ETV Bharat / health

ವಿಟಮಿನ್ ಡಿ ಕೊರತೆಯೇ: ಹಾಗಾದರೆ ಅಪಾಯದಲ್ಲಿರುವ ಆರೋಗ್ಯ ರಕ್ಷಣೆಗೆ ಇವುಗಳನ್ನು ಸೇವಿಸಿ! - HOW TO INCREASE VITAMIN D NATURALLY - HOW TO INCREASE VITAMIN D NATURALLY

ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು. ದೇಹದಲ್ಲಿನ ಅನೇಕ ಚಯಾಪಚಯ ಕ್ರಿಯೆಗಳ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ, ಮಳೆಗಾಲದಲ್ಲಿ ಸಾಕಷ್ಟು ಬಿಸಿಲು ಇರುವುದಿಲ್ಲ. ಇಂತಹ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಬೇಕಾದ ವಿಟಮಿನ್ ಡಿ ಸಿಗುತ್ತದೆ ಎನ್ನುತ್ತಾರೆ ತಜ್ಞರು.

vitamin-d-rich-foods-how-to-increase-vitamin-d-naturally-in-monsoon-in-Kannada
ವಿಟಮಿನ್ ಡಿ ಕೊರತೆಯೇ: ಅಪಾಯದಲ್ಲಿರುವ ಆರೋಗ್ಯ ರಕ್ಷಣೆಗೆ ಇವುಗಳನ್ನು ಸೇವಿಸಿ! (Vitamin D Rich Foods (ETV Bharat))
author img

By ETV Bharat Karnataka Team

Published : Sep 9, 2024, 9:12 PM IST

How to Benefit Vitamin D Rich Foods: ವಿಟಮಿನ್​​ಗಳು ದೇಹಕ್ಕೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಇವುಗಳು ಇರಬೇಕಾದುದಕ್ಕಿಂತ ಕಡಿಮೆಯಾದರೆ, ಚಯಾಪಚಯ ಕ್ರಿಯೆಯು ಹಾನಿಗೊಳಗಾಗುತ್ತದೆ. ಅಂಗಗಳ ಕಾರ್ಯನಿರ್ವಹಣೆಯು ನಿಧಾನಗೊಳ್ಳುತ್ತದೆ. ಇವುಗಳಲ್ಲಿ ವಿಟಮಿನ್ ಡಿ ಬಹಳ ಮುಖ್ಯ. ವಿಟಮಿನ್​ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುವುದಲ್ಲದೇ ಹೃದಯದ ಕಾರ್ಯವನ್ನು ನಿಧಾನಗೊಳಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಅಂತಾರೆ ಆರೋಗ್ಯ ತಜ್ಞರು. ಹಾಗಾಗಿಯೇ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಹೆಚ್ಚುತ್ತದೆ ಎನ್ನುತ್ತಾರೆ ಅವರು.

ಮೀನು: ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಖ್ಯಾತ ಪೌಷ್ಟಿಕತಜ್ಞ ಡಾ. ಲಕ್ಷ್ಮಿ ಕಿಲಾರು ಹೇಳುವ ಪ್ರಕಾರ ವಿಶೇಷವಾಗಿ ಕೊಬ್ಬಿನಾಂಶ ಹೊಂದಿರುವ ಮೀನುಗಳು (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ವರದಿ) ಸಾಲ್ಮನ್, ಟ್ಯೂನ, ಮ್ಯಾಕೆರೆಲ್, ಸಾರ್ಡೀನ್‌ಗಳು ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ವಿಟಮಿನ್ ಡಿ ಈ ಮೀನುಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ.. ಮಳೆಗಾಲದಲ್ಲಿ ಮೀನನ್ನು ಸೇವನೆ ಮಾಡುವ ಮೂಲಕ ಅಗತ್ಯ ವಿಟಮಿನ್​ ಡಿ ಪಡೆದುಕೊಂಡು, ಇದರ ಕೊರತೆಯನ್ನ ನೀಗಿಸಿಕೊಳ್ಳಬೇಕು.

