ETV Bharat / health

ಒಂದು ನಿಮಿಷವೂ ಮೂತ್ರವನ್ನು ತಡೆಯಲಾಗುತ್ತಿಲ್ಲವೇ?: ಈ ಸಮಸ್ಯೆಗೆ ಕಾರಣವೇ ಇದು! - Urinary incontinence problem

ಮೂತ್ರದ ಅಸಂಯಮವೂ ಮೂತ್ರಕೋಶದ ನಿಯಂತ್ರಣದ ನಷ್ಟಕ್ಕೆ ಕಾರಣವಾಗಿ ಇದುವೇ ಮುಂದೆ ಆಕಸ್ಮಿಕವಾಗಿ ಮೂತ್ರದ ಸೋರಿಕೆಗೆ ಕಾರಣವಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

Urinary incontinence significant effect on your skin and kidneys
ಮೂತ್ರದ ಅಸಂಯಮ (IANS)
author img

By IANS

Published : Jun 24, 2024, 12:40 PM IST

ಹೈದರಾಬಾದ್​: ಮೂತ್ರವನ್ನು ಒಂದು ನಿಮಿಷವೂ ತಡೆಯಲಾರದಂತಹ ಅಸಂಯಮವೂ ಮೂತ್ರಕೋಶದ ನಿಯಂತ್ರಣದ ನಷ್ಟ ಪರಿಸ್ಥಿತಿಯಾಗಿದ್ದು, ಇದು ತ್ವಚೆ ಮತ್ತು ಮೂತ್ರಪಿಂಡದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂತ್ರಕೋಶ ಮತ್ತು ಕರುಳಿನ ಸಮಸ್ಯೆಗಳ ಬಗ್ಗೆ ಜಾಗೃತಿ ಸಪ್ತಾಹದ ನಿಮಿತ್ತವಾಗಿ ಮಾತನಾಡಿರುವ ತಜ್ಞರು, ಮೂತ್ರದ ಅಸಂಯಮವೂ ಮೂತ್ರಕೋಶದ ನಿಯಂತ್ರಣದ ನಷ್ಟಕ್ಕೆ ಕಾರಣವಾಗಿ ಇದು, ಆಕಸ್ಮಿಕವಾಗಿ ಮೂತ್ರದ ಸೋರಿಕೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಸೋರಿಕೆ ಆದರೂ ಬಳಿಕ ಇದು ಹೆಚ್ಚಾಗಿ ಗಂಭೀರ ಸಮಸ್ಯೆಯಾಗುತ್ತದೆ.

ಹಾರ್ಮೋನ್​ ಮತ್ತು ಸ್ನಾಯುಗಳ ಹಿಗ್ಗುವಿಕೆ ಸಂಯೋಜನೆ ಅಂದರೆ ಮೂತ್ರಕೋಶದ ಮೇಲೆ ಸ್ನಾಯುಗಳ ನಿಯಂತ್ರಣ ದುರ್ಬಲವಾಗುತ್ತದೆ. ಇದು ಅನಿರೀಕ್ಷಿತವಾಗಿ ಮೂತ್ರದ ಸೋರಿಕೆಗೆ ಕಾರಣವಾಗುತ್ತದೆ ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಯುರೋ ಅನ್ಕೋ ಸರ್ಜನ್​ ಡಾ ಅಶ್ವಿನ್​ ಮಲ್ಯ ತಿಳಿಸಿದ್ದಾರೆ.

ಮೂತ್ರದ ಅಸಂಯಮವೂ ಕೇವಲ ಮೂತ್ರಕೋಶದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು ಸೋರಿಕೆಯಿಂದ ತ್ವಚೆ ದದ್ದು, ಸೋಂಕು ಕೂಡ ಉಂಟಾಗುತ್ತದೆ. ಜೊತೆಗೆ ಇದು ಮೂತ್ರನಾಳ ಸೋಂಕಿಗೆ ಕೂಡ ಕಾರಣವಾಗಿ, ಕಿಡ್ನಿ ಹಾನಿ ಆಗುವ ಸಂಭವವೂ ಇದೆ ಅಂತಾರೆ ವೈದ್ಯರು.

ಅಲ್ಲದೇ ಅನೇಕ ಮಂದಿಯಲ್ಲಿ ಇದು ಆತಂಕ, ಖಿನ್ನತೆ ಮತ್ತು ಸಾಮಾಜಿಕ ಪ್ರತ್ಯೇಕಿಕರಣದಂತಹ ಮಾನಸಿಕ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಇದರಿಂದ ಮುಜುಗರಕ್ಕೆ ಒಳಗಾಗುವ ಅನೇಕ ಮಂದಿ ಸಾಮಾಜಿಕ ಚಟುವಟಿಕೆ ಅಥವಾ ಪರಿಸ್ಥಿತಿಗಳನ್ನು ತಪ್ಪಿಸಬಹುದು. ಇದರಿಂದ ಅವರು ಜೀವನದ ಗುಣಮಟ್ಟ ಕ್ಷೀಣಿಸಬಹುದು.

