ನವದೆಹಲಿ: ಧೂಮಪಾನ ಮತ್ತು ಆಲ್ಕೋಹಾಲ್ಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಕಣ್ಣು ದೃಷ್ಟಿ ಕಳೆದುಕೊಳ್ಳುವ ಅಪಾಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾದ ಧೂಮಪಾನ ಮತ್ತು ಕುಡಿತವೂ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಇದು ಹೃದಯ ಮತ್ತು ಶ್ವಾಸಕೋಶದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಂಭವವಿದೆ. ಆದರೆ, ಇದು ಕಣ್ಣಿನ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಅಂದಾಜಿಸಲಾಗಿದೆ.
ಧೂಮಪಾನ ಮತ್ತು ಅತಿಯಾದ ಕುಡಿತದಿಂದ ಒಣ ಕಣ್ಣು, ಕ್ಯಾಟ್ರಕ್ಟ್ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ಗೆ ಕಾರಣವಾಗುತ್ತದೆ. ಇವು ಎಲ್ಲವೂ ಕಣ್ಣಿನ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಧೂಮಪಾನವೂ ಕಣ್ಣು ಸೇರಿದಂತೆ ಸಂಪೂರ್ಣ ದೇಹದಲ್ಲಿ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಎಂದು ಗುರುಗ್ರಾಮದ ಮರೆಂಗೊ ಏಷ್ಯಾ ಆಸ್ಪತ್ರೆಯ ನೇತ್ರತಜ್ಞ ಡಾ ದೀರಜ್ ಗುಪ್ತಾ ತಿಳಿಸಿದ್ದಾರೆ.
ಈ ಸಂಕೋಚನೆಯು ಮ್ಯಾಕ್ಯುಲರ್ ಡಿಜೆನರೇಶನ್ಗೆ ಮತ್ತು ಕ್ಯಾಟ್ರಾಕ್ಟ್ ಮೇಲೆ ಹೆಚ್ಚಿನ ಅಪಾಯ ಹೊಂದಿದೆ. ಇದಕ್ಕಿಂತ ಹೆಚ್ಚಾಗಿ ಧೂಮಪಾನವೂ ಕಣ್ಣಿನಲ್ಲಿ ಬ್ಲಾಕೇಜ್ಗೆ ಕಾರಣವಾಗುತ್ತದೆ. ಇದು ಅನೇಕ ದೃಷ್ಟಿ ದೋಷ ಅಥವಾ ಕುರುಡುತನಕ್ಕೆ ಕೂಡ ಕಾರಣವಾಗಬಹುದು.
ಧೂಮಪಾನವೂ ಡಯಾಬೆಟಿಕ್ ರೆಟಿನೊಪತಿ ಮತ್ತು ಮಲೆಕ್ಯೂಲರ್ ಡಿಜೆನರೇಷನ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಕಣ್ಣಿಗೆ ಕಣ್ಣಿಗೆ ರಕ್ತದ ಹರಿವು ಕಡಿಮೆ ಮಾಡುತ್ತದೆ. ಇದು ಕಣ್ಣಿನ ದೃಷ್ಟಿಗೆ ಸಮಸ್ಯೆ ಆಗುತ್ತದೆ ಎಂದು ಸೆಂಟರ್ ಫಾರ್ ಸೈಟ್ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಮಹಿಪಾಲ್ ಸಿಂಗ್ ಸಚ್ದೇವ್ ತಿಳಿಸಿದ್ದಾರೆ.
ಮತ್ತೊಂದು ಕಡೆ, ಆಲ್ಕೋಹಾಲ್ ಸೇವನೆ ಆಪ್ಟಿಕ್ ನರವನ್ನು ಹಾನಿ ಮಾಡುತ್ತದೆ. ಇದು ಕಣ್ಣಿನಿಂದ ಮಿದುಳಿಗೆ ದೃಶ್ಯ ಮಾಹಿತಿ ವರ್ಗಾವಣೆಗೆ ನಿರ್ಣಾಯಕ ನರವಾಗಿದೆ. ನಿರಂತರ ಆಲ್ಕೋಹಾಲ್ ಸೇವನೆ ಈ ಆಪ್ಟಿಕ್ ನರದ ಮೇಲೆ ಕುಗ್ಗಿಸಿ, ಸಂಪೂರ್ಣ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ.
ಆಲ್ಕೋಹಾಲ್ ಸೇವನೆ ಡ್ರೈ ಐ ಸಿಂಡ್ರೋಮ್ ಅನ್ನು ಕೆಟ್ಟದಾಗಿಸುತ್ತದೆ. ಇದು ಗ್ಲುಕೋಮಾ ಉಲ್ವಣದ ಸಾಧ್ಯತೆನ್ನು ಹೆಚ್ಚು ಮಾಡುತ್ತದೆ. ಒಟ್ಟಾರೆ ಕಣ್ಣಿನ ಆರೋಗ್ಯ ನಿರ್ವಹಣೆ ಮಾಡಲು ಧೂಮಪಾನ ಮತ್ತು ಮಧ್ಯಪಾನದಿಂದ ದೂರ ಇರುವುದು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.
ಅಲ್ಲದೇ ಕಣ್ಣಿನ ಒತ್ತಡವನ್ನು ಅರಿಯಲು ನಿಯಮಿತ ಪರೀಕ್ಷೆಗೆ ಒಳಗಾಗುವುದು ಅವಶ್ಯ. ಈ ಮೂಲಕ ಕಣ್ಣಿನ ಸಮಸ್ಯೆಯನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಿ, ಉತ್ತಮ ಚಿಕಿತ್ಸೆ ನೀಡಬಹುದಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಿಷಪೂರಿತ ಮದ್ಯ ಸೇವಿಸಿ ನಾಲ್ವರ ಸಾವು; ಇಬ್ಬರು ಅಸ್ವಸ್ಥ