ETV Bharat / international

ಬಾಂಗ್ಲಾದೇಶ ಬಂಡಾಯ: ಪ್ರಧಾನಿ ಬಳಿಕ, ಸುಪ್ರೀಂಕೋರ್ಟ್​ ಸಿಜೆ, ಕೇಂದ್ರ ಬ್ಯಾಂಕ್​ ಗವರ್ನರ್​ ರಾಜೀನಾಮೆ - Bangladesh Chief Justice resign - BANGLADESH CHIEF JUSTICE RESIGN

ಬಾಂಗ್ಲಾದೇಶದ ವಿದ್ಯಾರ್ಥಿಗಳ ಪ್ರತಿಭಟನೆಗೆ ಉನ್ನತ ಹುದ್ದೆಗಳಲ್ಲಿನ ಅಧಿಕಾರಿಗಳು ರಾಜೀನಾಮೆ ಘೋಷಿಸುತ್ತಿದ್ದಾರೆ. ಸುಪ್ರೀಂಕೋರ್ಟ್​ ಸಿಜೆ, ಕೇಂದ್ರೀಯ ಬ್ಯಾಂಕ್ ಗವರ್ನರ್​ ಶನಿವಾರ ರಾಜೀನಾಮೆ ನೀಡಿದ್ದಾರೆ.

ಬಾಂಗ್ಲಾದೇಶ ಬಂಡಾಯ
ಬಾಂಗ್ಲಾದೇಶ ಬಂಡಾಯ (IANS)
author img

By PTI

Published : Aug 10, 2024, 7:17 PM IST

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಬಂಡಾಯಕ್ಕೆ ದೊಡ್ಡ ದೊಡ್ಡ ತಲೆಗಳು ಉರುಳುತ್ತಿವೆ. ಪ್ರಧಾನಿ ಶೇಕ್​ ಹಸೀನಾ ಅವರು ರಾಜೀನಾಮೆ ನೀಡಿ ದೇಶ ತೊರೆದ ಬಳಿಕವೂ ಹಿಂಸಾಚಾರ ನಿಲ್ಲುತ್ತಿಲ್ಲ. ಜೊತೆಗೆ ಹಲವು ಮಹತ್ತರ ಹುದ್ದೆಗಳಿಗೆ ಅಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.

ಶೇಕ್​​ ಹಸೀನಾ ಅವರು ರಾಜೀನಾಮೆ ಮತ್ತು ನೊಬೆಲ್​ ಪುರಸ್ಕೃತ ಮುಹಮ್ಮದ್​ ಯೂನುಸ್​ ಅವರ ಮಧ್ಯಂತರ ಸರ್ಕಾರ ರಚನೆಯ ಬಳಿಕವೂ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶನಿವಾರ ನಡೆದ ಹೋರಾಟದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯ ರಾಜೀನಾಮೆಗೆ ಒತ್ತಾಯಿಸಲಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಸಿಜೆ ಅವರಿಗೆ ಗಡುವು ನೀಡಲಾಗಿತ್ತು. ಇದಕ್ಕೆ ಮಣಿದ ಒಬೈದುಲ್​ ಹಸನ್​ ಅವರು ತಮ್ಮ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.

ಹಸೀನಾ ಭಂಟನ ತಲೆದಂಡ: ಒಬೈದುಲ್​ ಹಸನ್​ ಅವರು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರಿಗೆ ನಿಷ್ಠಾವಂತರಾಗಿದ್ದರು. ಈ ಹಿನ್ನೆಲೆಯಲ್ಲಿ ಢಾಕಾದಲ್ಲಿನ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ವಿದ್ಯಾರ್ಥಿ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ, ಹಸನ್​ ಅವರು ರಾಜೀನಾಮೆ ಘೋಷಿಸಿದ್ದಾರೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೈಕೋರ್ಟ್ ಆವರಣಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದರು. ಸೇನಾ ಸಿಬ್ಬಂದಿಯನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿ ನಿಯೋಜಿಸಲಾಗಿತ್ತು. ಸರ್ಕಾರಿ ಆಸ್ತಿಗಳಿಗೆ ಹಾನಿ ಮಾಡದಂತೆ, ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಿಗೆ ಸೂಚಿಸಲಾಯಿತು. ಆದಾಗ್ಯೂ, ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸುರಕ್ಷತೆಯನ್ನು ಪರಿಗಣಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿ ಹಾಸನ್ ಅವರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಬ್ಯಾಂಕ್​ ಗವರ್ನರ್​ ರಿಸೈನ್: ಅರಾಜಕತೆ ತಾಂಡವವಾಡುತ್ತಿರುವ ಬಾಂಗ್ಲಾದೇಶದಲ್ಲಿ ಕೇಂದ್ರೀಯ ಬ್ಯಾಂಕ್​ ಗವರ್ನರ್​ ಕೂಡ ತಮ್ಮ ಹುದ್ದೆಗೆ ರಾಜೀನಾಮ ನೀಡಿದ್ದಾರೆ. ಈ ಬಗ್ಗೆ ಬ್ಯಾಂಕ್​ ಅಧಿಕೃ ಹೇಳಿಕೆ ನೀಡಿಲ್ಲವಾದರೂ, ಗವರ್ನರ್​ ರಾಜೀನಾಮೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಬ್ಯಾಂಕ್​​ ಗವರ್ನರ್​ ಆಗಿದ್ದ ಅಬ್ದುಲ್​ ರೌಫ್​​ ತಲುಕ್ದೇರ್​ ಅವರ ರಾಜೀನಾಮೆಗೂ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಆಗಸ್ಟ್​ 7 ರಂದು ಬ್ಯಾಂಕ್​ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದರು. ದೇಶವು ಕರೆನ್ಸಿ ಅಪಮೌಲ್ಯ ಹಾಗೂ ಹಣದುಬ್ಬರ ಸಂಕಷ್ಟ ಎದುರಿಸುತ್ತಿದ್ದ ವೇಳೆ ಅಬ್ದುಲ್​ ರೌಫ್​ ಅವರು ಕೇಂದ್ರ ಬ್ಯಾಂಕ್​​ನ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಅಧಿಕಾರದ ಅವಧಿ ಇನ್ನೂ ಎರಡು ವರ್ಷ ಇತ್ತು.

ಮೀಸಲಾತಿ ವಿರೋಧಿ ಹೋರಾಟಕ್ಕೆ ಮಣಿದ ಮಾಜಿ ಪ್ರಧಾನಿ ಶೇಕ್​ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಹಸೀನಾ ಅವರ ಪದಚ್ಯುತಿ ನಂತರ, 84 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ಆಗಸ್ಟ್​​ 8 ರಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಹಸೀನಾ ಆಡಳಿತದ ಪತನ: ಭಾರತದ ಭದ್ರತೆ ಮೇಲೆ ಬೀರುವ ಪರಿಣಾಮಗಳೇನು?; ಇಲ್ಲಿದೆ ಫುಲ್​ ಡಿಟೇಲ್ಸ್​! - India Bangladesh next decisions

ETV Bharat Logo

Copyright © 2024 Ushodaya Enterprises Pvt. Ltd., All Rights Reserved.