ETV Bharat / health

ಮಹಿಳೆಯರನ್ನು ಸತತವಾಗಿ ಕಾಡುವ ಮೂಲವ್ಯಾಧಿ​; ಈ ಸಮಸ್ಯೆಗೆ ಕಾರಣಗಳೇನು, ಪರಿಹಾರಗಳೇನು? - Women suffering from piles

author img

By ETV Bharat Karnataka Team

Published : Aug 3, 2024, 12:21 PM IST

ಪೈಲ್ಸ್​ ಬಗ್ಗೆ​ ಬಹುತೇಕರು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂತಹ ಮೂಲವ್ಯಾಧಿ​ ಸಮಸ್ಯೆಯಿಂದ ಹೊರ ಬರುವುದು ಹೇಗೆ ಎಂಬ ಕುರಿತು ವೈದ್ಯರು ಮಾತನಾಡಿದ್ದಾರೆ.

Women suffering from piles what is the reason, precaution and treatment
ಮಹಿಳೆಯರಲ್ಲಿ ಕಾಡುವ ಪೈಲ್ಸ್​ ಸಮಸ್ಯೆ (File photo ETV Bharat)

ಹೈದರಾಬಾದ್​: ಹಿರಿಯರಷ್ಟೇ ಅಲ್ಲದೇ ಅನೇಕ ಯುವ ಮಹಿಳೆಯರು ಇಂದು ಫೈಲ್ಸ್​ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಶೌಚದ ಕಾರ್ಯಗಳು ಅವರಿಗೆ ಬಲು ತ್ರಾಸದಾಯಕವಾಗಿದ್ದು, ಇದಕ್ಕಾಗಿ ಹೆಚ್ಚು ಸಮಯಗಳನ್ನು ಕಳೆಯುತ್ತಾರೆ. ಈ ಸಮಸ್ಯೆ ದೀರ್ಘಕಾಲ ಕಾಡಿದರೆ, ಅದು ದೈಹಿಕ ಸಮಸ್ಯೆಗೂ ನಮ್ಮನ್ನು ತಳ್ಳುತ್ತದೆ. ಆರಂಭದಲ್ಲೇ ಮೂಲವ್ಯಾಧಿ​​ ಸಮಸ್ಯೆಗಳ ಕುರಿತು ಸಮಾಲೋಚನೆಗೆ ಒಳಗಾಗುವುದು ಅಗತ್ಯವಾಗಿದೆ.

ಏನಿದು ಮೂಲವ್ಯಾಧಿ? ​: ಪೈಲ್ಸ್ ಎನ್ನುವುದು ಗುದದ್ವಾರದ ಒಳಗೆ ಮತ್ತು ಹೊರಗೆ ಊತವನ್ನು ಉಂಟುಮಾಡುತ್ತದೆ. ಗುದದ್ವಾರದ ಒಳ ಅಥವಾ ಹೊರ ಭಾಗದಲ್ಲಿ ಚರ್ಮವು ಸಂಗ್ರಹವಾಗಿ ನಾರುಲಿಯಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಶೌಚ ಕ್ರಿಯೆ ತ್ರಾಸದಾಯಕವಾಗಿ ಮಾರ್ಪಡುತ್ತದೆ. ದೀರ್ಘಕಾಲದವರೆಗೆ ಈ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಲು ಕಾರಣವಾಗುತ್ತದೆ ಎಂದು ಹೈದರಾಬಾದ್​ನಲ್ಲಿನ ಲಂಡನ್​ ಗ್ಯಾಸ್ಟ್ರೊ ಆಸ್ಪತ್ರೆಯ ವೈದ್ಯರಾದ ಡಾ ಚಂದ್ರಶೇಖರ್​ ಪುಲಿ ತಿಳಿಸಿದ್ದಾರೆ.

