ಇಂದಿನ ದಿನಗಳಲ್ಲಿ ನೀವು ಹೊರಬರಲು ಬಯಸಿದರೆ, ಶೂಗಳನ್ನು ಧರಿಸುವುದಂತೂ ಸಾಮಾನ್ಯವಾಗಿ ಬಿಟ್ಟಿದೆ. ಬಹುತೇಕ ಜನರು ಚಪ್ಪಲಿಯನ್ನು ಹೊರಗೆ ಮಾತ್ರವಲ್ಲದೇ ಮನೆಯಲ್ಲಿಯೂ ಬಳಸುತ್ತಾರೆ. ಚಪ್ಪಲಿಯನ್ನು ಬಳಸುವುದರಿಂದ ಪಾದಗಳನ್ನು ರಕ್ಷಣೆ ಲಭಿಸುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುವುದು ಸೇರಿದಂತೆ ಹಲವು ಪ್ರಯೋಜನಗಳಿವೆ. ಆದರೆ, ಇದರ ಜೊತೆಗೆ ಅನಾನುಕೂಲಗಳಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೀಲು ನೋವು: ಸ್ಟೈಲಿಶ್ ಆಗಿ ಕಾಣಲು ದಿನವಿಡೀ ಶೂ ಅಥವಾ ಚಪ್ಪಲಿ ಧರಿಸಿದರೆ ಚಿಕ್ಕವಯಸ್ಸಿನಲ್ಲೇ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಹೈಹೀಲ್ಡ್ ಧರಿಸುವುದರಿಂದ ಕೀಲು ನೋವು ಕೂಡ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಅದಕ್ಕಾಗಿಯೇ ತಜ್ಞರು ಇಂತಹ ಸಮಸ್ಯೆಗಳನ್ನು ತಪ್ಪಿಸಲು ಹೈ ಹೀಲ್ಡ್ ಸ್ಯಾಂಡಲ್ಗಳನ್ನು ಬಳಸದಂತೆ ಸಲಹೆ ನೀಡುತ್ತಾರೆ. ಇದಲ್ಲದೇ, ಕಡಿಮೆ ಗುಣಮಟ್ಟದ ಶೂ ಮತ್ತು ಚಪ್ಪಲಿಗಳನ್ನು ಧರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಸಂಧಿವಾತ ಬರುವ ಅಪಾಯವಿದೆ. ಹಾಗಾಗಬಾರದು ಎಂದಾದರೆ ಇವುಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ತಿಳಿಸುತ್ತಾರೆ.
ಮೂಳೆ ಸಮಸ್ಯೆ: ದಿನವಿಡೀ ಶೂ ಧರಿಸುವುದರಿಂದ ಕಾಲಿನ ಬೆರಳ ಉಗುರಿನೊಂದಿಗೆ ಮೂಳೆಯೂ ಬೆಳೆಯುತ್ತದೆ ಎನ್ನುತ್ತಾರೆ ವೈದ್ಯರು. ಇದರಿಂದ ಹೆಬ್ಬೆರಳು ಮೂಳೆ ವಕ್ರವಾಗುತ್ತದೆ. ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಚಿಕಿತ್ಸೆಯ ಅಗತ್ಯವಿರುವ ಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ 2018ರಲ್ಲಿ ನಡೆಸಲಾದ ಜರ್ನಲ್ ಆಫ್ ಫೂಟ್ ಮತ್ತು ಆಂಕಲ್ ರಿಸರ್ಚ್, ಕಾಲು ನೋವಿನ ಜೊತೆಗೆ, ಪಾದದ ಆಕಾರವು ಬದಲಾಗುತ್ತದೆ. ಮತ್ತು ಹ್ಯಾಮರ್ ಟೋನಂತಹ ರೋಗಗಳು ಸಂಭವಿಸುತ್ತವೆ ಎಂದು ಬಹಿರಂಗಪಡಿಸಿತು. ಡಾ. ಹಿಲ್ ಎಸ್, ಥಾಮಸ್ ಜೆ, ಟಕರ್ ಆರ್, ಬೆನ್ನೆಲ್ ಕೆ. ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಸೋಂಕುಗಳು: ವಿಶೇಷವಾಗಿ ದಿನವಿಡೀ ಗಾಳಿಯ ಪ್ರಸರಣವಿಲ್ಲದೇ ಪಾದಗಳನ್ನು ಶೂಗಳಲ್ಲಿ ಇರಿಸಿದರೆ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಪಾದಗಳಿಗೆ ನೈಸರ್ಗಿಕ ಗಾಳಿ ಮತ್ತು ಬೆಳಕಿನ ಕೊರತೆಯು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ, ಇಂತಹ ಸಮಸ್ಯೆಗಳು ಬರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಆಯುರ್ವೇದ ತಜ್ಞರು. ಯಾವುದೇ ಪಾದರಕ್ಷೆಗಳಿಲ್ಲದೇ ಪ್ರತಿದಿನ ಹುಲ್ಲಿನ ಮೇಲೆ ನಡೆಯಲು ವಿಶೇಷವಾಗಿ ಸಲಹೆ ನೀಡಲಾಗುತ್ತದೆ. ಅಥವಾ ಯಾವುದಾದರೂ ಬಯಲು ಪ್ರದೇಶದಲ್ಲಿ ಸ್ವಲ್ಪ ಕಾಲ ನಡೆಯಿರಿ. ಈ ರೀತಿ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಆರೋಗ್ಯವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು:
https://www.ncbi.nlm.nih.gov/pmc/articles/PMC3132870/
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.