ETV Bharat / health

ನಿಮ್ಮ ಬಾಯಿಯ ಆರೋಗ್ಯ ಹೇಗಿದೆ? ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಡಿ! ಈ ಟಿಪ್ಸ್‌ ಪಾಲಿಸಿ - World Oral Health Day

ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ನಿಮಗೆಷ್ಟು ಗೊತ್ತು?, ಹಲ್ಲುಗಳ ಕಾಳಜಿ ಮಾಡುತ್ತಿದ್ದೀರಾ?. ಇಲ್ಲವಾದರೆ ಮುಂದೆ ಪಶ್ಚಾತ್ತಾಪ ಕಾದಿದೆ.! ಬಾಯಿಯ ಆರೋಗ್ಯ, ನೈರ್ಮಲ್ಯದ ಬಗ್ಗೆ ಅಸಡ್ಡೆ ಮಾಡದೇ ಈ ಉಪಯುಕ್ತ ಮಾಹಿತಿ ಈಗಲೇ​ ಓದಿ.

ವಿಶ್ವ ಬಾಯಿ ಆರೋಗ್ಯ ದಿನ
ವಿಶ್ವ ಬಾಯಿ ಆರೋಗ್ಯ ದಿನ
author img

By ETV Bharat Karnataka Team

Published : Mar 20, 2024, 9:47 AM IST

ಮಾರ್ಚ್​ 20. ಈ ದಿನದ ವಿಶೇಷತೆ ಗೊತ್ತೇ?. ಹೌದು. ಪ್ರತಿಯೊಬ್ಬ ವ್ಯಕ್ತಿಗೂ ಆತನ ಮೊಗದ ನಗು ಬಹಳ ಮುಖ್ಯ. ಆದರೆ ನಮ್ಮ ಬಾಯಿ, ಹಲ್ಲುಗಳು ಆರೋಗ್ಯವಾಗಿದ್ದರೆ ಮಾತ್ರ ಸುಂದರವಾದ ನಗು ಹೊರಹೊಮ್ಮಲು ಸಾಧ್ಯ. ಎಷ್ಟೋ ಜನರಿಗೆ ತಮ್ಮ ಬಾಯಿ, ಹಲ್ಲಿನ ಸಮಸ್ಯೆಗಳು ಉಲ್ಭಣಗೊಳ್ಳುವವರೆಗೂ ಅದರ ಕಾಳಜಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಅರಿವೇ ಇರದು. ಹೀಗಾಗಿ ಬಾಯಿಯ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್​ 20ರ ದಿನವನ್ನು ಇಡೀ ಪ್ರಪಂಚವೇ 'ವಿಶ್ವ ಬಾಯಿ ಆರೋಗ್ಯ ದಿನ'ವನ್ನಾಗಿ ಆಚರಿಸುತ್ತದೆ.

ವಿಶ್ವ ಬಾಯಿಯ ಆರೋಗ್ಯ ದಿನ- ಒಂದಿಷ್ಟು ಇತಿಹಾಸ: ಈ ದಿನವನ್ನು ಮೊದಲ ಬಾರಿಗೆ 2007 ಸೆಪ್ಟೆಂಬರ್ 12ರಂದು ವರ್ಲ್ಡ್ ಡೆಂಟಲ್ ಫೆಡರೇಶನ್ (FDI) ಸಂಸ್ಥಾಪಕ ಡಾ.ಚಾರ್ಲ್ಸ್ ಗೊಡಾನ್ ಅವರ ಜನ್ಮದಿನದಂದು ಆಚರಿಸಲಾಯಿತು. ಅಧಿಕೃತವಾಗಿ 2013ರಲ್ಲಿ ಮಾರ್ಚ್ 20 ಅನ್ನು ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯದ ಪ್ರಾಮುಖ್ಯತೆಯ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸಲು ವಿಶ್ವ ಬಾಯಿಯ ಆರೋಗ್ಯ ದಿನವೆಂದು ಘೋಷಣೆ ಮಾಡಲಾಯಿತು.

"A Happy Mouth is a Happy Body": 'ಹ್ಯಾಪಿ ಮೌತ್​ ಈಸ್ ಹ್ಯಾಪಿ ಬಾಡಿ"​ ಎಂಬ ಥೀಮ್ ​ಅನ್ನು 2024 ಮತ್ತು 2026ರವರೆಗೆ ನೀಡಲಾಗಿದೆ. ಹಲ್ಲುಗಳು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ ಎಂಬುದು ಇದರರ್ಥ.

