ETV Bharat / health

ಹೆಚ್ಚುತ್ತಿದೆ ತಾಪಮಾನ: ಬೇಸಿಗೆಯಲ್ಲಿ ಪ್ರತಿನಿತ್ಯ ಎಷ್ಟು ಪ್ರಮಾಣದ ನೀರು ಕುಡಿಯಬೇಕು? - how much water should drink

ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ಅಗತ್ಯ ಪ್ರಮಾಣದ ನೀರಿನ ಸೇವನೆ ಅವಶ್ಯಕ. ಹಾಗಾದ್ರೆ ವ್ಯಕ್ತಿಯೊಬ್ಬನಿಗೆ ದಿನಕ್ಕೆ ಎಷ್ಟು ಪ್ರಮಾಣದ ನೀರು ಸೇವನೆ ಅವಶ್ಯ ಎಂಬ ಮಾಹಿತಿ ಇಲ್ಲಿದೆ.

summer is here how much water you should drink every day

author img

By ETV Bharat Karnataka Team

Published : Mar 16, 2024, 11:41 AM IST

ಹೈದರಾಬಾದ್​: ಬಿರು ಬೇಸಿಗೆ ಆವರಿಸಿದ್ದು, ನಿರ್ಜಲೀಕರಣ ಅಪಾಯದಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ನೀರು ಸೇವನೆ ಅವಶ್ಯವಾಗಿದೆ. ನೀರಿನ ಅವಶ್ಯಕತೆ ಪ್ರತಿಯೊಬ್ಬರಿಗೂ ಬದಲಾಗುವುದರಿಂದ ಇದಕ್ಕೆ ಇಷ್ಟೇ ನೀರು ಸೇವನೆ ಎಂಬ ನಿರ್ದಿಷ್ಟ ಉತ್ತರವಿಲ್ಲ. ಇದರಿಂದ ಪ್ರತಿಯೊಬ್ಬರಿಗೂ ದಿನಕ್ಕೆ ಎಷ್ಟು ಪ್ರಮಾಣದ ನೀರು ಸೇವಿಸಬೇಕು ಎಂಬ ಪ್ರಶ್ನೆ ಕಾಡುತ್ತದೆ. ವರದಿ ಅನುಸಾರ ಬಹುತೇಕ ಮಂದಿಗೆ ದಿನಕ್ಕೆ ಆರು ಗ್ಲಾಸ್​​ನ ನೀರಿನ ಅವಶ್ಯಕತೆ ಇದೆ.

ಸಾಮಾನ್ಯವಾಗಿ ಆರೋಗ್ಯಯುತ ಜನರು ದಿನಕ್ಕೆ ಆರು ಪ್ಲೇನ್​​ ಗ್ಲಾಸ್​ ನೀರು ಸೇವಿಸುತ್ತಾರೆ. ಆದರೆ, ಈ ಸಂಖ್ಯೆಯು ನೀರಿನ ಹೊರತಾಗಿ ಸೇವಿಸುವ ಪಾನೀಯ ಮತ್ತು ಆಹಾರದ ಆಧಾರದ ಮೇಲೆ ಬದಲಾಗುತ್ತದೆ. ಅಷ್ಟೇ ಅಲ್ಲದೇ, ಕೆಲವರು ಆರೋಗ್ಯ ಪರಿಸ್ಥಿತಿ, ಚಿಕಿತ್ಸೆ, ಚಟುವಟಿಕೆ ಮಟ್ಟ ಮತ್ತು ತಾಪಮಾನಕ್ಕೆ ಅನುಗುಣವಾಗಿಯೂ ಬದಲಾಗುತ್ತದೆ.

ನೀರು ಕುಡಿಯುವುದರಿಂದ ಪ್ರಯೋಜನ: ದೇಹದ ಕಾರ್ಯಚಾರಣೆಯನ್ನು ಸರಿಯಾಗಿಟ್ಟುಕೊಳ್ಳಲು ನೀರು ಸಹಾಯ ಮಾಡುತ್ತದೆ. ಹಾರ್ವಡ್​ ಮೆಡಿಕಲ್​ ಸ್ಕೂಲ್​ ಸ್ಪೆಷನ್​ ಹೆಲ್ತ್​ ವರದಿ ಅನುಸಾರ, ಆರು ವಾರದ ಆರೋಗ್ಯಯುತ ನೀರಿನ ಸೇವನೆ ಪ್ಲಾನ್​, ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವುದು, ಮೂತ್ರಕೋಶದಿಂದ ಬ್ಯಾಕ್ಟೀರಿಯಾವನ್ನು ಹೊರ ಹಾಕುವುದು. ಜೀರ್ಣಕ್ರಿಯೆಗೆ ಸಹಾಯ, ಮಲಬದ್ಧತೆ ತಡೆ, ರಕ್ತದೊತ್ತಡ ಸಾಮಾನ್ಯಗೊಳಿಸುವಿಕೆ, ಕೀಲುಗಳನ್ನು ಸರಾಗಗೊಳಿಸುವಿಕೆ, ಅಂಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುವಿಕೆ, ದೇಹದ ಉಷ್ಣತೆಯನ್ನು ನಿಯಂತ್ರಣ ಎಲೆಕ್ಟ್ರೋಲೈಟ್ (ಸೋಡಿಯಂ) ಸಮತೋಲನದಂತಹ ಪ್ರಮುಖ ಕೆಲಸವನ್ನು ಮಾಡುತ್ತದೆ.

