ಅಡಿಸ್ ಅಬಾಬಾ (ಇಥಿಯೋಪಿಯಾ): ದಕ್ಷಿಣ ಇಥಿಯೋಪಿಯಾದ ವೊಲೈಟಾ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ವೊಲೈಟಾ ವಲಯದ ಮುಖ್ಯ ಆಡಳಿತಾಧಿಕಾರಿ ಸ್ಯಾಮ್ಯುಯೆಲ್ ಫೋಲಾ ಪ್ರತಿಕ್ರಿಯಿಸಿ, ಕಿಂಡೋ ದಿದಾಯೆ ಜಿಲ್ಲೆಯ ಪ್ರದೇಶದಿಂದ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ. ನಾವು ಈಗ ಮುನ್ನೆಚ್ಚರಿಕೆಯಾಗಿ ಮತ್ತೊಂದು ದೊಡ್ಡ ಭೂಕುಸಿತವಾಗುವ ಸಾಧ್ಯತೆ ಹಿನ್ನೆಲೆ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ್ದೇವೆ'' ಎಂದು ತಿಳಿಸಿದರು.
ಸರ್ಕಾರದ ಮಾಹಿತಿ ಪ್ರಕಾರ, ವೊಲೈಟಾ ಪ್ರದೇಶದಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸೋಮವಾರದ ಭೂಕುಸಿತವು ಕಳೆದ ತಿಂಗಳು ದಕ್ಷಿಣ ಇಥಿಯೋಪಿಯಾದ ಮತ್ತೊಂದು ಪ್ರದೇಶದಲ್ಲಿ ಸಂಭವಿಸಿದ್ದ ಕಡಿಮೆ ಮಾರಣಾಂತಿಕವಾಗಿದೆ. ಆಗ ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇಥಿಯೋಪಿಯಾದ ಮಳೆಗಾಲದಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಇದು ಜುಲೈನಲ್ಲಿ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಡಿಮೆ ಮೂಲಸೌಕರ್ಯಗಳಿರುವ ವೊಲೈಟಾದ ಪರ್ವತ ಪ್ರದೇಶಗಳಲ್ಲಿ ಈ ಭೂಕುಸಿತ ಸಂಭವಿಸುತ್ತವೆ. 2016 ರಲ್ಲಿ, ಭಾರಿ ಮಳೆಯು ಮಾರಣಾಂತಿಕ ಭೂಕುಸಿತದಿಂದ ವೊಲೈಟಾದ ಪರ್ವತ ಪ್ರದೇಶದಲ್ಲಿ 41ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಸ್ಥಳಾಂತರಗೊಂಡರು. ಕಳೆದ ತಿಂಗಳು, ನೆರೆಯ ಗಾಮೊ ಗೋಫಾದಲ್ಲಿ, ಒಂದು ದೊಡ್ಡ ಭೂಕುಸಿತವು 229ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.
ಉಗಾಂಡಾದ ಪರ್ವತ ಪೂರ್ವದಿಂದ ಮಧ್ಯ ಕೀನ್ಯಾದ ಎತ್ತರದ ಪ್ರದೇಶಗಳವರೆಗೆ ವ್ಯಾಪಕವಾದ ಪೂರ್ವ ಆಫ್ರಿಕಾದ ಪ್ರದೇಶದಲ್ಲಿ ಮಾರಣಾಂತಿಕ ಮಣ್ಣಿನ ಕುಸಿತಗಳು ಹೆಚ್ಚಾಗಿ ಸಂಭವಿಸುತ್ತವೆ. ಏಪ್ರಿಲ್‌ನಲ್ಲಿ, ಕೀನ್ಯಾದ ರಿಫ್ಟ್ ವ್ಯಾಲಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 45 ಜನರು ಸಾವನ್ನಪ್ಪಿದ್ದರು.