ETV Bharat / health

ನಿಮ್ಮ ಮಕ್ಕಳು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ? ಹಾಗಾದರೆ ವಯಸ್ಸಿಗೆ ಬಂದ ಮೇಲೆ ಮಾನಸಿಕ ಸಮಸ್ಯೆಗೆ ಒಳಗಾಗಬಹುದು! - sleep deprivation from an early age

author img

By ETV Bharat Karnataka Team

Published : May 9, 2024, 4:13 PM IST

ಮಕ್ಕಳು ತಮ್ಮ ವಿವಿಧ ಹಂತದ ಬಾಲ್ಯದಲ್ಲಿ ನಿದ್ದೆಯ ಸಮಸ್ಯೆ ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ, ಯಾವಾಗ ಈ ಕುರಿತು ಸಹಾಯವನ್ನು ಪಡೆಯಬೇಕು ಎಂಬ ಕುರಿತು ತಿಳಿಯುವುದು ಕೂಡಾ ಈಗಿನ ಅಗತ್ಯವಾಗಿದೆ.

sleep-deprivation-from-an-early-age-may-be-more-likely-to-have-psychosis-in-their-early-adult-age
sleep-deprivation-from-an-early-age-may-be-more-likely-to-have-psychosis-in-their-early-adult-age (File photo ETV Bharat)

ಬರ್ಮಿಂಗ್​​ಹ್ಯಾಮ್​: ದೀರ್ಘಾವಧಿಯ ನಿದ್ದೆಯ ಕೊರತೆಯಿಂದ ಬಳಲುವ ಮಕ್ಕಳು ತಮ್ಮ ವಯಸ್ಕ ವಯೋಮಾನ ಮಾನಸಿಕ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

ಬರ್ಮಿಂಗ್​ಹ್ಯಾಮ್​ ಯುನಿವರ್ಸಿಟಿಯ ಸಂಶೋಧಕರು ಆರು ತಿಂಗಳಿನಿಂದ 7 ವರ್ಷದ ಮಗುವಿನವರೆಗೆ ಮಕ್ಕಳ ರಾತ್ರಿ ನಿದ್ದೆಯ ಅವಧಿಯ ಕುರಿತು ದತ್ತಾಂಶಗಳನ್ನು ಪಡೆದು ಈ ವಿಶ್ಲೇಷಣೆ ನಡೆಸಿದ್ದಾರೆ. ಈ ಸಮಯದಲ್ಲಿ ಮಕ್ಕಳು ನಿಯಮಿತವಾಗಿ ಒಂದು ಗಂಟೆ ತಡವಾಗಿ ಮಲಗಿದರೂ, ವಯಸ್ಕರಾದ ಬಳಿಕ ಮನರೋಗ ಅಭಿವೃದ್ಧಿಯಾಗುವ ಅಪಾಯ ನಾಲ್ಕು ಪಟ್ಟು ಹೆಚ್ಚಳವಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಈ ಹಿಂದಿನ ಅಧ್ಯಯನದಲ್ಲಿನ ನಿದ್ದೆ ಸಮಸ್ಯೆ ಮತ್ತು ನಿರ್ದಿಷ್ಟ ಸಮಯದ ಬಿಂದುವಲ್ಲಿ ಮನೋರೋಗ ಅಭಿವೃದ್ಧಿ ನಡುವಿನ ಸಂಬಂಧವನ್ನು ಗಮನಿಸಲಾಗಿದೆ. ನಿಯಮಿತ ನಿದ್ದೆಯ ಕೊರತೆಯು ಮನೋರೋಗ ಸಮಸ್ಯೆ ಉಲ್ಬಣವಾಗಲು ಕಾರಣವಾಗುವ ಕುರಿತು ಬಲವಾದ ಅಂದಾಜು ಮಾಡಲಾಗಿದೆ. ಇಂತಹ ಅಂದಾಜು ಮಾಡಿದ ಮೊದಲ ಅಧ್ಯಯನ ಕೂಡಾ ಇದಾಗಿದೆ.

