ಕೈರೋ:ಅಂತರ್ಯುದ್ಧದಿಂದ ನರಳುತ್ತಿರುವ ಸುಡಾನ್ ಈಗ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಇಲ್ಲಿನ ಮಳೆಯಿಂದಾಗಿ ಕೆಂಪು ಸಮುದ್ರದ ಬಳಿ ಇರುವ ಅರ್ಬತ್ ಅಣೆಕಟ್ಟು ಕುಸಿದಿದೆ. ಇದರಿಂದ ಸಾವಿರಾರು ಮನೆಗಳು ನಾಶವಾಗಿವೆ. ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಡಾನ್‌ನ ಪೂರ್ವ ಕೆಂಪು ಸಮುದ್ರ ರಾಜ್ಯದಲ್ಲಿ ಅಣೆಕಟ್ಟು ಕುಸಿದಿದ್ದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ, ಅರ್ಬಾತ್ ಅಣೆಕಟ್ಟು ಕುಸಿದಿದೆ ಮತ್ತು ಸಿಲುಕಿರುವ ಜನರಿಗೆ ಸಹಾಯ ಮಾಡಲು ರಕ್ಷಾಣ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪ್ರವಾಹದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬದು ತಿಳಿದುಬರಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
Heavy rains and torrential floods in Sudan's Red Sea State led to the collapse of the Arbaat Dam, located 40 km north of Port Sudan, which is the city's main source of drinking water. pic.twitter.com/VPnSWj5fKt
— Volcaholic 🌋 (@volcaholic1) August 25, 2024
ಈ ದುರ್ಘಟನೆಯಲ್ಲಿ ಕನಿಷ್ಠ 60 ಮಂದಿ ಸತ್ತಿದ್ದಾರೆ ಎಂದು ಶಂಕಿಸಲಾಗಿದೆ ಎಂದ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅರ್ಬತ್ ಅಣೆಕಟ್ಟು ಕುಸಿದಿರುವುದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆಂಪು ಸಮುದ್ರದ ಸಮೀಪದಲ್ಲಿರುವ ಪೋರ್ಟ್ ಸುಡಾನ್ ನಗರಕ್ಕೆ ಈ ಅಣೆಕಟ್ಟು ಕುಡಿಯುವ ನೀರಿನ ಮೂಲವಾಗಿದೆ ಎಂದು ಹೇಳಲಾಗುತ್ತಿದೆ. ಪ್ರವಾಹದಿಂದಾಗಿ ಹಲವು ಪ್ರದೇಶಗಳಲ್ಲಿ ಸಾವಿರಾರು ಮನೆಗಳು ನಾಶವಾಗಿವೆ. ವಾಹನಗಳು ಕೊಚ್ಚಿ ಹೋಗಿವೆ. ಜನರು ಎತ್ತರದ ಪ್ರದೇಶಗಳಿಗೆ ತೆರಳುತ್ತಿದ್ದಾರೆ.
ಸುಡಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಜೂನ್‌ನಲ್ಲಿ ಪ್ರಾರಂಭವಾದ ಭಾರೀ ಮಳೆಯು ಇನ್ನೂ ಮಧ್ಯಂತರವಾಗಿ ಸಂಭವಿಸುತ್ತಿದೆ. ಆಗಸ್ಟ್ 10 ರವರೆಗೆ ಸುಡಾನ್‌ನ 10 ರಾಜ್ಯಗಳು ಕೆಟ್ಟದಾಗಿ ಪರಿಣಾಮ ಬೀರಿವೆ. ಇದರಿಂದಾಗಿ 27 ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತವಾಗಿವೆ. ಅಂದಾಜಿನ ಪ್ರಕಾರ ಸುಡಾನ್‌ನಲ್ಲಿ ಮಳೆಯಿಂದಾಗಿ 1.25 ಲಕ್ಷ ಜನರು ತಮ್ಮ ಸ್ಥಳಗಳನ್ನು ತೊರೆದಿದ್ದಾರೆ. ಇನ್ನು ಅಣೆಕಟ್ಟು ಕುಸಿತದಿಂದಾಗಿ 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮೊಬೈಲ್ ನೆಟ್‌ವರ್ಕ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಾಹಿತಿ ಸಂಗ್ರಹಣೆ ಕಷ್ಟಕರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಬಹಿರಂಗಪಡಿಸಿವೆ.
Dam Collapse in War-Torn Sudan Kills at Least 60 — A dam collapse in Sudan has resulted in the deaths of at least 60 people, exacerbating the humanitarian crisis in the war-torn country.https://t.co/VnW3vZNO21
— BizToc (@biztoc) August 26, 2024
ಪೋರ್ಟ್ ಸುಡಾನ್ ನಗರದ ಉತ್ತರದಿಂದ 40 ಕಿಲೋಮೀಟರ್ ದೂರದಲ್ಲಿ ಈ ಅಣೆಕಟ್ಟು ಇದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಅಂತರ್ಯುದ್ಧದ ಹಿಡಿತದಲ್ಲಿರುವ ಉತ್ತರ ಆಫ್ರಿಕಾದ ದೇಶದಲ್ಲಿ ಇದು ಇತ್ತೀಚಿನ ದುರಂತವಾಗಿದೆ.
ಓದಿ: ತುಂಗಭದ್ರಾ ಕ್ರಸ್ಟ್ ಗೇಟ್ ದುರಸ್ತಿ: ಕನ್ಹಯ್ಯಗೆ ಆಂಧ್ರ ಸಿಎಂ ಸನ್ಮಾನ - TB Dam Crust Gate Repair