ETV Bharat / health

ಕೊಪ್ಪಳದಲ್ಲಿ ಬೇಸಿಗೆಯ ಬಿಸಿಲ ಬರೆ: ಬಿಸಿಲಿನ ಝಳದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗಿವೆ ವೈದ್ಯರ ಸಲಹೆ - Summer heat

ಅವಧಿಗೂ ಮುನ್ನವೇ ಕಾಲಿಟ್ಟಿರುವ ಬಿಸಿಲ ತಾಪಮಾನದಿಂದ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Summer heat increased in Koppal
ಕೊಪ್ಪಳದಲ್ಲಿ ಬೇಸಿಗೆಯ ಬಿಸಿಲ ಬರೆ
author img

By ETV Bharat Karnataka Team

Published : Mar 30, 2024, 3:10 PM IST

Updated : Mar 30, 2024, 4:07 PM IST

ಕೊಪ್ಪಳ: ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚುತ್ತಿದ್ದು, ಬಿಸಿಲಿನಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣತೊಡಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.

ಕೊಪ್ಪಳದಲ್ಲಿ ಬೇಸಿಗೆಯ ಬಿಸಿಲ ಬರೆ

ಕೊಪ್ಪಳದಲ್ಲಿಂದು 40 ಡಿಗ್ರಿ ತಾಪಮಾನ ದಾಖಲು: ಬೇಸಿಗೆ ಕಾಲದಲ್ಲಿ ಕೊಪ್ಪಳದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುವುದು ಸರ್ವೇ ಸಾಮಾನ್ಯ. ಆದರೆ, ಈ ವರ್ಷ ಮಳೆಯ ಪ್ರಮಾಣದಲ್ಲಿ ಕೊರೆತೆ ಕಾಣಿಸಿದ್ದರಿಂದಲೋ ಏನೋ ಜಿಲ್ಲೆಯಲ್ಲಿ ಈಗ ಬಿರು ಬಿಸಿಲು ಹೆಚ್ಚಿದೆ. ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಜನಜೀವನವೇ ಅಸ್ತವ್ಯಸ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅವಧಿಗೂ ಮುನ್ನ ಬಿಸಿಲಿನ ತಾಪಮಾನ ಆರಂಭವಾಗಿದೆ. ಫೆಬ್ರವರಿ ಎರಡನೇ ವಾರದಿಂದಲೇ ಜಿಲ್ಲಾದ್ಯಂತ 40 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ.

ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ: ಬಿಸಿಲಿನ ಧಗೆಗೆ ಚಿಕ್ಕ ಮಕ್ಕಳು ಹೈರಾಣಾಗಿದ್ದು, ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಚಿಕ್ಕಮಕ್ಕಳಲ್ಲಿ ನಿರ್ಜಲೀಕರಣ, ಚರ್ಮದ ತುರಕೆ, ಮೈ ಕೈನೋವು, ತೆಲೆ ನೋವು ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಆಸ್ಪತ್ರೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ವೃದ್ಧರು, ಕೂಲಿ ಕೆಲಸ ಮಾಡುವವರು ಬಿಸಿಲಿನ ಜಳಕ್ಕೆ ಸಂಕಷ್ಟ ಏದುರಿಸುವಂತಾಗಿದೆ.

ಬಿಸಿಲಿನ ಜಳದಿಂದ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆ: ಬಿಸಿಲಿನ ಝಳದಿಂದ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಸಲಹೆ ನೀಡಿದ್ದು, ಸಾಧ್ಯವಾದಷ್ಟು ಬೆಳಗ್ಗೆ 11 ಗಂಟೆಯೊಳಗೆ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆ ಸೇರಬೇಕು. ಅಗತ್ಯವಿದ್ದಲ್ಲಿ ಸಂಜೆ 4 ಗಂಟೆ ನಂತರ ಹೊರಗಡೆ ಕೆಲಸ ಮಾಡಬೇಕು. ತಗಡಿನ ಸೆಡ್ಡಿನಲ್ಲಿ ವಾಸವಾಗಿರುವವರು ಸಾಧ್ಯವಾದಷ್ಟು ಗಿಡದ ನೆರಳನ್ನು ಆಶ್ರಯಿಸಬೇಕು. ನಿರ್ಜಲೀಕರಣವಾಗದಂತೆ ಆಗಾಗ ತಣ್ಣೀರು, ಹಣ್ಣುಗಳನ್ನು ತಿನ್ನಬೇಕು. ತೆಳುವಾದ ಬಟ್ಟೆ ಹಾಕಿಕೊಳ್ಳಬೇಕು ಎಂದು ಮಕ್ಕಳ ತಜ್ಞ ಡಾ. ಅಜಯ ಬಾಚಲಾಪುರ ಹಾಗೂ ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜ್ ಸಲಹೆ ನೀಡಿದ್ದಾರೆ.

