ETV Bharat / health

ಆನ್​ಲೈನ್​ ಫುಡ್​ ಡೆಲಿವರಿಯ ಮೆನುಗಳಲ್ಲಿ ಪೌಷ್ಟಿಕಾಂಶದ ಮಾಹಿತಿ ಕಣ್ಮರೆ - Online food delivery menus - ONLINE FOOD DELIVERY MENUS

ಆನ್​​​​​​​​ ಫುಡ್​ ಡೆಲಿವರಿ ಆ್ಯಪ್​ಗಳಲ್ಲಿನ ಮೆನುಗಳಲ್ಲಿ ಪೌಷ್ಟಿಕಾಂಶದ ಮಾಹಿತಿ ಇರದೇ ಇರುವುದು ಅಧ್ಯಯನದಿಂದ ಬಯಲಾಗಿದೆ. ಇದು ಪೌಷ್ಟಿಕಾಂಶ ಭರಿತ ಆಹಾರ ಹುಡುಕುವವರಿಗೆ ತೊಂದರೆಯನ್ನುಂಟು ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

young-people-increasingly-use-apps-to-make-food-purchases

author img

By IANS

Published : Apr 15, 2024, 10:39 AM IST

ನವದೆಹಲಿ: ಇಂದು ಜನರು ತಮ್ಮಿಷ್ಟವಾದ ರೆಸ್ಟೋರೆಂಟ್​, ಹೋಟೆಲ್​ಗಳಿಂದ ಆಹಾರವನ್ನು ಮನೆಯಲ್ಲೇ ಕುಳಿತು, ಆರ್ಡರ್​ ಮಾಡಿ ತರಿಸಿಕೊಳ್ಳುವ ಆ್ಯಪ್​ಗಳ ಬಳಕೆಯ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಈ ರೀತಿಯ ಫುಡ್​ ಡಿಲಿವರಿ ಆ್ಯಪ್​ಗಳ ಆಹಾರದ ಮೆನುವಿನಲ್ಲಿ ಪೌಷ್ಠಿಕಾಂಶದ ಮಾಹಿತಿಗಳು ಕಾಣುವುದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಆರೋಗ್ಯಯುತ ಆಹಾರದ ಆಯ್ಕೆ ಕಗ್ಗಂಟಾಗಿದ್ದು, ಪೌಷ್ಟಿಕಾಂಶ ಭರಿತ ಆಹಾರ ಆಯ್ಕೆ ಮಾಡುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಅಂಶವೂ ಈ ಅಧ್ಯಯನದ ವೇಳೆ ಕಂಡು ಬಂದಿದೆ.

ಸಿಡ್ನಿ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ತನಿಖೆ ನಡೆಸಿದ್ದು, ಈ ಸಂಬಂಧ ಪ್ರಮುಖ ಆನ್​ಲೈನ್​ ಫುಡ್​ ಡೆಲಿವರಿ ತಾಣಗಳ ಮೆನು (ಆಹಾರದ ಪಟ್ಟಿ)ಯನ್ನು ಇವರು ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ವೇಳೆ ಉಬರ್ ​ಈಟ್ಸ್​​, ಮೆನುಲೊಗ್​​ ಸೇರಿ ಇತರ ಆನ್​ಲೈನ್​ ಫುಡ್​ ಡೆಲಿವರಿ ಆಪ್​ಗಳಲ್ಲಿನ 498 ಆಹಾರಗಳ ಕುರಿತು ನೀಡಿದ ವಿವರಣೆಯನ್ನು ಗಮನಿಸಲಾಗಿದೆ. ಈ ವೇಳೆ ಶೇ 6ರಷ್ಟು ಮೆನುಗಳಲ್ಲಿ ಕಡಿಮೆ ಪೌಷ್ಟಿಕಾಂಶದ ಲೇಬಲಿಂಗ್ ಅನ್ನು ಹೊಂದಿರುವ ವಿಚಾರ ಅಧ್ಯಯನದ ವೇಳೆ ಗಮನಕ್ಕೆ ಬಂದಿದೆ.

