ETV Bharat / international

ದಕ್ಷಿಣ ಕೊರಿಯಾದಲ್ಲಿ ಕುಸಿಯುತ್ತಿರುವ ಮಕ್ಕಳ ಜನನ ಪ್ರಮಾಣ: ಇದಕ್ಕೇನು ಕಾರಣ? - Childbirths In South Korea - CHILDBIRTHS IN SOUTH KOREA

ದಕ್ಷಿಣ ಕೊರಿಯಾ ದೇಶದಲ್ಲಿ ಮಕ್ಕಳ ಜನನ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಭಾರೀ ಇಳಿಕೆ ಕಂಡುಬರುತ್ತಿದೆ.

babies-born-in-south-korea-fell-to-a-record-low-in-january

author img

By ETV Bharat Karnataka Team

Published : Mar 27, 2024, 11:49 AM IST

ಸಿಯೋಲ್​: ದಕ್ಷಿಣ ಕೊರಿಯಾದಲ್ಲಿ ಮಕ್ಕಳ ಜನನ ಸಂಖ್ಯೆ ಕುಸಿಯುತ್ತಿದೆ. ಕಳೆದ ಜನವರಿಯಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾಗಿದೆ ಎಂದು ದತ್ತಾಂಶಗಳು ತಿಳಿಸಿವೆ. ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು, ಕಡಿಮೆ ಜನನ ಸಂಖ್ಯೆ ದರ ಚಿಂತೆಗೀಡು ಮಾಡುತ್ತಿದೆ.

2024ರ ಜನವರಿಯಲ್ಲಿ ಒಟ್ಟು 21,442 ಮಕ್ಕಳು ಜನಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.7.7ರಷ್ಟು ಕುಸಿತ ಉಂಟಾಗಿದೆ. 1981ರಿಂದ ದಂತ್ತಾಂಶಗಳನ್ನು ಸಂಗ್ರಹಿಸಿ ನೋಡಿದಾಗ ಜನವರಿಯಲ್ಲಿ ಅತೀ ಕಡಿಮೆ ಮಕ್ಕಳ ಜನನ ಪ್ರಮಾಣವನ್ನು ಕಾಣಬಹುದು ಎಂದು ಯೊನ್ಹಪ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜನನ ಕುಸಿತ ಕಳೆದೆರಡು ವರ್ಷದಿಂದ ಹೆಚ್ಚಾಗಿದ್ದು, 2022ರಲ್ಲಿ ಶೇ.1 ಮತ್ತು 2023ರಲ್ಲಿ ಶೇ.5.7ರಷ್ಟು ತಗ್ಗಿದೆ. 2000ನೇ ಇಸವಿಯ ಜನವರಿಯಲ್ಲಿ 60 ಸಾವಿರ ಮಕ್ಕಳು ಜನಿಸಿದರೆ, 2002ರ ಜನವರಿಯಲ್ಲಿ 50 ಸಾವಿರ ಮತ್ತು 2016ರಲ್ಲಿ 30,000 ಮಕ್ಕಳ ಜನನವಾಗಿದೆ. 2020ರಿಂದ ಈ ಸಂಖ್ಯೆ ಜನವರಿ ತಿಂಗಳಲ್ಲಿ 20,000 ಮಟ್ಟದಲ್ಲಿದೆ.

ಮಾಸಿಕ ಜನನ ದರ ಗಮನಿಸಿದಾಗ, 2023ರ ಮಾರ್ಚ್​ನಲ್ಲಿ ಮೊದಲ ಬಾರಿಗೆ ಜನನ ಸಂಖ್ಯೆ 20 ಸಾವಿರ ಮಟ್ಟದಲ್ಲಿ ಏರಿಕೆ ಕಂಡಿತು. ಜನವರಿಯಲ್ಲಿ ಸಾಮಾನ್ಯವಾಗಿ ದೇಶದಲ್ಲಿ ಅತೀ ಹೆಚ್ಚು ಮಕ್ಕಳ ಜನನ ಸಂಖ್ಯೆ ದಾಖಲಾಗುತ್ತದೆ ಎಂದು ವರದಿ ಹೇಳಿದೆ.