ವ್ಯಕ್ತಿಯೊಬ್ಬರಿಗೆ ಎಷ್ಟು ನೀರು ಬೇಕು? ಆರೋಗ್ಯಯುತ ಪುರುಷನಿಗೆ ಪ್ರತಿನಿತ್ಯ ಸರಾಸರಿ 15.5 ಗ್ಲಾಸ್​ ಮತ್ತು ಮಹಿಳೆಗೆ 11.5 ಗ್ಲಾಸ್​ ನೀರಿನ ಅವಶ್ಯಕತೆ ಇದೆ. ಅಂದರೆ ವ್ಯಕ್ತಿಯೊಬ್ಬನಿಗೆ 6 ಪ್ಲೇನ್​ ಗ್ಲಾಸ್​​ನ ನೀರು ಅವಶ್ಯಕತೆ ಇದ್ದು, ಇದು ಅವರು ಸೇವಿಸುವ ಟೀ, ಕಾಫಿ, ಹಣ್ಣಿನ ಜ್ಯೂಸ್​​ ಮತ್ತು ತರಕಾರಿ ಮೇಲೆ ಅವಲಂಬಿತವಾಗಿದೆ.

ಇತರೆ ಕಾರಣದಿಂದ ಬರೀ ನೀರು ಸೇವನೆ: ಚಟುವಟಿಕೆ, ವ್ಯಾಯಾಮದಿಂದ ಬೆವರಿನ ಮೂಲಕ ನೀರಿನ ನಷ್ಟಕ್ಕೆ ಒಳಗಾಗುವವರು ಹೆಚ್ಚಿನ ನೀರು ಸೇವಿಸುವುದು ಅವಶ್ಯಕ. ಮ್ಯಾರಾಥಾನ್​ನಂತಹ ಚಟುವಟಿಕೆಯಲ್ಲಿ ಭಾಗಿಯಾಗುವವರು ಕೂಡ ನೀರು ಮತ್ತು ಸೋಡಿಯಂ ನಷ್ಟಕ್ಕೆ ಗುರಿಯಾಗುತ್ತಾರೆ. ಅವರು ಹೆಚ್ಚಿನ ನೀರು ಸೇವಿಸುವುದು ಅವಶ್ಯ.

ತಾಪಮಾನ ಕೂಡ ನೀರಿನ ಸೇವನೆ ಮೇಲೆ ಪ್ರಭಾವ ಬೀರುತ್ತದೆ. ಅದರ ಅನುಸಾರವಾಗಿ ಕೂಡ ದೇಹಕ್ಕೆ ನೀರಿನ ಪೂರೈಕೆ ಮಾಡಬೇಕು. ಹೊರಗಿನ ತಾಪಮಾನ ಹೆಚ್ಚಳದಂತೆ ಬಾಯಾರಿಕೆಯೂ ಹೆಚ್ಚುತ್ತದೆ.

ಒಟ್ಟಾರೆ ಆರೋಗ್ಯ ಮತ್ತು ಚಿಕಿತ್ಸೆಯು ಕೂಡ ನೀರಿನ ಸೇವನೆ ಹೆಚ್ಚಿಸುತ್ತದೆ. ಥೈರಾಯ್ಡ್​​ ಅಥವಾ ಮೂತ್ರಪಿಂಡ, ಯಕೃತ್​​ ಅಥವಾ ಹೃದಯಾಘಾತದಂತಹ ಸಮಸ್ಯೆ ಹೊಂದಿರುವವರು ಕೂಡ ನೀರಿನ ಸೇವನೆ ಮಟ್ಟವನ್ನು ಹೆಚ್ಚಿಸಬೇಕು.

