ಪೈಕಿ 24 ಮಂದಿ ರಾಜೀನಾಮೆ ಕೋರಿ ಟ್ರುಡೋಗೆ ಸಹಿ ಸಹಿತ ಪತ್ರ ಬರೆದಿದ್ದಾರೆ. ಜೊತೆಗೆ, ಅಕ್ಟೋಬರ್​ 28ರೊಳಗೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಗಡುವು ನೀಡಿದ್ದಾರೆ.

ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗಲು ಪ್ರಧಾನಿ ಟ್ರುಡೊ ಅವರ ಧೋರಣೆಯೇ ಕಾರಣ ಎಂದು ವಲಸೆ ಇಲಾಖೆಯ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ. ಬಹಳ ದಿನಗಳಿಂದ ಕಾಡುತ್ತಿರುವ ವಿಷಯವನ್ನು ಇಂದು ಬಹಿರಂಗವಾಗಿ ಹೇಳಬೇಕಿದೆ. ಚುನಾವಣೆಯಲ್ಲಿ ಏನಾಯಿತು ಎಂಬುದರ ಬಗ್ಗೆ ಸಂಸದರು ಪ್ರಧಾನಿಗೆ ತಿಳಿಸಿದ್ದಾರೆ. ಇದನ್ನು ಅವರು ಆಲಿಸಬೇಕು ಎಂದಿದ್ದಾರೆ.

ವಲಸೆ ನಿಯಂತ್ರಣಕ್ಕೆ ಕಠಿಣ ನಿರ್ಧಾರ: ಇನ್ನೊಂದೆಡೆ, ಕೆನಡಾ ಸರ್ಕಾರ ವಲಸೆ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ತನ್ನ ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಲಿದೆ. ಲಿಬರಲ್​ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ಚರ್ಚೆಗಳು ನಡೆದಿವೆ. 2024ರಲ್ಲಿ 4,85,000 ವಲಸಿಗರನ್ನು ಕಾಯಂಗೊಳಿಸಿದೆ. ಆದರೆ, 2025ರಲ್ಲಿ ಈ ಸಂಖ್ಯೆಯನ್ನು 3,80,000ಕ್ಕೆ ಇಳಿಸಿದೆ. 2027ರ ವೇಳೆಗೆ ಕೇವಲ 3,65,000 ಜನರು ಮಾತ್ರ ದೇಶದಲ್ಲಿ ಉಳಿಯಲು ಅವಕಾಶ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಿಯಾಂಕಾ ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ್​ ಖರ್ಗೆಗೆ ಅವಮಾನ: ಬಿಜೆಪಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.