ಹೈದರಾಬಾದ್: ಗುಜರಾತ್ನ ಸಬರಕಾಂತ ಜಿಲ್ಲೆಯಲ್ಲಿ ಶಂಕಿತ ಚಂಡೀಪುರ ವೈರಸ್ ಸೋಂಕಿಗೆ ನಾಲ್ಕು ಮಕ್ಕಳು ಬಲಿಯಾಗಿದ್ದು, ಇಬ್ಬರು ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ. ಸೋಂಕು ಉಲ್ಬಣವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಸೋಂಕಿನ ತಡೆಗೆ ಸೋಂಕಿತ ಪ್ರದೇಶದಲ್ಲಿ ಮರಳುನೊಣಗಳನ್ನು ತಡೆಗಟ್ಟಲು ಮುಂದಾಗಿದ್ದಾರೆ.
ಏನಿದು ಚಂಡೀಪುರ್ ವೈರಸ್: ರಾಬ್ಡೋವಿರಿಡೆ (Rhabdoviridae) ಹರಡುವ ಸೋಂಕಾಗಿದೆ. ಈ ಸೋಂಕು ತೀವ್ರವಾದ ಎನ್ಸೆಫಾಲಿಟಿಸ್, ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಮೊದಲಿಗೆ 1965 ರಲ್ಲಿ ಮಹಾರಾಷ್ಟ್ರದಲ್ಲಿ ಈ ಸೋಂಕು ಪತ್ತೆಯಾಗಿತ್ತು. ದೇಶದಲ್ಲಿ ಎನ್ಸೆಫಾಲಿಟಿಕ್ ಕಾಯಿಲೆಯ ವಿವಿಧ ಸಂಬಂಧವನ್ನು ಹೊಂದಿದೆ ಈ ಸೋಂಕು. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 2003ರಲ್ಲಿ ಈ ಸೋಂಕು ಹರಡಿತು. 329 ಮಕ್ಕಳು ಸೋಂಕಿಗೆ ಗುರಿಯಾಗಿದ್ದು, 183 ಸಾವನ್ನಪ್ಪಿದ್ದರು. 2004 ರಲ್ಲಿ ಗುಜರಾತ್‌ನಲ್ಲಿ ಕೆಲವು ಪ್ರಕರಣ ಪತ್ತೆಯಾಗಿ, ಸಾವು ಸಂಭವಿಸಿತ್ತು.
ಇದೀಗ ಸೋಂಕಿಗೆ ಜುಲೈ 10 ರಂದು ಸಾವುಗಳು ಸಂಭವಿಸಿವೆ, ಮೃತರಲ್ಲಿ ಒಬ್ಬರು ಸಬರಕಾಂತ್ ಜಿಲ್ಲೆಯವರು. ಇನ್ನಿಬ್ಬರು ಅರಾವಳಿ ಜಿಲ್ಲೆಯವರು. ಈ ಸೋಂಕಿಗೆ ಇನ್ನಬ್ಬರು ರಾಜಸ್ಥಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಸ್ಥಾನದ ಆರೋಗ್ಯ ಅಧಿಕಾರಿಗಳು ಕೂಡ ಈ ಸೋಂಕು ಜೀವ ಹಾನಿಕಾರಕ ಸೋಂಕಾಗಿದೆ ಎಂದು ಎಚ್ಚರಿಸಿದ್ದಾರೆ.
ಈ ಸೋಂಕು ಮರಳುನೊಣ, ಸೊಳ್ಳೆ, ಉಣ್ಣೆಗಳಿಂದ ಹರಡುತ್ತದೆ. ಸದ್ಯ ಸೋಂಕು ಪೀಡಿತ ಆರು ಮಕ್ಕಳ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ ಎಂದು ಸಬರಕಾಂತ್ ಮುಖ್ಯ ಜಿಲ್ಲಾ ಆರೋಗ್ಯಾಧಿಕಾರಿ ರಾಜ್ ಸುತಾರಿಯಾ ತಿಳಿಸಿದ್ದಾರೆ.
ನಾಲ್ಕು ಮಕ್ಕಳ ಸಾವಿಗೆ ಚಂಡೀಪುರ ವೈರಸ್ ಕಾರಣ ಎಂದು ಮಕ್ಕಳ ತಜ್ಞರು ಶಂಕಿಸಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಮಕ್ಕಳು ಇದೇ ರೀತಿಯ ರೋಗಲಕ್ಷಣಗಳನ್ನು ಕಂಡು ಬಂದಿವೆ.
ಆರಂಭಿಕ ಪತ್ತೆ ಅಗತ್ಯ: ಚಂಡೀಪುರ ವೆಸಿಕ್ಯುಲೋವೈರಸ್ ಗಂಭೀರವಾದ ವೈರಲ್ ಸೋಂಕಾಗಿದ್ದು, ಇದು ತೀವ್ರವಾದ ಎನ್ಸೆಫಾಲಿಟಿಸ್ಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳಲ್ಲಿ. ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸೋಂಕಿನ ಆರಂಭಿಕ ಪತ್ತೆಯ ಮಧ್ಯಸ್ಥಿಕೆ ಮತ್ತು ಬೆಂಬಲವೂ ಚಿಕಿತ್ಸೆಯಲ್ಲಿ ಪ್ರಮುಖವಾಗಿದೆ. ವೈಯಕ್ತಿಕ ರಕ್ಷಣಾ ಕ್ರಮಗಳು ಮತ್ತು ಪರಿಸರ ನಿಯಂತ್ರಣದ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ಸೋಂಕು ತಡೆಯಲ್ಲಿ ಮರಳುನೊಣದ ನಿಯಂತ್ರಣ ಅಗತ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಕಡಿಮೆ ಆಗದ ಡೆಂಗ್ಯೂ ಜ್ವರ ಏರಿಕೆ ಪ್ರಮಾಣ; ಮತ್ತೆ 445 ಪಾಸಿಟಿವ್ ಪ್ರಕರಣಗಳು ಪತ್ತೆ