ETV Bharat / health

ನಿತ್ಯವೂ ವಿಟಮಿನ್​ ಮಾತ್ರೆ ಸೇವಿಸುತ್ತೀರಾ? ಮತ್ತೊಮ್ಮೆ ಯೋಚಿಸಿ - taking vitamin pills Daily - TAKING VITAMIN PILLS DAILY

ಅನೇಕ ಮಂದಿ ಆರೋಗ್ಯ ಸುಧಾರಣೆಗೆ ವಿಟಮಿನ್​ ಮಾತ್ರೆಗಳ ಸೇವನೆ ಮಾಡುತ್ತಾರೆ. ಇದನ್ನು ಸೇವನೆ ಮಾಡುವ ಬಹುತೇಕರಿಗೆ ಈ ಮಾತ್ರೆಗಳು ಎಷ್ಟು ಪರಿಣಾಮಕಾರಿ ಮತ್ತು ಅಪ್ರಯೋಜನಕಾರಿ ಎಂಬ ಬಗ್ಗೆ ಗೊತ್ತಿಲ್ಲ.

taking-vitamin-pills-daily-may-help-to-reduce-mortality-risk
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 9, 2024, 5:17 PM IST

ಹೈದರಾಬಾದ್​: ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ಹೊಂದಿರುವ ಜನರು ಉತ್ತಮ ಆಹಾರ ಸೇವನೆ ಅಭ್ಯಾಸಕ್ಕೆ ಒತ್ತು ನೀಡುವುದರಿಂದ ಸಾಕಷ್ಟು ವಿಟಮಿನ್​, ಪೋಷಕಾಂಶವನ್ನು ಪಡೆಯಬಹುದು. ಆದರೆ, ಅನೇಕ ಮಂದಿ ಇಂದು ಅತಿ ಕಾಳಜಿಯಿಂದ ವಿಟಮಿನ್​ಗಳ ಮಾತ್ರೆ ಸೇವನೆಗೂ ಅದ್ಯತೆ ನೀಡುತ್ತಾರೆ. ಈ ರೀತಿ ನೀವು ನಿತ್ಯ ವಿಟಮಿನ್​ ಮಾತ್ರೆಯನ್ನು ಸೇವಿಸುತ್ತಿದ್ದೀರಾ? ಹಾಗಾದ್ರೆ ಮತ್ತೊಮ್ಮೆ ಈ ಬಗ್ಗೆ ಯೋಚಿಸಿ. ಇದು ಆರೋಗ್ಯಯುತ ಜನರಲ್ಲಿ ಯಾವುದೇ ರೀತಿಯಲ್ಲಿ ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ವಿಚಾರವನ್ನು ಅಮೆರಿಕದ ನ್ಯಾಷನಲ್​ ಕ್ಯಾನ್ಸರ್​ ಇನ್ಸಿಟಿಟ್ಯೂಟ್​​ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.

ಇದಕ್ಕಾಗಿ 20 ವರ್ಷಗಳ ಕಾಲ 4 ಲಕ್ಷ ಜನರನ್ನು ಗಮನಿಸಲಾಗಿದೆ. ಅನೇಕ ಮಂದಿ ಆರೋಗ್ಯ ಸುಧಾರಣೆಗೆ ವಿಟಮಿನ್​ ಮಾತ್ರೆಗಳ ಸೇವನೆ ಮಾಡುತ್ತಾರೆ. ಇದನ್ನು ಸೇವನೆ ಮಾಡುವ ಬಹುತೇಕರಿಗೆ ಈ ಮಾತ್ರೆಗಳು ಎಷ್ಟು ಪರಿಣಾಮಕಾರಿ ಮತ್ತು ಪ್ರಯೋಜನ ಹೊಂದಿಲ್ಲ ಎಂಬ ಬಗ್ಗೆ ತಿಳಿದಿಲ್ಲ. ಈ ಹಿಂದೆ ನಡೆಸಲಾದ ಸಣ್ಣ ಅಧ್ಯಯನದಲ್ಲಿ ವಿಟಮಿನ್​ ಮಾತ್ರೆಗಳು ಸಾವಿನ ತಡೆ ಅಪಾಯದಲ್ಲಿ ಮಿಶ್ರಿತ ಫಲಿತಾಂಶ ತೋರಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಇದೀಗ ಸಂಶೋಧಕರು ದೀರ್ಘಕಾಲದ ವಿಟಮಿನ್​ ಮಾತ್ರೆಗಳ ಸೇವನೆ ಮತ್ತು ಸಾವಿನ ಅಪಾಯದ ನಡುವಿನ ಸಂಬಂಧನವನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರು ಪ್ರಯತ್ನಿಸಿದ್ದಾರೆ.

ವಿವಿಧ ಪ್ರದೇಶದ ಕ್ಯಾನ್ಸರ್​​ ಹೊಂದಿರದ ಅಥವಾ ಇತರ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಹೊಂದಿರದ ಜನರನ್ನು ಈ ಅಧ್ಯಯನದ ಭಾಗವಾಗಿಸಲಾಗಿದೆ. ಇವರನ್ನು ಹಲವು ವರ್ಷಗಳ ಕಾಲ ಪರೀಕ್ಷೆ ಮಾಡಲಾಗಿದೆ. ಈ ವೇಳೆ, ವಿಟಮಿನ್​ ಮಾತ್ರೆ ತೆಗೆದುಕೊಳ್ಳದವರಿಗೆ ಹೋಲಿಕೆ ಮಾಡಿದಾಗ ವಿಟಮಿನ್​ ಮಾತ್ರೆ ಸೇವಿಸುವವರಲ್ಲಿ ಸಾವಿನ ದರ ಕಡಿಮೆಯಾಗಿಲ್ಲ. ಕ್ಯಾನ್ಸರ್​, ಹೃದಯ ರೋಗ ಮತ್ತು ಪಾರ್ಶ್ವವಾಯುವಿನಿಂದ ಆಗುವ ಸಾವಿನ ಅಪಾಯದಲ್ಲೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ವರ್ಣ, ಶಿಕ್ಷಣ ಮತ್ತು ಆಹಾರದ ಅಂಶವನ್ನು ಗಮನಿಸಿದಾಗಲೂ ಕೂಡ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಈ ಹಿನ್ನೆಲೆ ಸಂಶೋಧಕರು ವಿಟಮಿನ್​ ಮಾತ್ರೆಯು ಸೇವನೆ ಸಾವಿನ ಅಪಾಯ ತಪ್ಪಿಸುವುದಿಲ್ಲ. ಪೋಷಕಾಂಶ ಕೊರತೆ ಮತ್ತು ವಯೋ ಸಂಬಂಧಿತ ಸಮಸ್ಯೆಯಲ್ಲಿ ಮಾತ್ರ ಇದು ಪ್ರಯೋಜನಕಾರಿ ಎಂದಿದ್ದಾರೆ.

ಇದನ್ನೂ ಓದಿ: ಭಾರತೀಯರಲ್ಲಿ ಹೆಚ್ಚುತ್ತಿದೆ ಆರೋಗ್ಯಕರ ತಿನಿಸಿನ ಒಲವು; ಮಖಾನಾ, ಡ್ರೈ ಫ್ರೂಟ್ಸ್‌​ಗೆ ಆದ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.