ಅಣಬೆ: ಬಿಸಿಲಿನಲ್ಲಿ ಬೆಳೆಯುವ ಕೆಲವು ವಿಧದ ಅಣಬೆಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎನ್ನುತ್ತಾರೆ ಡಾ.ಲಕ್ಷ್ಮಿ. ಇದಲ್ಲದೇ ಕ್ಯಾಲ್ಸಿಯಂ, ಬಿ1, ಬಿ2, ಬಿ5, ತಾಮ್ರ. ಮುಂತಾದ ಪೋಷಕಾಂಶಗಳೂ ಇವುಗಳಲ್ಲಿ ಹೇರಳವಾಗಿವೆ. ಆದ್ದರಿಂದಲೇ ಮಳೆಗಾಲದಲ್ಲಿ ಇವುಗಳನ್ನು ಸೇವಿಸಿದರೂ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ:ಆಯಿಲಿ ಸ್ಕಿನ್ ಸಮಸ್ಯೆ ಇದೆಯೇ? ಈ ಸಲಹೆಗಳನ್ನು ಪಾಲಿಸಿದರೆ ಹೊಳೆಯುವ ತ್ವಚೆ ನಿಮ್ಮದು! - Oily Skin Removal Tips

ಮೊಟ್ಟೆಯ ಹಳದಿ ಭಾಗ : ಇದರಲ್ಲಿ ವಿಟಮಿನ್ ಡಿ ಮತ್ತು ಪ್ರೊಟೀನ್ ಕೂಡ ಸಮೃದ್ಧವಾಗಿದೆ. ಆದಾಗ್ಯೂ, ಕೊಬ್ಬುಗಳು ಸಹ ಹೆಚ್ಚು. ಹಾಗಾಗಿ.. ನಿತ್ಯ ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದು ಆರೊಗ್ಯದ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ.

ಕಮಲದ ಹಣ್ಣುಗಳು: ಇವುಗಳಲ್ಲಿ ವಿಟಮಿನ್ ಸಿ ಮತ್ತು ಡಿ ಕೂಡ ಸಮೃದ್ಧವಾಗಿದೆ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಸಹಕಾರಿ. ಹಾಗಾಗಿ ತಾವರೆ ಹಣ್ಣನ್ನು ನಿತ್ಯ ತಿಂದರೂ ಅಥವಾ ಜ್ಯೂಸ್ ಮಾಡಿ ಕುಡಿದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಡಾ.ಲಕ್ಷ್ಮಿ.

ಹಾಲು ಮತ್ತು ಮೊಸರು : ದೇಹಕ್ಕೆ ವಿಟಮಿನ್ ಡಿ ಒದಗಿಸಲು ಹಾಲು ಮತ್ತು ಮೊಸರು ತುಂಬಾ ಸಹಕಾರಿ. ಅವು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಕೊರತೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಇದನ್ನು ಓದಿ: ಮೂಗು, ಮುಖದ ಮೇಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸರಳ ಉಪಾಯ! - Blackheads Remove Tips

ಸೂರ್ಯಕಾಂತಿ ಬೀಜಗಳು: 'ವಿಟಮಿನ್ ಡಿ' ಅಧಿಕವಾಗಿರುವ ಆಹಾರಗಳಲ್ಲಿ ಇದೂ ಒಂದು. ಅದಕ್ಕಾಗಿಯೇ ಮಾನ್ಸೂನ್ ಸಮಯದಲ್ಲಿ ಸಲಾಡ್ ಮತ್ತು ಮೊಸರುಗಳೊಂದಿಗೆ ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಉತ್ತಮ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು ಅನ್ನೋದು ಆರೋಗ್ಯ ತಜ್ಞರ ಆಂಬೋಣ.

ಇದಲ್ಲದೇ, ಕಾಡ್ ಲಿವರ್ ಎಣ್ಣೆ, ಸಿರಿಧಾನ್ಯಗಳು, ಚೀಸ್, ಸೋಯಾ ಹಾಲು, ಓಟ್ಸ್ ಸಹ ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ. ಹಾಗಾಗಿ ಮಳೆಗಾಲದಲ್ಲಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೂ ದೇಹಕ್ಕೆ ಬೇಕಾದಷ್ಟು ವಿಟಮಿನ್ ಡಿ ಸಿಗುತ್ತದೆ ಎನ್ನುತ್ತಾರೆ ಡಾ.ಲಕ್ಷ್ಮಿ.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಇವುಗಳನ್ನು ಪಾಲನೆ ಮಾಡುವ ಮುನ್ನ ಪರಿಣತ ವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಇದನ್ನು ಓದಿ:ರೇಣುಕಾಸ್ವಾಮಿಯಿಂದ ಚಿನ್ನಾಭರಣ ಸುಲಿಗೆ ಮಾಡಿದ್ಧ ಆರೋಪಿ ರಾಘವೇಂದ್ರ & ಗ್ಯಾಂಗ್! - Renukaswamy murder case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.