ETV Bharat / health

ರಕ್ತದೊತ್ತಡ ತಪ್ಪಿಸಿ, ಸದೃಢ ಆರೋಗ್ಯ ಹೊಂದಬೇಕೇ?; ಹಾಗಾದ್ರೆ ಬಿಳಿ ಬದಲು ಕೆಂಪು ಅಕ್ಕಿ ಸೇವಿಸಿ - Switching to Brown rice

author img

By ETV Bharat Karnataka Team

Published : Aug 3, 2024, 1:37 PM IST

ಇತ್ತೀಚಿನ ದಿನದಲ್ಲಿ ಕೆಂಪು ಅಕ್ಕಿ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯದ ಕಾಳಜಿ ಹೊಂದಿರುವ ಜನರಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡು ಬಂದಿದೆ.

Switching to Brown rice will give amazing health benefits
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್​: ಅಕ್ಕಿಯಲ್ಲಿರುವ ಅನೇಕ ಪೌಷ್ಠಿಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿದೆ. ಆದರೆ, ಯಾವ ಅಕ್ಕಿ ಉತ್ತಮ ಎಂಬ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ. ಬಿಳಿ ಅಕ್ಕಿ ಅಥವಾ ಕೆಂಪು ಅಕ್ಕಿ ಯಾವುದರಿಂದ ಆರೋಗ್ಯ ಪ್ರಯೋಜನ ಅನ್ನೋದು ನಮಗೆ ಗೊತ್ತಿಲ್ಲ ಹಾಗಾಗಿ, ಯಾವುದನ್ನು ಬಳಕೆ ಮಾಡುವುದು ಎಂಬ ಗೊಂದಲ ಮೂಡುತ್ತದೆ ಸಹಜವೂ ಹೌದು. ಸಾಮಾನ್ಯವಾಗಿ ಬಿಳಿ ಅಕ್ಕಿಗೆ ಪರ್ಯಾಯವಾಗಿ ಕೆಂಪು ಅಕ್ಕಿಯನ್ನು ಅನೇಕರು ಬಳಕೆ ಮಾಡುತ್ತಾರೆ. ಈ ಕೆಂಪು ಅಕ್ಕಿ ಆರೋಗ್ಯಕ್ಕೆ ಅದ್ಬುತ ಪ್ರಯೋಜನ ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಪಾಲಿಶ್​ ಮಾಡಿದ ಬಿಳಿ ಅಕ್ಕಿ ಸೇವಿಸುತ್ತಾರೆ. ಈ ಪಾಲಿಶ್​ ಮಾಡಿದ ಅಕ್ಕಿ ಕೇವಲ ಕಾರ್ಬೋಹೈಡ್ರೇಟ್​ ಅನ್ನು ಮಾತ್ರವೇ ಒಳಗೊಂಡಿರುತ್ತದೆ. ಆದರೆ, ಈ ಪಾಲಿಶ್​ ಅಕ್ಕಿ ರುಚಿಯಲ್ಲಿ ಆಗಲಿ ಅಥವಾ ಪೌಷ್ಟಿಕಾಂಶದ ವಿಚಾರದಲ್ಲಿ ಆಗಲಿ ಉತ್ತಮವಲ್ಲ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಡಾ ಅಂಜಲಿ ದೇವಿ.

ಕೆಂಪು ಅಕ್ಕಿ ಬಳಕೆಯಿಂದಾಗುವ ಪ್ರಯೋಜನಗಳಿವು:

ಸಕ್ಕರೆ ಮಟ್ಟ ನಿಯಂತ್ರಣ: ಇತ್ತೀಚಿನ ದಿನದಲ್ಲಿ ಬಹುತೇಕ ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಂಪು ಅಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣವಾಗಲಿದೆ ಎಂದು ಡಾ ಅಂಜಲಿ ದೇವಿ ಹೇಳಿದ್ದಾರೆ.

