ETV Bharat / health

ಬಾಹ್ಯಾಕಾಶ ಪ್ರಯಾಣದಲ್ಲಿ ಗಗನಯಾನಿಗಳು ಅಪ್ಪಿತಪ್ಪಿ ಕೂಡ ಸಲಾಡ್​ ತಿನ್ನಲ್ಲ; ಕಾರಣ ಇಷ್ಟೇ! - ಗಗನಯಾನಿಗಳ ಆಹಾರ

ಬಾಹ್ಯಾಕಾಶಯಾನಿಗಳು ಅಲ್ಲಿಯೇ ಲೆಟಿಸ್ ಅನ್ನು ಬೆಳೆದುಕೊಳ್ಳುವ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

Why eating lettuce salads bad for health in space

author img

By ETV Bharat Karnataka Team

Published : Jan 23, 2024, 3:38 PM IST

ನ್ಯೂಯಾರ್ಕ್​: ಬಾಹ್ಯಾಕಾಶದ ಕೌತುಕಗಳ ಅಧ್ಯಯನ ಸಲುವಾಗಿ ಹಲವಾರು ದಿನಗಳ ಕಾಲ ಬಾಹ್ಯಾಕಾಶ ಯಾನ ನಡೆಸುವ ಗಗನಯಾನಿಗಳ ಆರೋಗ್ಯ ಮತ್ತು ಊಟದ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸಲಾಗುತ್ತದೆ. ವಾರಾನುಗಟ್ಟಲೇ ಅಲ್ಲಿನ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ, ದೀರ್ಘಕಾಲ ಬಾಳಿಕೆಯ ಆಹಾರವನ್ನು ಅವರು ಕೊಂಡೊಯ್ಯುತ್ತಾರೆ. ಆದರೆ, ಅವರ ಆಹಾರದ ಭಾಗದಲ್ಲಿ ಈ ಆರೋಗ್ಯಕರ ತಿನಿಸನ್ನು ಮಾತ್ರ ಕೊಂಡೊಯ್ಯುವುದಿಲ್ಲ. ಅದು ಎಂದರೆ, ಲೆಟಿಸ್​​​ ಮತ್ತು ಎಲೆಯುಳ್ಳ ಹಸಿರು ತರಕಾರಿಗಳು.

ಇವು ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಭಾಗವಾಗಿದ್ದು, ಭೂಮಿಗಿಂತ ಬಾಹ್ಯಕಾಶದಲ್ಲಿ ಬ್ಯಾಕ್ಟೀರಿಯ ಸೋಂಕು ಹೆಚ್ಚುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ತಿಳಿಸಿದೆ. ಇದರ ಜೊತೆಗೆ ಗಗನಯಾನಿಗಳು ಹಿಟ್ಟಿನ ಟೊರ್ಟಿಲ್ಲಸ್​​ ಮತ್ತು ಕಾಫಿ ಪುಡಿಗಳ ಆಹಾರವನ್ನು ಹೊಂದಿರುತ್ತಾರೆ. ಗಗನಯಾನಿಗಳು ಬಾಹ್ಯಕಾಶದಲ್ಲಿಯೇ ಲಭ್ಯವಾಗುವ ತಾಮಪಾನ ಮತ್ತು ಸೂರ್ಯನ ಬೆಳಕಿನ ಸಹಾಯದಿಂದ ಸೂಕ್ಷ್ಮ ಗುರತ್ವಾಕರ್ಷಣೆಯಿಂದ ಹಸಿರು ಎಲೆಗಳನ್ನು ಬೆಳೆಯಬಹುದು ಎಂದು ಗಮನಿಸಿದ್ದಾರೆ. ಗಗನಯಾನಿಗಳು ನಿಯಂತ್ರಿತ ಚೇಂಬರ್​​​ ಮೂಲಕ ಸಲಾಡ್​ ಬೆಳೆಯುವ ಪ್ರಯೋಗವನ್ನು ನಡೆಸಿದ್ದಾರೆ.