ಮಹಿಳೆಯರಲ್ಲಿ ಈ ಸಮಸ್ಯೆಗೆ ಕಾರಣಗಳೇನು?: ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡು ನಿಧಾನವಾಗಿ ಹೆಚ್ಚಾಗುತ್ತಾ ಸಾಗುತ್ತದೆ. ಕಾರಣ ಪ್ರಸವ ಸಮಯದಲ್ಲಿ ಹೊಟ್ಟೆ ಮೇಲೆ ನೀಡುವ ಒತ್ತಡವೂ ರಕ್ತ ನಾಳದ ಮೇಲೂ ಅಧಿಕ ಒತ್ತಡಕ್ಕೆ ಗುರಿಯಾಗುವಂತೆ ಮಾಡುತ್ತದೆ. ಇದರಿಂದ ಅವರಲ್ಲಿ ಪೈಲ್ಸ್​​ ಅಭಿವೃದ್ಧಿಯಾಗುವ ಅಪಾಯ ಹೆಚ್ಚಿದೆ.

ಇದರ ಜೊತೆಗೆ ಮಲಬದ್ಧತೆ ಸಮಸ್ಯೆ ಇದನ್ನು ಮತ್ತಷ್ಟು ಕೆರಳಿಸುತ್ತದೆ. ಇದರ ಜೊತೆಗೆ ಒಂದೇ ಸಮಯದಲ್ಲಿ ದೀರ್ಘವಾಗಿ ಕುಳಿತುಕೊಳ್ಳುವುದು ಕೂಡ ಪೈಲ್ಸ್​ಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಒತ್ತಡದಿಂದ ಕೂಡ ಈ ಸಮಸ್ಯೆ ಕಂಡು ಬರುತ್ತದೆ.

ವಯಸ್ಸಾದವರು ದೀರ್ಘಾವಧಿ ಕಾಲ ಶೌಚಾಲಯದಲ್ಲಿ ಕುಳಿತು ಕೊಳ್ಳುವುದರಿಂದ ಕೂಡ ಈ ಸಮಸ್ಯೆ ಅಪಾಯ ಹೆಚ್ಚುತ್ತದೆ. ಆರಂಭಿಕ ಹಂತದಲ್ಲೇ ಈ ಸಮಸ್ಯೆಗೆ ಮುನ್ನೆಚ್ಚರಿಕೆವಹಿಸುವುದರಿಂದ ಇದರ ತೀವ್ರತೆಯನ್ನು ತಡೆಯಬಹುದಾಗಿದೆ. ಪೈಲ್ಸ್​ ಸಮಸ್ಯೆ ಆರಂಭವಾಗಿದೆ ಎಂದು ತಿಳಿದಾಕ್ಷಣ ಅದಕ್ಕೆ ಸರ್ಜರಿ ಇಲ್ಲದೇ ಲೇಸರ್​​ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಹೀಗೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಬೇಗ ಉಪಶಮನ ಮಾಡಿಕೊಳ್ಳಬಹುದು.

ಯಾವ ರೀತಿ ಮುನ್ನೆಚ್ಚರಿಕೆ: ವೈದ್ಯರು ಹೇಳುವಂತೆ ಆರಂಭಿಕ ಹಂತದಲ್ಲಿ ಈ ಸಂಬಂಧ ಮುನ್ನೆಚ್ಚರಿಕೆ ವಹಿಸುವುದು ತೀರಾ ಅಗತ್ಯವಾಗಿದೆ. ಹೆಚ್ಚು ನೀರು ಕುಡಿಯುವುದು. ಮಲಬದ್ಧತೆ ತಪ್ಪಿಸುವಂತಹ ಆಹಾರ ಮಾರ್ಗಸೂಚಿ ಪಾಲಿಸುವುದು. ಫೈಬರ್​ ಸಮೃದ್ಧ ಆಹಾರ ಸೇವನೆ ಮಾಡುವುದು ಅಗತ್ಯವಾಗಿದೆ. ಈ ಸಮಸ್ಯೆ ಗಂಭೀರವಾದಲ್ಲಿ ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೆ ಒಳಗಾಗುವುದು ಅವಶ್ಯವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ವೈದ್ಯರು-ಜನಸಂಖ್ಯೆ ಅನುಪಾತ WHO ಶಿಫಾರಸಿಗಿಂತ ಉತ್ತಮ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.