ಹಿಮೋಫಿಲಿಯಾ ಎಂಬುದು ಇನ್ನೂ ಅನೇಕ ಜನರಿಗೆ ತಿಳಿದಿರದ ಮತ್ತು ಅರ್ಥಮಾಡಿಕೊಳ್ಳದ ರೋಗವಾಗಿದೆ. ಹಿಮೋಫಿಲಿಯಾ ರಕ್ತಕ್ಕೆ ಸಂಬಂಧಿಸಿದ ಒಂದು ರೋಗವಾಗಿದೆ. ಇದನ್ನು ರಕ್ತಸ್ರಾವದ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ಈ ಅಸ್ವಸ್ಥತೆಯ ಲಕ್ಷಣಗಳು ಎಂದರೆ ಅಸಮರ್ಪಕ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಗಾಯದಿಂದ ಅತಿಯಾದ ರಕ್ತಸ್ರಾವ ಆಗುವುದಾಗಿದೆ.
ಈ ಅಸ್ವಸ್ಥತೆಯನ್ನು ನಿರ್ಲಕ್ಷಿಸುವುದು ಹೆಚ್ಚು ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಇದು ಜೀವಕ್ಕೆ ಅಪಾಯವನ್ನೂ ಉಂಟು ಮಾಡುತ್ತದೆ. ಈಗಾಗಲೇ ಸಾವಿರಾರು ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಈ ಸಮಸ್ಯೆಯಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಪ್ರತಿ ವರ್ಷ ಏಪ್ರಿಲ್ 17 ಅನ್ನು 'ವಿಶ್ವ ಹಿಮೋಫಿಲಿಯಾ ದಿನ' ಎಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಹಿಮೋಫಿಲಿಯಾ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಈಗಿನ ತುರ್ತು ಅವಶ್ಯಕತೆ ಆಗಿದೆ.
ಹಿಮೋಫಿಲಿಯಾ ಬರಲು ಕಾರಣವೇನು?: ಹಿಮೋಫಿಲಿಯಾ ಒಂದು ಆನುವಂಶಿಕ ಕಾಯಿಲೆಯಾಗಿದ್ದು, ಅದು ರಕ್ತಸ್ರಾವದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇದು ಪೋಷಕರಿಂದ ಬರುವ ಆನುವಂಶಿಕ ರೋಗವಾಗಿದೆ. ಕೆಲವೊಮ್ಮೆ ರೋಗವು ಆನುವಂಶಿಕ ರೂಪಾಂತರದ ಪರಿಣಾಮವಾಗಿ ಸಂಭವಿಸಬಹುದು. ಈ ಸಮಸ್ಯೆಯು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳಲ್ಲಿ ಅಂದರೆ ಪ್ರೋಟೀನ್ ಕಡಿಮೆ ಇರುವವರಲ್ಲಿಯೂ ಈ ರೋಗ ಕಂಡು ಬರುತ್ತದೆ. ಕೆಲವರು ಅದರೊಂದಿಗೆ ಹುಟ್ಟುತ್ತಾರೆ. ಇನ್ನು ಕೆಲವರಲ್ಲಿ ಹಿಮೋಫಿಲಿಯಾ ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ಇದು ಪುರುಷರಲ್ಲಿ ಹೆಚ್ಚು ಸಾಮಾನ್ಯ ಎಂಬಂತಾಗಿದೆ ಎನ್ನುತ್ತಿವೆ ಬಹಳಷ್ಟು ಅಧ್ಯಯನಗಳು.
ಹಿಮೋಫಿಲಿಯಾದಲ್ಲಿ ಎರಡು ವಿಧ: ಹಿಮೋಫಿಲಿಯಾ - ಎ: ಇದು ಸಾಮಾನ್ಯ ರಕ್ತಸ್ರಾವದ ಕಾಯಿಲೆಯಾಗಿದೆ. ಇದು ಹೆಪ್ಪುಗಟ್ಟುವಿಕೆ ಅಂಶ ಪ್ರೋಟೀನ್-8 ಕಡಿಮೆ ಮಟ್ಟದ ಹೊಂದಿರುವವರಲ್ಲಿ ಸಮಾನ್ಯವಾಗಿ ಕಂಡು ಬರುತ್ತದೆ.
ಹಿಮೋಫಿಲಿಯಾ-ಬಿ: ಇದು ಅಪರೂಪದ, ಅಪಾಯಕಾರಿ ಕಾಯಿಲೆಯಾಗಿದೆ. ಹಿಮೋಫಿಲಿಯಾ-ಬಿ ವಿಶ್ವಾದ್ಯಂತ ಕಾಮನ್ ಕಾಯಿಲೆಯಾಗಿದೆ. ಕಡಿಮೆ ರಕ್ತ ಹೆಪ್ಪುಗಟ್ಟುವಿಕೆ ಅಂಶ ಪ್ರೋಟೀನ್-9 ಹೊಂದಿರುವ ಜನರಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ.
