Bad Breath Treatment as Per Ayurveda: ಬಾಯಿಯ ದುರ್ವಾಸನೆ ಸಮಸ್ಯೆ ಅನೇಕ ಜನರನ್ನು ಬೆಂಬಿಡದೆ ಕಾಡುತ್ತದೆ. ಸರಿಯಾಗಿ ಬ್ರಷ್ ಮಾಡದಿರುವುದು, ತಿಂದ ನಂತರ ಸರಿಯಾಗಿ ಬಾಯಿ ತೊಳೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯಿಂದ ಅವರು ನಾಲ್ಕೈದು ಜನರಿರುವ ಗುಂಪಿನ ಮಧ್ಯೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಬಳಲುತ್ತಿರುವವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ.
ನೀವು ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಾ? ಹಾಗಾದ್ರೆ, ಯಾವುದೇ ದ್ರವ ಅಥವಾ ಮೌತ್ ವಾಶ್ ಬಳಸದೇ ಬಾಯಿಯ ದುರ್ವಾಸನೆ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಉತ್ತಮ ಪರಿಹಾರವಿದೆ ಎನ್ನುತ್ತಾರೆ ಆಯುರ್ವೇದದ ಸಲಹೆ ನೀಡುವ ವೈದ್ಯೆ ಡಾ. ಗಾಯತ್ರಿದೇವಿ. ಮನೆಯಲ್ಲಿ ದೊರೆಯುವ ವಸ್ತುಗಳಿಂದ ಈ ತೊಂದರೆಗೆ ಔಷಧ ತಯಾರಿಸಬಹುದು. ಅದು ಹೇಗಿದೆ ಎಂಬುದನ್ನು ತಿಳಿಯೋಣ..
ಬೇಕಾಗುವ ಪದಾರ್ಥಗಳಿವು;
- 25 ಗ್ರಾಂ ಯಷ್ಟಿಮಧು (Liquorice) ಪುಡಿ
- 25 ಗ್ರಾಂ ಹುರಿದ ಜೀರಿಗೆ ಪುಡಿ
- 25 ಗ್ರಾಂ ಬಡೆ ಸೋಂಪು ಪುಡಿ
- 25 ಗ್ರಾಂ ಹುರಿದ ಎಳ್ಳು
- 10 ಗ್ರಾಂ ಜಾಯಿಕಾಯಿ ಪುಡಿ
- 25 ಗ್ರಾಂ ಹರಳೆಣ್ಣೆ
- 25 ಗ್ರಾಂ ಸಿಂಧವಲವನಂ ಪುಡಿ
ತಯಾರಿಸುವ ಪ್ರಕ್ರಿಯೆ ಹೇಗೆ?
- ಮೊದಲು ಯಷ್ಟಿಮಧು ಚೂರ್ಣವನ್ನು ಒಂದು ಬಟ್ಟಲಿನಲ್ಲಿ ಹಾಕಿ.
- ನಂತರ ಹುರಿದ ಜೀರಿಗೆ ಪುಡಿ ಮತ್ತು ಬಡೆ ಸೋಂಪಿನ ಪುಡಿ ಸೇರಿಸಿ.
- ಅದರ ನಂತರ, ಹುರಿದ ಎಳ್ಳು, ರುಬ್ಬಿದ ಜಾಯಿಕಾಯಿ, ಹರಳೆಣ್ಣೆ ಮತ್ತು ರುಬ್ಬಿದ ಸೈಂಧವ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಔಷಧವನ್ನು ತಯಾರಿಸಿ.
- ಬಾಯಿ ದುರ್ವಾಸನೆಯ ಸಮಸ್ಯೆ ಇರುವವರು ಅರ್ಧ ಚಮಚ ಚೂರ್ಣವನ್ನು ಬಾಯಲ್ಲಿಟ್ಟುಕೊಂಡು ಬೆಳಗ್ಗೆ ಮತ್ತು ಸಂಜೆ ಜಗಿಯಬೇಕು.
- ವಸಡಿನ ಉರಿಯೂತ ಮತ್ತು ಸೋಂಕು ಇರುವವರಲ್ಲಿ ಸ್ವಲ್ಪ ನಿಧಾನವಾದರೂ ಬೇಗ ಪರಿಹಾರವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ದೊರೆಯುವ ಪ್ರಯೋಜನಗಳು;
ಯಷ್ಟಿಮಧು: ಬಾಯಿ ಹುಣ್ಣು, ಹುಣ್ಣು, ಹೊಟ್ಟೆಯಲ್ಲಿನ ಜೀರ್ಣಕ್ರಿಯೆಗೆ ಉತ್ತಮ ಔಷಧವಾಗಿ ಬಳಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು, ವೈದ್ಯರು.
ಜೀರಿಗೆ: ಜೀರಿಗೆ ಬಾಯಿಯಲ್ಲಿ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಅತಿಯಾದ ಜೊಲ್ಲು ಸುರಿಸುವ ಕಾರಣ ಬ್ಯಾಕ್ಟೀರಿಯಾಗಳು ಸಂಗ್ರಹವಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಬಡೆ ಸೋಂಪು: ಸಾಮಾನ್ಯವಾಗಿ ಊಟದ ನಂತರ ಬಡೆ ಸೋಂಪು ತಿನ್ನುತ್ತಾರೆ. ಬಡೆ ಸೋಂಪು ಕಾಳನ್ನು ತಿನ್ನುವುದರಿಂದ ಜೊಲ್ಲು ಉತ್ಪತ್ತಿಗೆ ಸಹಕಾರಿಯಾಗುತ್ತದೆ ಎಂದು ಹೇಳುತ್ತಾರೆ ವೈದ್ಯರು.
ಜಾಯಿಕಾಯಿ: ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಜೊಲ್ಲು ಸುರಿಸಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಆಯುರ್ವೇದ ತಜ್ಞರು ವಿವರಿಸುತ್ತಾರೆ.
ಸೈಂಧವ ಲವಣ: ಲಾಲಾರಸವನ್ನು ಸಡಿಲಗೊಳಿಸಲು ಮತ್ತು ಸೋಂಕುಗಳನ್ನು ತೊಡೆದುಹಾಕಲು ಸೈಂಧವಲವಣ ಉಪಯುಕ್ತವಾಗಿದೆ ಎಂದು ವೈದ್ಯರು ಸೂಚಿಸುತ್ತಾರೆ.
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.