ಈ ಪರಿಸ್ಥಿತಿಯು ಎಲ್ಲ ವಯೋಮಾನದವರಲ್ಲೂ ಕಾಣಬಹುದಾಗಿದ್ದು, ವಯಸ್ಕರಲ್ಲಿ, ವಿಶೇಷವಾಗಿ ಗರ್ಭಾವಸ್ಥೆ ಮತ್ತು ಮಗು ಜನನ ಸಮಯದಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತದೆ. ಹೆರಿಗೆ ಬಳಿಕವೂ ಈ ಸಮಸ್ಯೆ ಮುಂದುವರಿದರೆ, ಈ ಬಗ್ಗೆ ಕಾಳಜಿ ಅವಶ್ಯಕವಾಗಿದೆ. ಇದಕ್ಕೆ ತಕ್ಷಣಕ್ಕೆ ಚಿಕಿತ್ಸೆ ಅವಶ್ಯಕ ಎನ್ನುತ್ತಾರೆ ಆರೋಗ್ಯ ತಜ್ಞರು.

ಮೂತ್ರಕೋಶದ ನಿಯಂತ್ರಣ ಕ್ಷೀಣಿಸುವುದು ವಯೋ ಸಂಬಂಧಿತ ಬದಲಾವಣೆ ಆಗಿದೆ. ಯೋನಿ ಸ್ನಾಯುವಿನ ಹಿಗ್ಗುವಿಕೆ ಅಧಿಕ ಅಥವಾ ಕಡಿಮೆ ಮೂತ್ರಕೋಶದ ಸ್ನಾಯು ಚಟುವಟಿಕೆ ಇದಕ್ಕೆ ಕಾರಣವಾಗಬಹುದು ಎಂದು ಗುರುಗ್ರಾಮದ ಮರೆಂಗೊ ಏಷ್ಯಾ ಆಸ್ಪತ್ರೆಯ ಯುರೋಲಾಜಿ ತಜ್ಞರಾದ ಡಾ ಅರಿಫ್​ ಆಖ್ತರ್​ ತಿಳಿಸಿದ್ದಾರೆ. ಒತ್ತಡವೂ ಯೋನಿ ಸ್ನಾಯು ಹಿಗ್ಗುವಿಕೆಗೆ ಕಾರಣವಾಗುತ್ತದೆ. ಗರ್ಭಿಣಿ ಮತ್ತು ಹೆರಿಗೆ ಸಮಯದಲ್ಲಿ ಮೂತ್ರ ಕೋಶದ ಮೇಲೆ ಒತ್ತಡ ಹೆಚ್ಚುವುದರಿಂದ ಕೂಡ ಹಿಗ್ಗುವಿಕೆ ಸಂಭವಿಸುತ್ತದೆ.

ಅಧ್ಯಯನದ ಪ್ರಕಾರ, ಈ ಸಮಸ್ಯೆ ಪುರುಷರಲ್ಲಿ ಶೇ 15ರಷ್ಟು ಕಾಡಿದರೆ, ಮಹಿಳೆಯರಲ್ಲಿ ಶೇ 45ರಷ್ಟು ಕಾಡುತ್ತದೆ. ಎರಡು ಲಿಂಗಗಳ ನಡುವೆ ಈ ಸಮಸ್ಯೆ ಅಂತರ ಹೆಚ್ಚಿರುವ ಕಾರಣ ಶರೀರಶಾಸ್ತ್ರ, ಗರ್ಭಾವಸ್ಥೆ, ಹೆರಿಗೆ ಮತ್ತು ಮೆನೊಪಸ್​ ಕೂಡಾ ಆಗಿದೆ.

ಆರೋಗ್ಯಯುತ ಜೀವನಶೈಲಿ ನಿರ್ವಹಣೆ ಮತ್ತು ಆರೋಗ್ಯಯುತ ತೂಕವೂ ಮೂತ್ರಕೋಶದ ಮೇಲಿ ಒತ್ತಡವನ್ನು ತಗ್ಗಿಸುತ್ತದೆ. ನಿಯಮಿತ ವ್ಯಾಯಮಗಳು ಯೋನಿ ಸ್ನಾಯುಗಳ ಬಲಗೊಳಿಸುತ್ತದೆ. ಜೊತೆಗೆ ನಿಯಮಿತ ಕೆಫೆನ್​ ಮತ್ತು ಆಲ್ಕೋಹಾಲ್​ ಸೇವನೆ ಕೂಡ ಮೂತ್ರಕೋಶವನ್ನು ಕಿರಿಕಿರಿಗೊಳಿಸುತ್ತದೆ ಎಂದಿದ್ದಾರೆ ವೈದ್ಯರು. (ಐಎಎನ್​ಎಸ್​)

ಇದನ್ನೂ ಓದಿ: ಬೀ ಅಲರ್ಟ್​​: ಆರೋಗ್ಯಯುತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು?.. ಹೆಚ್ಚು - ಕಡಿಮೆ ಆದ್ರೆ ಸಮಸ್ಯೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.