ಈ ಸಲಾಡ್​​ಗಳು ಬಾಹ್ಯಕಾಶದಲ್ಲಿ ಸೇವನೆಗೆ ಉತ್ತಮವೇ ಎಂಬುದನ್ನು ನೋಡಲು ಎಂದು ಅಮೆರಿಕದ ಡೆಲ್ವಾರೆ ಯುನಿವರ್ಸಿಟಿ ಸಂಶೋಧಕರು ಮುಂದಾಗಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್​​​ನಲ್ಲಿ ತೂಕವಿಲ್ಲದ ಪರಿಸರವನ್ನು ಅನುಕರಿಸುವ ಪರಿಸ್ಥಿತಿಗಳಲ್ಲಿ ಲೆಟಿಸ್ ಬೆಳೆದರು.

ಈ ಗಿಡಗಳು ರೋಟೆಷನ್​ ಮೈಕ್ರೋಗ್ರಾವಿಟಿಗೆ ಸಿಮ್ಯೂಲೆಟೆಡ್​​ಗೆ ಒಡ್ಡಲಾಗಿದೆ. ಈ ಅಧ್ಯಯನದ ಫಲಿತಾಂಶವನ್ನು ಸೈಂಟಿಫಿಕ್​ ರಿಪೋರ್ಟ್​​ನಲ್ಲಿ ಪ್ರಕಟಿಸಲಾಗಿದೆ. ಎನ್​ಪಿಜೆ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಗಿಡಗಳು ಸಲ್ಮೊನೆಲ್ಲಾದಂತಹ ಮಾನವ ರೋಗಕಾರಕ ಹೆಚ್ಚು ಸೋಂಕಿಗೆ ಒಳಗಾದವು.

ಎಲೆಯಲ್ಲಿನ ಸಣ್ಣ ರಂಧ್ರವಾದ ಸ್ಟೊಮಟಾ ಮತ್ತು ಕಾಂಡವೂ ಸಸ್ಯಗಳು ಸಾಮಾನ್ಯವಾಗಿ ಉಸಿರಾಡುವಂತೆ ಆಗಿದೆ. ಯಾವಾಗ ಸಂಶೋಧಕರು ಲೆಟ್ಯೂಸ್​ಗೆ ಬ್ಯಾಕ್ಟೋರಿಯಾಗಳನ್ನು ಸೇರಿಸಿದರೂ ಆಗ ಗಿಡದ ಎಲೆಗಳು ಮುಚ್ಚಿಕೊಳ್ಳುವ ಬದಲಾಗಿ ಈ ಸ್ಟೊಮಟಾವನ್ನು ಅಗಲವಾಗಿ ತೆರೆದಿದೆ.

ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬ್ಯಾಕ್ಟೀರಿಯಾಗಳು, ಬಾಹ್ಯಕಾಶದಂತಹ ಪರಿಸ್ಥಿತಿಯಲ್ಲಿ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಆದರೆ, ಕ್ರಿಮಿನಾಶಕ ​ಬೀಜಗಳು ಮತ್ತು ಸುಧಾರಿತ ಜೆನೆಟಿಕ್​​ಗಳು ಇದಕ್ಕೆ ಪರಿಹಾರವಾಗಿದೆ ಎಂಬ ಅಂಶವನ್ನು ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ.

ಕ್ರಿಮಿನಾಶ ಕ ಬೀಜಗಳು ಗಿಡಗಳು ಸೂಕ್ಷ್ಮಜೀವಿಗಳ ಅಪಾಯವನ್ನು ಕಡಿಮೆ ಮಾಡುವ ಮಾರ್ಗವಾಗಿದೆ ಎಂದು ಸೂಕ್ಷ್ಮಜೀವಿನ​ ಆಹಾರ ಸುರಕ್ಷತಾ ಪ್ರೊ ಕಲಿ ಕ್ನೈಲ್​​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಬಾಹ್ಯಾಕಾಶಯಾನಿಗಳಿಗೆ ರುಚಿಕರ ಪೌಷ್ಟಿಕಾಂಶಯುಕ್ತ ವೆಜ್​ ಸಲಾಡ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.