ETV Bharat / international

5 ದಿನಗಳ ಭಾರತ ಭೇಟಿಗೆ ಆಗಮಿಸಿದ ಭೂತಾನ್ ಪ್ರಧಾನಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಚರ್ಚೆ - Bhutan Prime Minister

ಭೂತಾನ್ ಪ್ರಧಾನಿ ಡಾಶೊ ಶೆರಿಂಗ್ ಟೊಬ್ಗೆ ಭಾರತಕ್ಕೆ ಆಗಮಿಸಿದ್ದಾರೆ.

Bhutan PM arrives in India to expand 'exemplary ties of friendship'

author img

By ETV Bharat Karnataka Team

Published : Mar 14, 2024, 4:56 PM IST

ನವದೆಹಲಿ : ಭೂತಾನ್ ಪ್ರಧಾನಿ ಡಾಶೊ ಶೆರಿಂಗ್ ಟೊಬ್ಗೆ ಅವರು ಐದು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. 2024 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಟೊಬ್ಗೆ ಅವರ ಮೊದಲ ವಿದೇಶ ಪ್ರವಾಸವಾಗಿದೆ. ಪ್ರಧಾನಿ ಟೊಬ್ಗೆ ಅವರನ್ನು ವಿಮಾನ ನಿಲ್ದಾಣದಲ್ಲಿ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸ್ವಾಗತಿಸಿದರು. ಮಾರ್ಚ್ 14 ರಿಂದ 18 ರವರೆಗೆ ಭೂತಾನ್ ಪ್ರಧಾನಿ ಭಾರತದಲ್ಲಿ ಇರಲಿದ್ದಾರೆ.

"ಭಾರತಕ್ಕೆ ಹಾರ್ದಿಕ ಸ್ವಾಗತ! 2024 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಭೂತಾನ್ ಪ್ರಧಾನಿ ಡಾಶೊ ಶೆರಿಂಗ್ ಟೊಬ್ಗೆ ತಮ್ಮ ಮೊದಲ ಸಾಗರೋತ್ತರ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ. ಭೂತಾನ್ ಪ್ರಧಾನಿಯ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ಬಲವಾದ ಸ್ನೇಹದ ಸಂಕೇತವಾಗಿದೆ" ಎಂದು ವಿದೇಶಾಂಗ ಸಚಿವಾಲಯ ಗುರುವಾರ ತನ್ನ ಎಕ್ಸ್ ಹ್ಯಾಂಡಲ್ ನಲ್ಲಿ ತಿಳಿಸಿದೆ.

ತಮ್ಮ ಭೇಟಿಯ ಸಮಯದಲ್ಲಿ, ಪಿಎಂ ಟೊಬ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಹಲವಾರು ಭಾರತೀಯ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಟೊಬ್ಗೆ ಅವರೊಂದಿಗೆ ವಿದೇಶಾಂಗ ವ್ಯವಹಾರ ಮತ್ತು ವಿದೇಶಾಂಗ ವ್ಯಾಪಾರ ಸಚಿವರು, ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವರು, ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯೋಗ ಸಚಿವರು ಮತ್ತು ಭೂತಾನ್ ರಾಯಲ್ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಇದ್ದಾರೆ.

ಎರಡೂ ರಾಷ್ಟ್ರಗಳು ಎಲ್ಲ ಹಂತಗಳಲ್ಲಿ ನಂಬಿಕೆ, ಸದ್ಭಾವನೆ ಮತ್ತು ಪರಸ್ಪರ ತಿಳಿವಳಿಕೆಯನ್ನು ಆಧರಿಸಿ ಆತ್ಮೀಯ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಹಂಚಿಕೊಂಡಿವೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭೂತಾನ್​ಗೆ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ, ಇಂಧನ ದಕ್ಷತೆ ಮತ್ತು ಆಹಾರ ಸುರಕ್ಷತಾ ಕ್ರಮಗಳಲ್ಲಿನ ಸಹಕಾರ ಸೇರಿದಂತೆ ಮೂರು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಅನುಮೋದನೆ ನೀಡಲಾಗಿದೆ.

ಭಾರತದಿಂದ ಭೂತಾನ್ ಗೆ ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕೆಂಟ್ (ಪಿಒಎಲ್) ಮತ್ತು ಸಂಬಂಧಿತ ಉತ್ಪನ್ನಗಳ ಪೂರೈಕೆ ಕುರಿತ ತಿಳಿವಳಿಕೆ ಒಪ್ಪಂದವು ಭೂತಾನ್​ಗೆ ಪೆಟ್ರೋಲಿಯಂ ಉತ್ಪನ್ನಗಳ ದೀರ್ಘಕಾಲೀನ ಪೂರೈಕೆ ಖಚಿತಪಡಿಸುತ್ತದೆ ಮತ್ತು ಹೈಡ್ರೋಕಾರ್ಬನ್ ವಲಯದಲ್ಲಿ ದ್ವಿಪಕ್ಷೀಯ ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ.

ಇದನ್ನೂ ಓದಿ : ಇದೇ ವಾರ ಕೈರೋಗೆ ಹಮಾಸ್ ನಿಯೋಗ ಭೇಟಿ: ತಾತ್ಕಾಲಿಕ ಕದನವಿರಾಮ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.