ETV Bharat / health

ಒಂದು ತಿಂಗಳು ಮಾಂಸಾಹಾರ ತಿನ್ನದಿದ್ದರೆ ಏನಾಗುತ್ತೆ ಗೊತ್ತಾ? - Stop Eating Non Veg For A Month - STOP EATING NON VEG FOR A MONTH

ಮಾಂಸಾಹಾರ​ ಪ್ರಿಯರು ನಾನ್​ ವೆಜ್​ ಸೇವಿಸುವುದನ್ನು ತ್ಯಜಿಸುವುದು ಕಷ್ಟದ ಸಂಗತಿ. ಆದರೆ ಒಂದು ತಿಂಗಳು ನಾನ್​ ವೆಜ್​ ದೂರವಿಡುವ ಗಟ್ಟಿ ಮನಸ್ಸು ಮಾಡಿ, ನಂತರ ನೋಡಿ ನಿಮ್ಮ ದೇಹದಲ್ಲಾಗುವ ಬದಲಾವಣೆ..!

What happens If stop Eating Non Veg For A Month?
ಒಂದು ತಿಂಗಳು ಮಾಂಸಾಹಾರ ತಿನ್ನದಿದ್ದರೆ ಏನಾಗುತ್ತೆ ಗೊತ್ತಾ? (ETV Bharat)
author img

By ETV Bharat Karnataka Team

Published : Jun 3, 2024, 7:46 AM IST

ಹೆಚ್ಚಿನ ಜನರು ಮಾಂಸಾಹಾರ ಪ್ರಿಯರೇ ಇದ್ದಾರೆ ಎಂದರೂ ತಪ್ಪಾಗಲಾರದು. ಕೆಲವರಿಗಂತೂ ಚಿಕನ್​, ಮಟನ್​, ಫಿಶ್ ಹೀಗೆ ಯಾವುದಾದರೊಂದು ನಾನ್​ವೆಜ್​ ಐಟಮ್​ ಇರಲೇಬೇಕು. ಭಾನುವಾರ ಬಂತೆಂದರೆ ಸಾಕು ಬಹುತೇಕ ಎಲ್ಲರ ಮನೆಯಲ್ಲೂ ಮಾಂಸಾಹಾರ ಖಾದ್ಯಗಳಿರುತ್ತವೆ. ನಾನ್​ವೆಜ್​ ರೆಸಿಪಿಗಳನ್ನು ಇಷ್ಟಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇತ್ತೀಚೆಗೆ ಕೆಲವರು ಮಾಂಸಾಹಾರ ಪ್ರಿಯರು ಕೂಡ ನಾನ್​ ವೆಜ್​ ತಿನ್ನುವುದನ್ನು ಬಿಟ್ಟು ಸಸ್ಯಾಹಾರದತ್ತ ವಾಲುತ್ತಿದ್ದಾರೆ. ಕೆಲವು ಡಯಟ್​ ಮಾಡುವವರು ನಾನ್​ವೆಜ್​ನಿಂದ ದೂರ ಉಳಿಯುತ್ತಿದ್ದಾರೆ. ಆದರೆ ಒಂದು ತಿಂಗಳು ನಾನ್​ ವೆಜ್​ ತಿನ್ನದೇ ಇದ್ದರೆ, ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ?

ತೂಕ ಇಳಿಕೆ: ಮಾಂಸಾಹಾರ ಖಾದ್ಯಗಳಲ್ಲಿ ಕ್ಯಾಲೊರಿ ಹೆಚ್ಚಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಶೇಕಡಾವಾರು ಕೊಬ್ಬಿನ ಪ್ರಮಾಣ ಹೆಚ್ಚುತ್ತದೆ. ಅದಲ್ಲದೇ ಅಧಿಕ ತೂಕದಿಂದ ಬಳಲುತ್ತಿರುವವರು ಚಿಕನ್​ ಮತ್ತು ಮಟನ್​ ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಕೂಡ ಹೇಳುತ್ತಾರೆ. ಅದೇ ಸಮಯಕ್ಕೆ ಒಂದು ತಿಂಗಳು ನೀವು ನಾನ್​ ವೆಜ್​ ಸೇವನೆ ಮಾಡದೇ ಇರುವುದರಿಂದ ತೂಕ ಕಡಿಮೆಯಾಗುವ ಸಾಧ್ಯತೆಯಿದೆ. ಕಡಿಮೆ ಕ್ಯಾಲೊರಿ ಇರುವ ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪನ್ನು ನಿಮ್ಮ ಆಹಾರದ ಭಾಗವಾಗಿ ಮಾಡುವುದರಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದ ತಜ್ಞರು ಸಲಹೆ ನೀಡುತ್ತಾರೆ.

