ಹೈದರಾಬಾದ್: ಅಧಿಕ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಹೊಂದಿರುವವರಿಗೆ ಸ್ಟಾಟಿನ್ಸ್ ತೆಗೆದುಕೊಳ್ಳುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಆದರೆ, ಇದನ್ನು ಅಧಿಕ ಮಟ್ಟದಲ್ಲಿ ಸೇವಿಸುವುದು, ಈ ಚಿಕಿತ್ಸೆಯನ್ನು ಮಧ್ಯದಲ್ಲಿಯೇ ನಿಲ್ಲಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಇದನ್ನು ವೈದ್ಯರಿಂದ ಮುಚ್ಚಿಡುವುದು ಕೂಡ ಅಪಾಯಕಾರಿ ಎಂದಿದ್ದಾರೆ.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುವ ಕಾಲ ಯಾವುದೇ ಸಮಸ್ಯೆ ಇರುವುದಿಲ್ಲ. ಅಧಿಕ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ಗಳು ರಕ್ತನಾಳದ ಗೋಡೆ ಮತ್ತು ರೂಪ ಫಲಕಗಳ ಮೇಲೆ ಸಂಗ್ರಹವಾಗುತ್ತದೆ. ಈ ಎಲ್ಡಿಎಲ್ ಹೃದಯಾಘಾತ ಮತ್ತು ಪಾರ್ಶ್ವಾವಾಯುಗೆ ಕಾರಣವಾಗುತ್ತದೆ. ಅನೇಕ ಜನರು ಸರಿಯಾದ ಆಹಾರ ಸೇವಿಸದಿರುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣ ಎಂದು ತಿಳಿಯುತ್ತಾರೆ. ಆದರೆ, ಇದು ಸಂಪೂರ್ಣವಾಗಿ ಸತ್ಯವಲ್ಲ. ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಅವಶ್ಯಕ. ಈ ಹಿನ್ನೆಲೆಯಲ್ಲಿ ನಮ್ಮ ದೇಹಕ್ಕೆ ಅವಶ್ಯವಾದ ಶೇ 75ರಷ್ಟು ಕೊಬ್ಬನ್ನು ಅದೇ ಉತ್ಪಾದಿಸುತ್ತದೆ. ಉಳಿದ ಶೇ 25ರಷ್ಟು ಕೊಬ್ಬು ಆಹಾರದ ಮೂಲಕ ನಾವು ಸೇವಿಸುತ್ತೇವೆ. ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಈ ಸ್ಟಾಟಿನ್ಗಳಿಗೆ ಸಹಾಯ ಮಾಡುತ್ತದೆ. ಈ ಸ್ಟಾಟಿನ್ಗಳು ಕಿಣ್ವಗಳನ್ನು ತಡೆದು ದೇಹವು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದನ್ನು ತಡೆಯುತ್ತದೆ
ಇಂತಹ ಸ್ಟಾಟಿನ್ಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರವೇ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ದೇಹವೂ ಮತ್ತೆ ಕೊಲೆಸ್ಟ್ರಾಲ್ ಉತ್ಪಾದಿಸಲು ಆರಂಭಿಸುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ, ಇದು ಹೃದಯಾಘಾತ, ಪಾರ್ಶ್ವವಾಯು, ಸೌಮ್ಯ ಲಕ್ವ, ಹೃದಯ ರಕ್ತ ನಾಳಗಳ ಊತ, ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಸ್ಟಾಟಿನ್ ತೆಗೆದುಕೊಳ್ಳುವ ಕೆಲವು ಮಂದಿ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿದಾಗ ಅದು ಸಾಮಾನ್ಯ ಎಂದು ವರದಿ ಬಂದಾಗ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಆದರೆ, ಇದು ತಪ್ಪು. ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಕ್ಷಣ ಇದು ಮತ್ತೆ ಮರುಳುತ್ತದೆ.
ಆರೋಗ್ಯಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ ತ್ಯಜಿಸುವಂತಹ ಜೀವನಶೈಲಿಯ ಬದಲಾವಣೆಗಳು ಕಡಿಮೆ ಮಟ್ಟದ ಎಲ್ಡಿಎಲ್ಗೆ ಸಹಾಯ ಮಾಡುತ್ತದೆ. ಆದರೆ, ಕೆಲವರಲ್ಲಿ ಜೀನ್ಗಳು ಪ್ರಮುಖ ಪಾತ್ರವಹಿಸುತ್ತದೆ. ವಂಶವಾಹಿನಿ ಪರಿಣಾಮ ಕೆಲವರು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಜೀವನಶೈಲಿ ಬದಲಾವಣೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ನೀಡುವುದಿಲ್ಲ. ಯಾರಿಗೆ ಉತ್ತಮ ಫಲಿತಾಂಶ ಸಿಗುವುದಿಲ್ಲವೊ ಅವರು ಸ್ಟಾಟಿನ್ಸ್ ಪಡೆಯಬಹುದಾಗಿದೆ. ಮಾತ್ರೆಗಳ ಜೊತೆಗೆ ನಿಯಮಿತ ವ್ಯಾಯಾಮ, ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆ ಉತ್ತಮ ಅಭ್ಯಾಸವಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಋತುಚಕ್ರದ ಸಮಸ್ಯೆ ಬಿಗಡಾಯಿಸಲು ಕಾರಣವೇನು?