ಕಡಿಮೆ ಪೌಷ್ಟಿಕಾಂಶದ ಮಾಹಿತಿ ಒದಗಿಸಿದ ಗ್ರಾಹಕರು ಆಹಾರ ಸೇವನೆಯಿಂದ ಕಡಿಮೆ ಶಕ್ತಿ ಹೊಂದಿರುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಈ ಅಧ್ಯಯನವನ್ನು ಪಬ್ಲಿಕ್​ ಹೆಲ್ತ್​​ ನ್ಯೂಟ್ರಿಷಿಯನ್​ನಲ್ಲಿ ಪ್ರಕಟಿಸಲಾಗಿದೆ. ಆನ್​ಲೈನ್​ ಫುಡ್​ ಡೆಲಿವರಿ ಆಪ್​ಗಳಲ್ಲಿ ಗ್ರಾಹಕರಿಂದ ಸಾಕಷ್ಟು ಬೇಡಿಕೆ ಇದ್ದರೂ, ಆನ್​ಲೈನ್​ ಫ್ಲಾಟ್​ ಫಾರ್ಮ್​ಗಳು ಆಹಾರದ ಮೆನ ಲೇಬಲಿಂಗ್​ ಅನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ.

ಆಹಾರದ ಕುರಿತು ವಿವರಣೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದಿರುವುದು ಕಂಡು ಬಂದಿದೆ. ಆದಾಗ್ಯೂ ಇವುಗಳ ಜನಪ್ರಿಯತೆ ಹೆಚ್ಚಿದ್ದು, ಆ್ಯಪ್​ಗಳ ಮೂಲಕ ಜನರು ಆಹಾರ ತರಿಸಿಕೊಳ್ಳುವುದು ಕಡಿಮೆ ಮಾಡಿಲ್ಲ ಎಂದು ಚಾರ್ಲ್ಸ್ ಪರ್ಕಿನ್ಸ್ ಸೆಂಟರ್‌ನ ಜಿಯಾ ಮತ್ತು ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಸುಸಾನ್ ವಕಿಲ್ ತಿಳಿಸಿದ್ದಾರೆ.

ಆನ್​ಲೈನ್​ ಫುಡ್​ ಡಿಲಿವರಿ ಸೇವೆಗಳು ವೇಗವಾಗಿ ಬೆಳವಣಿಗೆ ಕಾಣುತ್ತಿವೆ. ಸಾಂಕ್ರಾಮಿಕ ಸಮಯದಲ್ಲೂ ಕೂಡ ಈ ಆ್ಯಪ್​ಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಿತ್ತು. ಆನ್​ಲೈನ್​ ಫುಡ್​ ಡೆಲಿವರಿ ಆ್ಯಪ್​ಗಳು ಕಡಿಮೆ ಪೌಷ್ಠಿಕಾಂಶ ಗುಣಮಟ್ಟದ ಆಹಾರಗಳನ್ನು ಸುಲಭವಾಗಿ ಜನರಿಗೆ ನೀಡುತ್ತಿದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

2021-2030 ನ್ಯಾಷನಲ್​ ಪ್ರಿವೆಂಟಿವ್ ಹೆಲ್ತ್ ಸ್ಟ್ರಾಟಜಿಯ ಗುರಿಗಳನ್ನು ಸಾಧಿಸುವ ಮೂಲಕ ಆರೋಗ್ಯಕರ ಆಹಾರದ ಬಳಕೆಯನ್ನು ಸುಧಾರಿಸುವುದು ಅಧ್ಯಯನದ ಉದ್ದೇಶವಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಯೋಗರ್ಟ್​ ಸೇವನೆಯಿಂದ ಮಧುಮೇಹದ ಅಪಾಯ ತಗ್ಗಿಸಲು ಸಾಧ್ಯ: ವೈದ್ಯರ ಅಭಿಮತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.