ಮಕ್ಕಳ ತಜ್ಞ ಡಾ. ಅಜಯ್​ ಬಾಚಲಾಪುರ ಮಾತನಾಡಿ, "ಬೇಸಿಗೆ ಕಾಲದಲ್ಲಿ ತಾಪಮಾನ ಜಾಸ್ತಿಯಾದ ಕೂಡಲೇ ನವಜಾತ ಶಿಶುಗಳಲ್ಲಿ ಡಿಹೈಡ್ರೇಷನ್​ ಜ್ವರ ಬರುತ್ತದೆ. ಒಂದು ತಿಂಗಳ ಒಳಗಿನ ಮಕ್ಕಳಿಗೆ ದೇಹದ ತಾಪಮಾನ ಹೆಚ್ಚಾದರೆ, ಫೀಡಿಂಗ್​ ಕಡಿಮೆ ಮಾಡುವುದು, ಮೂತ್ರ ವಿಸರ್ಜನೆ ಕಡಿಮೆ ಮಾಡುವುದು, ಕಿರಿಕಿರಿ ಜಾಸ್ತಿ ಮಾಡುವುದು, ಜ್ವರ ಜಾಸ್ತಿ ಬರುವ ಸಮಸ್ಯೆಗಳಾಗುತ್ತವೆ. ಇದೇ ಸಮಸ್ಯೆಗಳು ಅತಿಯಾದರೆ ಕಿಡ್ನಿ ಫೈಲ್ಯೂರ್​, ಮಲ್ಟಿ ಆರ್ಗನ್​ ಫೆಲ್ಯೂರ್​ ಆಗುವಂತ ಸಂಭವ ಇರುತ್ತದೆ. ಇದನ್ನು ತಪ್ಪಿಸಲು ನವಜಾತ ಶಿಶುಗಳನ್ನು ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈ ತರಹದ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಶಾಲೆಗ ಹೋಗುವ ಮಕ್ಕಳಲ್ಲಿ ತಾಪಮಾನ ಹೆಚ್ಚಳದಿಂದ ಮೈಯ್ಯಲ್ಲಿ ತುರಿಕೆ ಬರುವುದು, ಕೈ ಕಾಲು ನೋವು ಬರುವಂತಹದ್ದು, ಶಾಲೆ ಪ್ರಾರ್ಥನೆ ಸಮಯದಲ್ಲಿ ತಲೆ ಚಕ್ಕರ​ ಬರುವಂತಹ ಸಮಸ್ಯೆಗಳು ಕಾಣಿಸುತ್ತವೆ. ಕಡಿಮೆ ನೀರು ಕುಡಿಯುವುದರಿಂದ ತಲೆ ನೋವು, ಜ್ವರ, ವಾಂತಿ, ಸುಸ್ತು ಕಾಣಿಸಿಕೊಳ್ಳುತ್ತದೆ. ತಾಪಮಾನ ಹೆಚ್ಚಾದಂತಹ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು." ಎಂದು ಸಲಹೆ ನೀಡಿದರು.

ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜ್ ಮಾತನಾಡಿ, "ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಎಲ್ಲ ಕಡೆ ತಾಪಮಾನ ಹೆಚ್ಚಾಗಿದೆ. ಅದರಲ್ಲೂ ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ. ಈ ಬಿಸಿಲಿನ ಬೇಗೆಗೆ ನಾವು ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಾವು, ನಮ್ಮ ಇಲಾಖೆಯಿಂದ ಜನ ಸಾಮಾನ್ಯರಿಗೆ ಕೆಲವು ಮಾಹಿತಿ ನೀಡಲು ತಿಳಿಸಿದ್ದೇವೆ. 11 ಗಂಟೆ ನಂತರ ಬಿಸಿಲಿಗೆ ಹೋದಾಗ ಆಗುವಂತಹ ತೊಂದರೆಗಳನ್ನು ತಡೆಗಟ್ಟಲು, ಹೊರಗಡೆ ಇರುವಂತಹ ಕೆಲಸಗಳನ್ನು ಆದಷ್ಟು ಬೆಳಗ್ಗಿನ ಸಮಯದಲ್ಲಿ ಮುಗಿಸಿಕೊಳ್ಳಬೇಕು. ಸಾಮಾನ್ಯವಾಗಿ ಹೈಡ್ರೇಷನ್​ ಕಾಪಾಡಿಕೊಳ್ಳಬೇಕು. ತಾಪಮಾನ ಹೆಚ್ಚಳದಿಂದ, ಡೈಹೈಡ್ರೇಷನ್​ ಆಗಿ, ಕೆಲವರಿಗೆ ಹೀಟ್​ ಸ್ಟ್ರೋಕ್​ ಆಗಬಹುದು. ಹಾಗಾಗಿ ಸಾಯಂಕಾಲ 4 ಗಂಟೆ ಮೇಲೆ ಹೊರಗಿನ ಕೆಲಸಗಳನ್ನು ಮಾಡಿ. ಹಾಗೂ ಒಂದುವೇಳೆ ಬಿಸಿಲಿನಲ್ಲಿ ಕೆಲಸ ಮಾಡುವಂತಹ ಅನಿವಾರ್ಯತೆ ಇದ್ದಲ್ಲಿ, ಅಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ಉತ್ತಮ. ಬಿಸಿಲಿಗೆ ಬರಿಗಾಲಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಿ. ಆದಷ್ಟು ತೆಳುವಾದ ಬಟ್ಟೆಗಳನ್ನು ಧರಿಸಿ, ನೀರಿನ ಅಂಶವಿರುವಂತಹ ಹಣ್ಣು, ತರಕಾರಿಗಳನ್ನು ಸೇವಿಸಿ" ಎಂದು ತಿಳಿಸಿದರು.

ಇದನ್ನೂ ಓದಿ: ಹೆಚ್ಚುತ್ತಿರುವ ಬಿಸಿಲು: ದಕ್ಷಿಣಕನ್ನಡ ಜಿಲ್ಲೆಯ ಡ್ಯಾಂಗಳಲ್ಲಿ ಇಳಿಕೆಯಾಗುತ್ತಿದೆ ನೀರು - Water is decreasing in dams

Last Updated : Mar 30, 2024, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.