ಲಂಡನ್: ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ನಿಮಿತ್ತ ಲಂಡನ್ಗೆ ಭೇಟಿ ನೀಡಿದ್ದು, ಅಲ್ಲಿ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಅವರೊಂದಿಗೆ ಪುತ್ಥಳಿಗೆ ಭೇಟಿ ನೀಡಿದರು.
ಲಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್ನ ಬಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು. ಲಾಂಬೆತ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್, ಬಸವ ಸಮಿತಿ ಅಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಉಪಸ್ಥಿತರಿದ್ದರು.
ಈ ಐತಿಹಾಸಿಕ ಪುತ್ಥಳಿಯ ದಶಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿಗೆ ಆಹ್ವಾನ ಪತ್ರವನ್ನು ಹಸ್ತಾಂತರಿಸುವಂತೆ ವಿನಂತಿಸಿ ಲಾಂಬೆತ್ ಬಸವೇಶ್ವರ ಫೌಂಡೇಶನ್ ಬೊಮ್ಮಾಯಿ ಅವರಿಗೆ ಆಹ್ವಾನ ಪತ್ರ ನೀಡಿತು. 2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸ್ಮಾರಕವನ್ನು ಅನಾವರಣಗೊಳಿಸಿದ್ದರು.
ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ: ಟಿಕೆಟ್ಗಾಗಿ ಬೊಮ್ಮಾಯಿ ಪುತ್ರ ಸೇರಿ 57 ಆಕಾಂಕ್ಷಿಗಳಿಂದ ಅರ್ಜಿ - Shiggaon Byelection