ನವದೆಹಲಿ: ಬಾಲ್ಯದಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಿ, ಈ ಸ್ಥೂಲಕಾಯವೂ ಅವಧಿ ಪೂರ್ವ ಪ್ರೌಢವಸ್ಥೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವ ಜೀನ್ (ವಂಶವಾಹಿ) ಅನ್ನು ಅಂತಾರಾಷ್ಟ್ರೀಯ ತಂಡ ಪತ್ತೆ ಮಾಡಿದೆ.
ಕೇಂಬ್ರಿಡ್ಜ್ ಯುನಿವರ್ಸಿಟಿ ನೇತೃತ್ವದ ತಂಡ ಇದಕ್ಕಾಗಿ ಕೊರಿಯಾಮ ಜಪಾನ್, ಚೀನಾ, ಉತ್ತರ ಅಮೆರಿಕ ಮತ್ತು ಯುರೋಪ್ನಲ್ಲಿ 8,00,000 ಮಹಿಳೆಯರಲ್ಲಿ ಡಿಎನ್ಎ ಪರೀಕ್ಷೆ ನಡೆಸಿದೆ. ಈ ಅಧ್ಯಯನದ ಫಲಿತಾಂಶವನ್ನು ಜರ್ನಲ್ ನೇಚರ್ ಜೆನೆಟಿಕ್ಸ್ನಲ್ಲಿ ಪ್ರಕಟಿಸಲಾಗಿದೆ. ಈ ವೇಳೆ, ಡಿಎನ್ಎಯಲ್ಲಿ ಸಣ್ಣ ಬದಲಾವಣೆ ಮಾಡುವ 1 ಸಾವಿರ ವಿಧಗಳನ್ನು ಪತ್ತೆ ಮಾಡಿದ್ದಾರೆ. ಇದು ಮೊದಲ ಋತುಚಕ್ರದ ವಯಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮೊದಲ ಬಾರಿಗೆ ಸುಮಾರು 600 ತಳಿಗಳನ್ನು ಗಮಿಸಲಾಗಿದೆ ಎಂದು ತಂಡ ತಿಳಿಸಿದೆ.
ಸಾಮಾನ್ಯವಾಗಿ ಬಾಲಕಿಯರಲ್ಲಿ 10 ರಿಂದ 15 ವರ್ಷದೊಳಗೆ ಪ್ರೌಢವಸ್ಥೆ ಪ್ರಾರಂಭವಾಗುತ್ತದೆ. ಆದರೆ, ಕಳೆದೊಂದು ದಶಕದಿಂದ ಇದು ಅಕಾಲಿಕ ಅಥವಾ ಅವಧಿಪೂರ್ವವಾಗಿ ಪ್ರೌಢವಸ್ಥೆಗೆ ಬಾಲಕಿಯರು ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅಧ್ಯಯನ ಪತ್ತೆ ಮಾಡಿದಂತೆ ಈ ಆರಂಭಿಕ ಪ್ರೌಢವಸ್ಥೆಯ ಮೇಲೆ ಜೀನ್ ತಳಿಗಳ ಮೇಲೆ ಬಾಲ್ಯದಲ್ಲಿನ ಸ್ಥೂಲಕಾಯವೂ ಶೇ 45ರಷ್ಟು ಪರೋಕ್ಷ ಪರಿಣಾಮ ಹೊಂದಿದೆ.
ಅವಧಿ ಪೂರ್ವ ಪ್ರೌಢವಸ್ಥೆಗೆ ಕಾರಣವಾಗುವ ಈ ಜೀನ್ಗಳು ಶಿಶು ಮತ್ತು ಮಕ್ಕಳಲ್ಲಿ ಸ್ಥೂಲಕಾಯಕ್ಕೂ ಪ್ರೇರಕವಾಗಿದೆ. ಇದು ಮುಂದಿನ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ಅವಧಿ ಪೂರ್ವಕವಾಗಿ ಪ್ರೌಢವಸ್ಥೆಗೆ ಕಾಲಿಡುವುದರಿಂದ ಅವರಲ್ಲಿ ಸ್ಥೂಲಕಾಲ ಮತ್ತು ಅಧಿಕ ತೂಕಕ್ಕೂ ಕಾರಣವಾಗಬಹುದು ಎಂದು ಯುನಿವರ್ಸಿಟಿ ಮೆಡಿಕಲ್ ರಿಸರ್ಚ್ ಕೌನ್ಸಿಲ್ನ ಪ್ರೊ ಜಾನ್ ಪೆರ್ರಿ ತಿಳಿಸಿದ್ದಾರೆ.
ಕೆಲವು ಜನರಲ್ಲಿ ಹೊಂದಿರುವ ಈ ಅಪರೂಪದ ವಂಶವಾಹಿನಿಯನ್ನು ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ. ಇವು ಪ್ರೌಢವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ. ಇದೇ ವೇಳೆ, ಪ್ರೌಢಾವಸ್ಥೆಯ ಸಮಯವನ್ನು ಗಾಢವಾಗಿ ಪರಿಣಾಮ ಬೀರುವ ಆರು ಜೀನ್‌ಗಳನ್ನು ಗುರುತಿಸಲಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ ಕಥೆರಿನ್ ಕೆನಟಿಸ್ಟೊ ತಿಳಿಸಿದ್ದಾರೆ.
ಬಾಲಕಿಯರಲ್ಲಿ ಅವಧಿಪೂರ್ವ ಪ್ರೌಢವಸ್ಥೆಯ ಅವಧಿಗೆ ಕಾರಣವಾಗುವಂತಹ ಈ ವಂಶವಾಹಿನಿಗಳು ಬಾಲಕರಲ್ಲಿ ಪ್ರೌಢವಸ್ಥೆ ಮೇಲೆ ಅದೇ ರೀತಿ ಪರಿಣಾಮ ಬೀರಲಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 7-8 ವರ್ಷಕ್ಕೆಲ್ಲ ಋತುಮತಿಯಾಗುವ ಹೆಣ್ಣು ಮಕ್ಕಳು; ಕೋವಿಡ್ ಕೂಡ ಕಾರಣವಂತೆ