ಕೆಂಪು ಅಕ್ಕಿ ಸೇವನೆಯಿಂದ ಆಗುವ ಪ್ರಯೋಜನ ಕುರಿತು ಕೆಲವು ಸಂಶೋಧನೆಗಳನ್ನೂ ಕೂಡಾ ನಡೆಸಲಾಗಿದೆ. ಹಾರ್ವಡ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ ಸಂಶೋಧಕರು ಹೇಳುವಂತೆ, ಬಿಳಿ ಅಕ್ಕಿಯನ್ನು ವಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸುವುದು ಮಧುಮೇಹ ಹೆಚ್ಚುವಂತೆ ಮಾಡುತ್ತದೆ. ಬಿಳಿ ಅಕ್ಕಿಯ ಪ್ರಮಾಣವನ್ನು 50 ಗ್ರಾಂಗಳಷ್ಟು ಕಡಿಮೆ ಮಾಡಿ, ಕೆಂಪು ಅಕ್ಕಿ ಸೇವಿಸುವುದರಿಂದ ಶೇ 16ರಷ್ಟು ಮಧುಮೇಹ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತಿಳಿಸಿದೆ.

ಹೃದಯಕ್ಕೆ ಉತ್ತಮ: ಕೆಂಪು ಅಕ್ಕಿ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೇ ದೇಹದ ತೂಕವನ್ನು ನಿಯಂತ್ರಿಸುತ್ತದೆ. ಈ ಅಕ್ಕಿಯನ್ನು ನಿಮ್ಮ ಡಯಟ್​ನಲ್ಲಿ ಸೇರಿಸುವುದರಿಂದ ಹೃದಯದ ಆರೋಗ್ಯ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ತಡೆಗಟ್ಟಬಹುದು.

ಜೀರ್ಣಕ್ರಿಯೆ ವೃದ್ಧಿ: ಇದರಲ್ಲಿ ಹೆಚ್ಚಿನ ಮಟ್ಟದ ಫೈಬರ್​ ಇದೆ. ಪರಿಣಾಮವಾಗಿ ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿಯಮಿತವಾಗಿ ಅನುಭವಿಸುತ್ತಿದ್ದರೆ, ಈ ಅಕ್ಕಿ ಸೇವನೆ ಮಾಡುವುದು ಉತ್ತಮ.

ಕ್ಯಾನ್ಸರ್​ ತಡೆ: ಈ ಅಕ್ಕಿಯಲ್ಲಿ ಸೆಲೆನಿಯಂ ಇದೆ. ಇದು ಥೈರಾಯ್ಡ್​​ ಹಾರ್ಮೋನ್​ ಉತ್ಪಾದನೆಗೆ ಸಹಾಯ ಮಾಡುತ್ತದೆ. ಲಿಗ್ನಾನ್ಸ್ ಮತ್ತು ಪಾಲಿಫಿನಾಲ್​ಗಳು ಕರುಳಿನಲ್ಲಿ ಪ್ರವೇಶಿಸಿದ ನಂತರ ಫೈಟೊಸ್ಟ್ರೊಜೆನ್​ಗಳು ಎಂಟ್ರೊಲಾಕ್ಟಾನ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದರಿಂದ ಕ್ಯಾನ್ಸರ್ ತಡೆಯುವ ಜೊತೆಗೆ ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ನಿತ್ಯ ಕೆಂಪು ಅಕ್ಕಿ ಸೇವನೆ ಮಾಡುವುದರಿಂದ ಇದರ ನಿಯಂತ್ರಣ ಮಾಡಬಹುದು. ಇದು ಮೂಳೆಯನ್ನು ಬಲಗೊಳಿಸುವ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಎನ್​ಐಎಚ್​ ಪ್ರಕಟಿಸಿರುವ ಸಂಶೋದನೆಯಲ್ಲೂ ಕೂಡ ಕೆಪ್ಪು ಅಕ್ಕಿ ಪ್ರಯೋಜನ ಕುರಿತು ತಿಳಿಸಲಾಗಿದೆ.

ಇದನ್ನೂ ಓದಿ: ಅಚ್ಚರಿ..ಆಶ್ಚರ್ಯ: ಎಣ್ಣೆ ಇಲ್ಲದೆಯೇ ಪೂರಿ ಮಾಡಬಹುದು ಗೊತ್ತಾ?; ತಯಾರಿಕೆಯೂ ಸುಲಭ - ತುಂಬಾ ರುಚಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.