ETV Bharat / international

ಬಡತನ ರೇಖೆಯ ಕೆಳಗೆ ಜಾರಲಿದ್ದಾರೆ 1 ಕೋಟಿ ಪಾಕಿಸ್ತಾನಿಯರು: ವಿಶ್ವಬ್ಯಾಂಕ್ ಎಚ್ಚರಿಕೆ - WORLD BANK

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ 1 ಕೋಟಿ ಜನ ಬಡತನಕ್ಕೆ ಜಾರುವ ಅಪಾಯದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.

Over 10 million Pakistanis may fall below poverty line: World Bank

author img

By ETV Bharat Karnataka Team

Published : Apr 3, 2024, 2:50 PM IST

ಇಸ್ಲಾಮಾಬಾದ್ : ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಮಿಲಿಯನ್​ಗೂ (1 ಕೋಟಿ) ಅಧಿಕ ಪಾಕಿಸ್ತಾನಿಯರು ಬಡತನ ರೇಖೆಗಿಂತ ಕೆಳಗೆ ಜಾರಬಹುದು ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ. ನಿಧಾನಗತಿಯ ಆರ್ಥಿಕ ಬೆಳವಣಿಗೆಯ ದರ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 26 ಕ್ಕೆ ಏರುತ್ತಿರುವುದರಿಂದ ಲಕ್ಷಾಂತರ ಪಾಕಿಸ್ತಾನಿಯರು ಇನ್ನಷ್ಟು ಬಡವರಾಗಲಿದ್ದಾರೆ.

'ಪಾಕಿಸ್ತಾನ ಅಭಿವೃದ್ಧಿ ದೃಷ್ಟಿಕೋನ' (Pakistan Development Outlook) ಎಂಬ ಶೀರ್ಷಿಕೆಯ ವಿಶ್ವಬ್ಯಾಂಕ್​ನ ದ್ವೈವಾರ್ಷಿಕ ವರದಿಯು ದೇಶದ ಆರ್ಥಿಕತೆಯ ಅತ್ಯಂತ ಕಠೋರ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ದೇಶವು ತನ್ನ ಯಾವುದೇ ಪ್ರಮುಖ ಸ್ಥೂಲ ಆರ್ಥಿಕ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನವು ತನ್ನ ಪ್ರಾಥಮಿಕ ಬಜೆಟ್ ಗುರಿಯನ್ನು ಕೂಡ ತಲುಪದಿರುವ ನಿರೀಕ್ಷೆಯಿದೆ. ಹೀಗಾದಲ್ಲಿ ಪಾಕಿಸ್ತಾನದ ಆರ್ಥಿಕತೆಯು ಇನ್ನೂ ಕನಿಷ್ಠ ಮೂರು ವರ್ಷಗಳವರೆಗೆ ಕೊರತೆಯಲ್ಲಿರಲಿದೆ ಎಂದು ವಿಶ್ವಬ್ಯಾಂಕ್ ವರದಿ ಎತ್ತಿ ತೋರಿಸಿದೆ. "ವಿಶಾಲ-ಆಧಾರಿತ ಮತ್ತು ನವೀನ ಆರ್ಥಿಕ ಚೇತರಿಕೆಯ ಹೊರತಾಗಿಯೂ, ಬಡತನ ನಿರ್ಮೂಲನೆಗಾಗಿ ಪ್ರಯತ್ನಗಳು ಸಾಕಷ್ಟಿಲ್ಲ" ಎಂದು ವಿಶ್ವಬ್ಯಾಂಕ್ ವರದಿಯ ಪ್ರಮುಖ ಲೇಖಕ ಸೈಯದ್ ಮುರ್ತಾಜಾ ಮುಜಾಫರಿ ಹೇಳಿದ್ದಾರೆ.

"ಸುಮಾರು 98 ಮಿಲಿಯನ್ ಪಾಕಿಸ್ತಾನಿಯರು ಈಗಾಗಲೇ ಬಡತನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಡತನದ ಪ್ರಮಾಣ ಶೇಕಡಾ 40 ರಲ್ಲಿಯೇ ಇದ್ದು, ಆರ್ಥಿಕ ಬೆಳವಣಿಗೆಯು ಕೇವಲ ಶೇಕಡಾ 1.8ರ ಮಟ್ಟದಲ್ಲಿ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ಬಡತನ ರೇಖೆಗಿಂತ ಸ್ವಲ್ಪ ಮೇಲಿರುವ 10 ಮಿಲಿಯನ್ ಜನ ಯಾವುದೇ ಸಮಯದಲ್ಲಿ ಬಡತನಕ್ಕೆ ಜಾರುವ ಅಪಾಯದಲ್ಲಿದ್ದಾರೆ" ಎಂದು ಅವರು ಹೇಳಿದರು.

ಹಣದುಬ್ಬರದ ನಿರಂತರ ಏರಿಕೆ, ಜೀವನ ವೆಚ್ಚದ ಬಿಕ್ಕಟ್ಟು, ಹೆಚ್ಚಿನ ಸಾರಿಗೆ ವೆಚ್ಚಗಳ ಕಾರಣದಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಸೂಕ್ತ ಸಮಯದಲ್ಲಿ ವೈದ್ಯಕೀಯ ಸೇವೆಗಳು ಲಭ್ಯವಾಗದಿರುವ ಸಂಭವವಿದೆ ಎಂದು ವಿಶ್ವಬ್ಯಾಂಕ್ ವರದಿ ಎಚ್ಚರಿಸಿದೆ. ಇನ್ನು ಆಹಾರ ಭದ್ರತೆಯು ದೇಶದಲ್ಲಿ ಗಂಭೀರ ಮತ್ತು ಪ್ರಮುಖ ಸವಾಲಾಗಿ ಉಳಿದಿದೆ.

ಪಾಕಿಸ್ತಾನದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ, ಜೂನ್ 2024 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಕೇವಲ ಶೇ 1.8 ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಇದಲ್ಲದೆ ಮುಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಕೇವಲ ಶೇಕಡಾ 2.3 ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ. ಇದು ಜನಸಂಖ್ಯೆಯ ಬೆಳವಣಿಗೆಯ ದರವಾದ ಶೇಕಡಾ 2.6 ಕ್ಕಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ : ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್​ನ ಅತಿದೊಡ್ಡ ಉಷ್ಣ ವಿದ್ಯುತ್ ಸ್ಥಾವರ ಧ್ವಂಸ - Russia

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.