ಕಾರಣಗಳಿವು: ದಕ್ಷಿಣ ಕೊರಿಯಾ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಬದಲಾವಣೆ ಕಾಣುತ್ತಿದೆ. ಯುವಜನತೆ ಮದುವೆ ಮುಂದೂಡಿಕೆ ಅಥವಾ ಮದುವೆಯಾಗದೇ ಇರುವುದು ಅಥವಾ ಮಕ್ಕಳನ್ನು ಹೊಂದದೇ ಇರಲು ನಿರ್ಧರಿಸುತ್ತಿದ್ದಾರೆ. ಬದಲಾಗುತ್ತಿರುವ ಸಾಮಾಜಿಕ ರೂಢಿಗಳು ಮತ್ತು ಜೀವನಶೈಲಿಗಳಿಗೆ ಅನುಗುಣವಾಗಿ ಮಕ್ಕಳನ್ನು ಹೊಂದಲು ಬಯಸುತ್ತಿದ್ದಾರೆ. ಇದರ ಜತೆಗೆ ಇದು ಮನೆ ಆದಾಯ ಮತ್ತು ಉದ್ಯೋಗ ಮಾರುಕಟ್ಟೆ ಮತ್ತು ಆರ್ಥಿಕ ಕುಸಿತದ ಸ್ಥಿತಿಯನ್ನೂ ಆಧರಿಸಿದೆ.

ಕಳೆದ ವರ್ಷವೂ ಕೂಡ ದೇಶದಲ್ಲಿ ಜನಿಸಿದ ಶಿಶುಗಳ ಸಂಖ್ಯೆ ಶೇ.7.7 ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ 2,29,970ಕ್ಕಿಳಿದಿತ್ತು ಎಂದು ವರದಿ ತಿಳಿಸಿದೆ. ಒಟ್ಟಾರೆ ಫಲವತ್ತತೆ ದರ ಮಹಿಳೆಯರ ಜೀವಿತಾವಧಿಯ ನಿರೀಕ್ಷಿತ ಜನನದ ಸರಾಸರಿಯು ವಾರ್ಷಿಕ ಶೇ.0.72ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಸ್ಥಿರ ಜನಸಂಖ್ಯೆ ಕಾಯ್ದುಕೊಳ್ಳಲು ಮಹಿಳೆಯರ ಫಲವತ್ತತೆ ದರ ಶೇ. 2.1ಕ್ಕಿಂತ ಕಡಿಮೆಯಾಗಿದೆ.

ಕೋವಿಡ್​​ ಬಳಿಕ ಮದುವೆಯಾಗುತ್ತಿರುವ ಜೋಡಿಗಳ ಸಂಖ್ಯೆ ಶೇ.11.6ಕ್ಕೆ ಏರಿಕೆ ಕಂಡಿದ್ದು, ವರ್ಷಕ್ಕೆ 28 ಸಾವಿರ ಮಂದಿ ವಿವಾಹವಾಗುತ್ತಿದ್ದಾರೆ. ಇದರ ಜೊತೆಗೆ ವಿಚ್ಛೇದನ ಪಡೆಯುವವರ ಸಂಖ್ಯೆ ಕೂಡ 9.5ಕ್ಕೇರಿಕೆಯಾಗಿದೆ ಎಂದು ದತ್ತಾಂಶ ತಿಳಿಸಿದೆ.

2072ಕ್ಕೆ ದಕ್ಷಿಣ ಕೊರಿಯಾ ಅತೀ ಹೆಚ್ಚು ಹಿರಿ ವಯಸ್ಕರನ್ನು ಹೊಂದಿರುವ ದೇಶವಾಗಲಿದೆ. ಇನ್ನು ಮಧ್ಯಮ ವಯಸ್ಸಿನವರ ಸಂಖ್ಯೆ ಈ ಹೊತ್ತಿಗೆ 63.4ಕ್ಕೆ ಏರಿಕೆ ಕಾಣಲಿದೆ. ದೇಶ ಸದ್ಯ 36 ಮಿಲಿಯನ್​ ಜನಸಂಖ್ಯೆ ಹೊಂದಿದೆ.(ಐಎಎನ್​​ಎಸ್​​)

ಇದನ್ನೂ ಓದಿ: ಭಾರತದಲ್ಲಿ ಕುಸಿದ ಫಲವತ್ತತೆ ದರ: 2050ರಲ್ಲಿ ಚಿತ್ರಣ ಹೇಗಿರಲಿದೆ? - Fertility Rate

ETV Bharat Logo

Copyright © 2025 Ushodaya Enterprises Pvt. Ltd., All Rights Reserved.