ETV Bharat / international

ಬ್ಲಿಂಕೆನ್ ಇಸ್ರೇಲ್​ಗೆ ಭೇಟಿ: ಕದನ ವಿರಾಮ, ರಫಾ ಕಾರ್ಯಾಚರಣೆ ಬಗ್ಗೆ ಚರ್ಚೆ - ANTONY BLINKEN

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಶುಕ್ರವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ.

Blinken to visit Tel Aviv on Friday for talks on hostage deal, Rafah operation

author img

By ETV Bharat Karnataka Team

Published : Mar 21, 2024, 1:07 PM IST

ಟೆಲ್ ಅವೀವ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಶುಕ್ರವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಇದಕ್ಕೂ ಮುನ್ನ ಗುರುವಾರ ಕ್ರಮವಾಗಿ ಕೈರೋ ಮತ್ತು ರಿಯಾಧ್​ನಲ್ಲಿ ಹಿರಿಯ ಈಜಿಪ್ಟ್ ಮತ್ತು ಸೌದಿ ನಾಯಕರನ್ನು ಕೂಡ ಅವರು ಭೇಟಿ ಮಾಡಲಿದ್ದಾರೆ.

ಅಮೆರಿಕದ ಅತ್ಯಂತ ಶಕ್ತಿಶಾಲಿ ನಾಯಕರಲ್ಲೊಬ್ಬರಾಗಿರುವ ಬ್ಲಿಂಕೆನ್ ಅವರ ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಭೇಟಿಯ ಸಂದರ್ಭದಲ್ಲಿ ಒತ್ತೆಯಾಳುಗಳ ವಿನಿಮಯ ಒಪ್ಪಂದದ ಬಗ್ಗೆ ಅಮೆರಿಕದ ದೃಷ್ಟಿಕೋನ ಮತ್ತು ರಾಫಾ ಪ್ರದೇಶದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಸಂಭಾವ್ಯ ನೆಲದ ಆಕ್ರಮಣದ ಬಗ್ಗೆ ಸಂವಹನ ನಡೆಯಲಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ಯಾಲೆಸ್ಟೈನ್ ನಾಗರಿಕರ ಅಪಾರ ಸಾವು-ನೋವಿಗೆ ಕಾರಣವಾಗಬಹುದಾದ ರಾಫಾ ನೆಲದ ಕಾರ್ಯಾಚರಣೆಯನ್ನು ಮುಂದುವರಿಸದಂತೆ ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ನೆತನ್ಯಾಹು ಅವರಿಗೆ ಆಗ್ರಹಿಸಿದ್ದಾರೆ. ಗಾಜಾ ಪಟ್ಟಿಯ ರಾಫಾ ಪ್ರದೇಶದಲ್ಲಿ ಅಂದಾಜು 1.3 ಮಿಲಿಯನ್ ಜನರು ವಾಸಿಸುತ್ತಿದ್ದು, ರಫಾದ ಉತ್ತರಕ್ಕೆ ನಾಗರಿಕರನ್ನು ಸ್ಥಳಾಂತರಿಸುವುದು ಇಸ್ರೇಲಿ ಪಡೆಗಳ ಆಲೋಚನೆಯಾಗಿದೆ.

ಆದಾಗ್ಯೂ, ರಫಾ ಕಾರ್ಯಾಚರಣೆಯನ್ನು ತಾನು ಕಟುವಾಗಿ ವಿರೋಧಿಸುವುದಾಗಿ ಈಜಿಪ್ಟ್ ಇಸ್ರೇಲಿ ಮತ್ತು ಅಮೆರಿಕನ್ ಅಧಿಕಾರಿಗಳಿಗೆ ತಿಳಿಸಿದೆ. ರಫಾದಲ್ಲಿ ನೆಲದ ಕಾರ್ಯಾಚರಣೆ ಆರಂಭವಾದಲ್ಲಿ ಅಲ್ಲಿನ ಜನ ತನ್ನ ಗಡಿಯಲ್ಲಿರುವ ಸಿನಾಯ್ ಪ್ರದೇಶಕ್ಕೆ ಬರುವ ಸಾಧ್ಯತೆ ಇರುವುದರಿಂದ ಈಜಿಪ್ಟ್​ ಇದನ್ನು ವಿರೋಧಿಸುತ್ತಿದೆ. ಏತನ್ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಪರೋಕ್ಷ ಮಧ್ಯಸ್ಥಿಕೆ ಮಾತುಕತೆ ಕತಾರ್​ನ ದೋಹಾದಲ್ಲಿ ಮುಂದುವರೆದಿದೆ.

ಒತ್ತೆಯಾಳುಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಮಾಸ್ ಮುಂದಿಟ್ಟ ಅನೇಕ ಬೇಡಿಕೆಗಳಿಗೆ ಇಸ್ರೇಲ್ ಕಠಿಣ ನಿಲುವು ತಾಳುತ್ತಿರುವುದರಿಂದ ಮಧ್ಯಸ್ಥಿಕೆ ಮಾತುಕತೆಗಳು ಸುಗಮವಾಗಿ ನಡೆಯುತ್ತಿಲ್ಲ. ತನ್ನ ಷರತ್ತುಗಳ ಪ್ರಕಾರ ಮಾತ್ರ ಮಾತುಕತೆ ಮುಂದುವರಿಯಬೇಕೆಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುವಂತೆ ಇಸ್ರೇಲ್ ಒತ್ತಾಯಿಸಿದೆ. ಆದರೆ ಇದಕ್ಕೆ ಬದಲಾಗಿ ಘೋರ ಅಪರಾಧಗಳ ಆರೋಪ ಹೊತ್ತಿರುವ ಇಸ್ರೇಲಿ ಜೈಲುಗಳಲ್ಲಿ ಇರಿಸಲಾಗಿರುವ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅದು ಮಧ್ಯವರ್ತಿಗಳಿಗೆ ತಿಳಿಸಿದೆ. ಹಮಾಸ್ ಸಂಪೂರ್ಣವಾಗಿ ಬಲಹೀನವಾಗಿದೆ ಮತ್ತು ಅದರ ಉಳಿದ ಬಲವನ್ನು ನಿರ್ಮೂಲನೆಗೊಳಿಸಬೇಕಾದರೆ ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲೇಬೇಕಾಗುತ್ತದೆ ಎಂದು ಮೊಸ್ಸಾದ್, ಶಿನ್ ಬೆಟ್ ಮತ್ತು ಮಿಲಿಟರಿ ಗುಪ್ತಚರ ಸೇರಿದಂತೆ ಇಸ್ರೇಲ್ ಗುಪ್ತಚರ ಸಂಸ್ಥೆಗಳು ಇಸ್ರೇಲ್ ಸರ್ಕಾರಕ್ಕೆ ಹೇಳಿವೆ.

ಇದನ್ನೂ ಓದಿ: ಫಿನ್ಲೆಂಡ್‌ ವಿಶ್ವದ ಸಂತೋಷದಾಯಕ ದೇಶ: ಭಾರತದ ಸ್ಥಾನವೇನು? - Global Happiness Index 2024

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.