ಹಲ್ಲಿನ ಬಾಧೆಗಳನ್ನು ತಡೆಗಟ್ಟುವುದು ಹೇಗೆ?: ನಿಯಮಿತವಾಗಿ ದಿನಕ್ಕೆ 2 ಬಾರಿ ಹಲ್ಲುಜ್ಜುವುದು, ಆಹಾರ ಸೇವನೆಯ ಬಳಿಕ ಹಲ್ಲುಗಳ ಸಂಧಿ ಸಂಧಿಯನ್ನು ಸ್ವಚ್ಛಗೊಳಿಸುವಂಥ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರೆ ಹಲ್ಲು ಕುಳಿಗಳು, ಒಸಡು ಕಾಯಿಲೆ ಮತ್ತು ಕೆಟ್ಟ ವಾಸನೆಯಂತಹ ಸಾಮಾನ್ಯ ಬಾಯಿಯ ಒಳ ಸಮಸ್ಯೆಗಳನ್ನು ತಡೆಯಬಹುದು. ಮೊದಲೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ನೀವು ಭವಿಷ್ಯದಲ್ಲಿ ಇವುಗಳಿಗಾಗಿ ಮಾಡುವ ದುಬಾರಿ ವೆಚ್ಚ ತಪ್ಪಿಸಬಹುದು.

ಬಾಯಿಯ ಅಸ್ವಚ್ಛತೆಯ ಜೊತೆಗೆ ಅನಾರೋಗ್ಯವು ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ, ಉಸಿರಾಟದ ಸೋಂಕುಗಳು ಮತ್ತು ಪ್ರತಿಕೂಲ ಗರ್ಭಧಾರಣೆಗೆ ಸಂಬಂಧಿಸಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಯಿಯಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ನಿಮ್ಮ ದೇಹಕ್ಕೆ ಮಾರಕವಾಗಬಹುದು. ಹೀಗಾಗಿ ಬಾಯಿಯ ಆರೋಗ್ಯವನ್ನು ಕಡೆಗಣಿಸದೆ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳು ಆಹಾರ ಅಗಿಯುವಿಕೆ ಮತ್ತು ಜೀರ್ಣಕ್ರಿಯೆಗೆ ಅವಶ್ಯಕ. ಹಲ್ಲಿನ ಸಮಸ್ಯೆಗಳಿರುವ ವ್ಯಕ್ತಿಗಳು ಕೆಲವು ಆಹಾರಗಳನ್ನು ತಿನ್ನಲು ತೊಂದರೆ ಅನುಭವಿಸಬಹುದು. ಇದು ಪೌಷ್ಟಿಕಾಂಶದ ಕೊರತೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಮುತ್ತಿನಂಥ ಹಲ್ಲುಗಳೇ ನಿಮ್ಮ ಆತ್ಮವಿಶ್ವಾಸ: ಆರೋಗ್ಯಕರ ಹಲ್ಲುಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾರೊಂದಿಗಾಗಲೀ ಅಂಜಿಕೆ ಇಲ್ಲದೇ ಮಾತನಾಡಲು, ಫೋಟೋಗಳಿಗೆ ಸ್ಮೈಲಿಂಗ್​ ಫೋಸ್​ ನೀಡಲು ಉತ್ತಮ ಹಲ್ಲುಗಳು ಬಹಳ ಮುಖ್ಯ. ನಿಮ್ಮ ಬಾಯಿಯಿಂದ ಬರುವ ಕೆಟ್ಟ ವಾಸನೆ ಮುಜುಗರ ಮತ್ತು ಗುಂಪಿನೊಂದಿಗೆ ಬೆರೆಯಲು ಅಡ್ಡಿಯಾಗುತ್ತದೆ. ಇವುಗಳು ನಿಮ್ಮ ಸಂಬಂಧ ಮತ್ತು ವೃತ್ತಿಪರ ಅವಕಾಶಗಳನ್ನೂ ಕಿತ್ತುಕೊಳ್ಳಬಲ್ಲವು.

ಹೀಗಾಗಿ ಮನೆಯಲ್ಲೇ ಸಾಧ್ಯವಾದಷ್ಟು ನಿಮ್ಮ ಹಲ್ಲಿನ ಬಗ್ಗೆ ಕಾಳಜಿ ವಹಿಸಿ. 3 ತಿಂಗಳಿಗೊಮ್ಮೆ ನಿಮ್ಮ ಸ್ಥಳೀಯ ದಂತ ವೈದ್ಯರ ಬಳಿ ತೆರಳಿ ಒಂದು ಬಾರಿ ತಪಾಸಣೆ ಮಾಡಿಸಿ. ಬಾಯಿಯ ಆರೋಗ್ಯ ನಿಮ್ಮ ದಿನನಿತ್ಯದ ಜೀವನವನ್ನು ಖಂಡಿತಾ ಸುಂದರಗೊಳಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ 900 ಜನರಿಗೆ ಒಬ್ಬ ವೈದ್ಯರಿದ್ದಾರೆ: ರಾಜ್ಯಸಭಾ ಸದಸ್ಯ ಭುವನೇಶ್ವರ ಕಲಿತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.