ಮಕ್ಕಳು ತಮ್ಮ ವಿವಿಧ ಹಂತದ ಬಾಲ್ಯದಲ್ಲಿ ನಿದ್ರೆಯ ಸಮಸ್ಯೆ ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ, ಯಾವಾಗ ಈ ಕುರಿತು ಸಹಾಯವನ್ನು ಪಡೆಯಬೇಕು ಎಂಬ ಕುರಿತು ತಿಳಿಯುವುದು ಅಗತ್ಯವಾಗಿದೆ. ಕೆಲವು ಬಾರಿ ಈ ನಿದ್ದೆಯ ಸಮಸ್ಯೆ ನಿರಂತರ ಮತ್ತು ದೀರ್ಘಾವಧಿ ಸಮಸ್ಯೆ ಆಗುತ್ತದೆ. ಈ ಸಂದರ್ಭದಲ್ಲಿ ನಾವು ಬಾಲ್ಯದಲ್ಲಿನ ಮನೋವೈಜ್ಞಾನಿಕ ಅಸ್ವಸ್ಥತೆಯೊಂದಿಗೆ ಸಂಬಂಧವನ್ನು ಕಾಣಬಹುದು ಎಂದು ಅಧ್ಯಯನದ ಪ್ರಮುಖ ಲೇಖಕರಾದ ಡಾ ಇಸ್ಬೆಲಾ ಮೊರೇಲ್ಸ್-ಮುನೋಜ್ ತಿಳಿಸಿದ್ದಾರೆ.

ಖುಷಿ ವಿಚಾರ ಎಂದರೆ, ಈ ನಿದ್ದೆಯ ಮಾದರಿ ಮತ್ತು ನಡವಳಿಕೆಯನ್ನು ನಾವು ಸುಧಾರಿಸಲು ಸಾಧ್ಯ ಎಂಬುದಾಗಿದೆ. ಅನೇಕ ಬಾರಿ ನಿದ್ರೆಯ ಕೊರತೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡುವುದು ಮತ್ತು ಪೋಷಕರು ಈ ಕುರಿತು ಗಮನಹರಿಸುವ ಮೂಲಕ ಸಮಸ್ಯೆ ನಿವಾರಣೆ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಅಧ್ಯಯನವನ್ನು ಜಾಮಾ ಸೈಕಿಯಾಟ್ರಿಕ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನಕ್ಕಾಗಿ 6 ತಿಂಗಳಿನಿಂದ 7 ವರ್ಷದ 12, 394 ಮಕ್ಕಳನ್ನು ಮತ್ತು 24 ವರ್ಷದ 3,889 ಜನರನ್ನು ಭಾಗಿಯಾಗಿಸಲಾಗಿದೆ.

ಬಾಲ್ಯದಲ್ಲಿನ ನಿದ್ದೆ ಕೊರತೆ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಈ ಅಧ್ಯಯನದಲ್ಲಿ ಮತ್ತೆ ಗನಿಸಲಾಗಿದೆ. ಬಾಲ್ಯದಲ್ಲಿನ ನಿದ್ರೆ ಮತ್ತು ಮಾನಸಿಕ ಆರೋಗ್ಯ ನಡುವಿನ ಇತರ ಅಂಶಗಳ ಸಂಬಂಧವನ್ನು ಇದರೊಂದಿಗೆ ಸಾಬೀತಾಗಿಲ್ಲ. ಈ ಕುರಿತು ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ತಂಡ ತಿಳಿಸಿದೆ.

ಯುವ ಜನತೆಯ ಮಾನಸಿಕ ಅಸ್ವಸ್ಥತೆಯನ್ನ ಸಹಾಯಕ್ಕಾಗಿ ಆರಂಭಿಕ ಹಂತದಲ್ಲೇ ಮಧ್ಯ ಪ್ರವೇಶ ಮಾಡುವುದು ಅತ್ಯಗತ್ಯವಾಗಿದೆ. ಜೊತೆಗೆ ಉತ್ತಮ ನಿದ್ರೆಯ ಶುದ್ಧತೆಯ ಪಾತ್ರವೂ ವ್ಯಕ್ತಿಯ ಸಾಕಾರಾತ್ಮಕ ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಇದು ಈ ಪ್ರಕ್ರಿಯೆಯ ಭಾಗ ಎಂದು ಅರ್ಥೈಸಿಕೊಳ್ಳಬೇಕಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಪೋಷಕರೇ ಎಚ್ಚರ: ಮಕ್ಕಳು ಶಾಲೆಗೆ ಚಕ್ಕರ್​ ಹೊಡೆಯಲು ಕಾರಣವಾಗಬಹುದು ಈ ಮೊಬೈಲ್​ ಗೀಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.