ಹಿಮೋಫಿಲಿಯಾ ಲಕ್ಷಣಗಳು:
- ರಕ್ತ ಹೆಪ್ಪುಗಟ್ಟುವಿಕೆ ಕೊರತೆ ಅಥವಾ ಈ ಪ್ರಕ್ರಿಯೆ ಕಂಡು ಬರದೇ ಇರುವುದು
- ಸಣ್ಣ ಗಾಯದಿಂದಲೂ ತೀವ್ರ ರಕ್ತಸ್ರಾವ, ಕೆಲವೊಮ್ಮೆ ನಿಲ್ಲದ ರಕ್ತಸ್ರಾವ
- ಶಸ್ತ್ರಚಿಕಿತ್ಸೆ ಸಮಯದಲ್ಲಿ ಅತಿಯಾದ ರಕ್ತಸ್ರಾವ
- ಮುಟ್ಟಿನ ಸಮಯದಲ್ಲಿ ಭಾರಿ ರಕ್ತಸ್ರಾವ
- ದೇಹದ ಮೇಲೆ ನೀಲಿ ಕಲೆಗಳು
- ಮೂತ್ರ ಅಥವಾ ಮಲದಲ್ಲಿ ರಕ್ತ
- ಗರ್ಭಾವಸ್ಥೆಯಲ್ಲಿ ಅಸಹಜ ರಕ್ತಸ್ರಾವ
- ಮೂಗಿನಿಂದಲೂ ಉಂಟಾಗುವ ರಕ್ತಸ್ರಾವ
- ಮೆದುಳು ಮತ್ತು ಹೃದಯದಂತಹ ಪ್ರಮುಖ ಆಂತರಿಕ ಅಂಗಗಳು ಮತ್ತು ಅಂಗಾಂಶಗಳಲ್ಲಿ ರಕ್ತಸ್ರಾವ
- ಒಸಡುಗಳಲ್ಲಿ ಕಂಡು ಬರುವ ರಕ್ತಸ್ರಾವ
- ಕೀಲುಗಳಲ್ಲಿ ನೋವು ಅಥವಾ ಊತ
- ದೀರ್ಘಕಾಲದ ತಲೆನೋವು, ನಿದ್ರಾಹೀನತೆ ಸಮಸ್ಯೆಗಳು
- ದೃಷ್ಟಿ ಸಮಸ್ಯೆಗಳು
- ಆಗಾಗ್ಗೆ ವಾಂತಿ ಕಂಡು ಬರುವುದು
ಹಿಮೋಫಿಲಿಯಾ ತಡೆಗಟ್ಟುವ ಕ್ರಮಗಳು ಯಾವುವು?: ರಕ್ತ ಪರೀಕ್ಷೆಯ ಮೂಲಕ ಹಿಮೋಫಿಲಿಯಾ ತೀವ್ರತೆಯನ್ನು ಕಂಡು ಹಿಡಿಯಬಹುದು. ಆದರೆ, ಈ ಸಮಸ್ಯೆಗೆ ಶಾಶ್ವತ ಚಿಕಿತ್ಸೆ ಇಲ್ಲ. ಕೆಲವೊಮ್ಮೆ ಚುಚ್ಚುಮದ್ದಿನ ಮೂಲಕ ಹೆಪ್ಪುಗಟ್ಟುವಿಕೆಯ ಅಂಶಗಳನ್ನು ಬದಲಿಸುವ ಆಯ್ಕೆಗಳಿವೆ. ರಕ್ತಸ್ರಾವದ ಅಪಾಯವನ್ನು ಕಡಿಮೆ ಮಾಡಲು ಕೆಲವು ಬದಲಿ ಚಿಕಿತ್ಸೆಗಳೂ ಇವೆ. ಇವುಗಳ ಜೊತೆಗೆ ಆಗಾಗ್ಗೆ ವ್ಯಾಯಾಮ ಮತ್ತು ರಕ್ತಸ್ರಾವವನ್ನು ಹೆಚ್ಚಿಸುವ ನೋವು ನಿವಾರಕಗಳನ್ನು ತಪ್ಪಿಸಬೇಕು. ನಿಮ್ಮನ್ನು ಗಾಯಗೊಳಿಸದಂತೆ ಜಾಗರೂಕರಾಗಿರಬೇಕಾಗಿರುವುದು ತೀರಾ ಅವಶ್ಯಕವಾಗಿದೆ . ಇವುಗಳ ಜೊತೆಗೆ ಕೆಲವು ಆಹಾರ ಪದ್ಧತಿಗಳನ್ನು ಬದಲಾಯಿಸುವುದರಿಂದ ಹಿಮೋಫಿಲಿಯಾ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನು ಓದಿ: ಮೆಗ್ನಿಶಿಯಂ ಕೊರತೆ ಕಾಡುತ್ತಿದ್ಯಾ?: ಡಯಟ್ನಲ್ಲಿರಲಿ ಈ ಆಹಾರಗಳು! - magnesium rich food