ಜೀರ್ಣಕ್ರಿಯೆ ಸುಧಾರಣೆ: ಕೆಲವು ದಿನಗಳವರೆಗೆ ಮಾಂಸಾಹಾರವನ್ನು ತ್ಯಜಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ತಾಜಾ ಗ್ರೀನ್ಸ್​ ಮತ್ತು ತರಕಾರಿಗಳಲ್ಲಿ ಫೈಬರ್​ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಎನ್ನುತ್ತಾರೆ ತಜ್ಞರು. ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್​ ಮಟ್ಟ ಕಡಿಮೆ: ನಾನ್​ವೆಜ್​ ಖಾದ್ಯಗಳಲ್ಲಿ ನ್ಯಾಚುರೇಟೆಡ್​ ಕೊಬ್ಬಿನಂಶ ಅಧಿಕವಾಗಿರುತ್ತದೆ. ಮಾಂಸಾಹಾರ ಖಾದ್ಯಗಳನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಾಗುತ್ತದೆ. ಆದರೆ ಒಂದು ತಿಂಗಳ ಕಾಲ ಮಾಂಸಾಹಾರ ಸೇವನೆ ಮಾಡದಿದ್ದರೆ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಬಹುದು. ನಾನ್​ವೆಜ್​ ತಿನ್ನದಿರುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎನ್ನುವುದು ತಜ್ಞರ ಸಲಹೆ.

2016ರಲ್ಲಿ "ಜರ್ನಲ್​ ಆಫ್​ ಹೈಪರ್​ ಟೆನ್ಶನ್​" ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಒಂದು ತಿಂಗಳ ಕಾಲ ಮಾಂಸಾಹಾರ ತಿನ್ನದಿದ್ದರೆ ರಕ್ತದ ಕೊಲೆಸ್ಟ್ರಾಲ್​ ಮಟ್ಟ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕೆನೆಡಾದ ಸೇಂಟ್​ ಮೈಕಲ್​ ಆಸ್ಪತ್ರೆಯ ಡಾ.ಡೇವಿಡ್​ ಜೆಂಕಿನ್ಸ್​ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ತಿಂಗಳುಗಟ್ಟಲೆ ಮಾಂಸಾಹಾರ ಸೇವಿಸದಿರುವುದರಿಂದ ರಕ್ತದ ಕೊಲೆಸ್ಟ್ರಾಲ್​ ಮಟ್ಟ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಊತ ಮತ್ತು ಉರಿಯೂತ ಕಡಿಮೆ: ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಆಹಾರಗಳು ಹಲವಾರು ರೀತಿಯಲ್ಲಿ ಲಭ್ಯವಿವೆ. ಸಂಸಕರಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೀರ್ಘಾವಧಿಯಲ್ಲಿ ದೇಹದಲ್ಲಿ ಊತ ಮತ್ತು ಉರಿ ಉಂಟಾಗಬಹುದು. ಅಷ್ಟೇ ಅಲ್ಲದೆ ಇವು ಕೆಲವು ರೋಗಗಳಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಮಾಂಸಾಹಾರ ಸೇವನೆಯನ್ನು ತಪ್ಪಿಸುವುದರಿಂದ ಉರಿಯೂತದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಮಾಂಸಾಹಾರ ತಿನ್ನುತ್ತಿದ್ದವರು ಒಂದೇ ಬಾರಿಗೆ ಮಾಂಸಾಹಾರ ತಿನ್ನುವುದನ್ನು ನಿಲ್ಲಿಸಿದಾಗ, ನಿಮ್ಮ ದೇಹ ದುರ್ಬಲವಾದಂತಹ ಹಾಗೂ ದಣಿದ ಅನುಭವವಾಗಬಹುದು. ಯಾಕೆಂದರೆ ನಾನ್​ವೆಜ್​ ಆಹಾರದಲ್ಲಿ ನಮಗೆ ಗರಿಷ್ಠ ಪ್ರಮಾಣದ ಪ್ರೋಟೀನ್​ ಮತ್ತು ಕಬ್ಬಿನಾಂಶ ಸಿಗುತ್ತದೆ. ಇದ್ದಕ್ಕಿಂದ್ದಂತೆ ಮಾಂಸಾಹಾರ ತಿನ್ನುವುದರಿಂದ ಇವೆರಡರ ಕೊರತೆಯಿಂದದೇಹ ಸುಸ್ತಾಗುತ್ತದೆ. ಆದರೆ ಮಾಂಸಾಹಾರ ಸೇವನೆಯಿಂದ ನಮ್ಮ ದೇಹಕ್ಕೆ ಜೀವಸತ್ವಗಳು ಹಾಗೂ ಖನಿಜಗಳು ಸಿಗುವುದಿಲ್ಲ.

ಸೂಚನೆ: ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಮಾಹಿತಿಯನ್ನು ಒದಗಿಸಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮುನ್ನ ನಿಮ್ಮ ಕುಟುಂಬದ ವೈದ್ಯರ ಸಮಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಚಿಪ್ಸ್​, ಕೋಲ್ಡ್​ ಡ್ರಿಂಕ್ಸ್​ನಂತಹ ಆಹಾರ ಸೇವನೆಯಿಂದ ನೆನಪಿನ ಶಕ್ತಿ ಮೇಲೆ ಪರಿಣಾಮ; ಅಧ್ಯಯನದಲ್ಲಿ ಬಹಿರಂಗ - Ultra processed foods effect

ETV Bharat Logo

Copyright © 2024 Ushodaya Enterprises Pvt. Ltd., All Rights Reserved.