ವಯಸ್ಸು ಕೂಡ ವ್ಯಕ್ತಿಯ ನೀರಿನ ಅವಲಂಬನೆಯನ್ನು ಹೆಚ್ಚಿಸುತ್ತದೆ. ಹಿರಿಯರಲ್ಲಿ ಯುವಜನತೆಯಷ್ಟು ಪ್ರಮಾಣದಲ್ಲಿ ಬಾಯಾರಿಕೆ ಕಾಣುವುದಿಲ್ಲ. ಸರಿಯಾದ ಪ್ರಮಾಣದ ನೀರು ಸೇವನೆಗೆ ಕುಟುಂಬದ ವೈದ್ಯರ ಸಲಹೆಯನ್ನು ಪಡೆಯುವುದು ಅವಶ್ಯವಾಗಿದೆ.

ಸರಿಯಾದ ಪ್ರಮಾಣದಲ್ಲಿ ವ್ಯಕ್ತಿ ನೀರು ಸೇವನೆ ಮಾಡದೇ ಹೋದಲ್ಲಿ ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ. ಈ ನಿರ್ಜಲೀಕರಣವೂ ಮೂತ್ರವನ್ನು ಹಳದಿಯಾಗಿಸುತ್ತದೆ. ಜೊತೆಗೆ ದುರ್ಬಲತೆ, ಕಡಿಮೆ ರಕ್ತದೊತ್ತಡ ಮತ್ತು ಆಲಸ್ಯ ಕಾಡುತ್ತದೆ.

ಆದಾಗ್ಯೂ ನಿರ್ಜಲೀಕರಣ ತಡೆಗೆ ನೀರೊಂದೇ ಆಯ್ಕೆಯಲ್ಲ. ಎಲ್ಲಾ ಪಾನೀಯಗಳು ದೈನಂದಿನ ಅಗತ್ಯ ಇದಕ್ಕೆ ಕೊಡುಗೆ ನೀಡುತ್ತದೆ. ನಿರ್ಜಲೀಕರಣ ತಡೆಯಲು ದಿನವಿಡೀ ಆಗಾಗ್ಗೆ ದ್ರವಆಹಾರ ಸೇವನೆ ಮಾಡಬೇಕು. ಪ್ರತಿ ಊಟದ ಬಳಿಕ ನೀರು ಕುಡಿಯುವುದು ಅಗತ್ಯ.

ನೀರಿನಿಂದ ಸಮೃದ್ಧವಾಗಿರುವ ಸಲಾಡ್​ ಮತ್ತು ಹಣ್ಣಿನಿಂದ ಕೂಡ ದ್ರವವನ್ನು ಪಡೆಯಬಹುದಾಗಿದೆ.

ವಯಸ್ಕರಲ್ಲಿ ದಿನಕ್ಕೆ 3.7 ಲೀಟರ್​ ನೀರು ಅವಶ್ಯವಾದರೆ, ಮಹಿಳೆಯರಲ್ಲಿ ದಿನಕ್ಕೆ 2.7 ಲೀಟರ್​ ನೀರು ಸೇವನೆ ಆರೋಗ್ಯಯುತವಾಗಿ, ಆಲಸ್ಯದಿಂದ ರಕ್ಷಣೆ ಮಾಡುತ್ತದೆ.

ವರದಿ ಪ್ರಕಾರ, ದೀರ್ಘ ಕಾಲದ ದೈಹಿಕ ಚಟುವಟಿಕೆ ಮತ್ತು ಶಾಖದಿಂದ ನೀರಿನ ನಷ್ಟ ಹೆಚ್ಚುತ್ತದೆ. ಇದರಿಂದ ದೈನಂದಿನ ದ್ರವದ ಅಗತ್ಯತೆ ಹೆಚ್ಚಾಗಬಹುದು. ಬಿಸಿ ವಾತಾವರಣಕ್ಕೆ ಆಗಾಗ್ಗೆ ಒಡ್ಡಿಕೊಳ್ಳುವ ವ್ಯಕ್ತಿಗಳು ಆರು ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ನೀರಿನ ಸೇವನೆ ಮಾಡುತ್ತಾರೆ ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಸೂಚನೆ: ಈ ಲೇಖನದ ಸಂಪೂರ್ಣ ಮಾಹಿತಿಯನ್ನು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ನ್ಯಾಷನಲ್ ಅಕಾಡೆಮಿಕ್ ಸೈನ್ಸಸ್, ಇಂಜಿನಿಯರಿಂಗ್ ಮತ್ತು ಮೆಡಿಸಿನ್ ನಿಂದ ಪಡೆಯಲಾಗಿದೆ.

ಇದನ್ನೂ ಓದಿ: ಹೆಚ್ಚಿನ ತಾಪಮಾನದ ಕಾರಣ ಟ್ರಾವೆಲರ್ ಡಯೇರಿಯಾ ಸಮಸ್ಯೆ: ದೂರದ ಊರಿಗೆ ಪ್ರಯಾಣಿಸುವವರಿಗೆ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.